ನಿವೇಶನ ರಹಿತ ಬಡವರಿಗೆ 10000 ನಿವೇಶನಗಳನ್ನು ನೀಡುವ ಜವಾಬ್ದಾರಿ ನನ್ನದು – ವಿನಯ್ ಕುಮಾರ್ ಸೊರಕೆ

Spread the love

ನಿವೇಶನ ರಹಿತ ಬಡವರಿಗೆ 10000 ನಿವೇಶನಗಳನ್ನು ನೀಡುವ ಜವಾಬ್ದಾರಿ ನನ್ನದು – ವಿನಯ್ ಕುಮಾರ್ ಸೊರಕೆ

ಉಡುಪಿ: ಕಾಪು ಕ್ಷೇತ್ರದಾದ್ಯಂತ ನಿವೇಶನ ರಹಿತ ಬಡವರಿಗೆ 10000 ನಿವೇಶನಗಳನ್ನು ನೀಡುವುದು, ಸರಕಾರಿ ಜಾಗದಲ್ಲಿ ವಾಸಿಸುತ್ತಿರುವ ಎಲ್ಲಾ ಜನರಿಗೂ ಹಕ್ಕುಪತ್ರ ವಿತರಿಸುವುದು ನನ್ನ ಪ್ರಮುಖ ಆದ್ಯತೆಯಾಗಿದೆ ಎಂದು ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಹೇಳಿದರು.

ಅವರು ಭಾನುವಾರ ಕ್ಷೇತ್ರದ ಚುನಾವಣಾ ಪ್ರಣಾಳಿಕೆ ನಮ್ಮ ಕನಸಿನ ಕಾಪು ಭಾನುವಾರ ರಾಜೀವ ಭವನದಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.

ಕಾಪು ವಿಧಾನಸಭಾ ಕ್ಷೇತ್ರದ ದಕ್ಷಿಣದ ಗಡಿಭಾಗ ಹೆಜಮಾಡಿಯಿಂದ ಉತ್ತರದ ಕುಕ್ಕೆಹಳ್ಳಿವರೆಗಿನ ಸಮಗ್ರ ಅಭಿವೃದ್ಧಿಯ ಚಿಂತನೆಯೊಂದಿಗೆ ಸುಂದರ-ಸಮೃದ್ಧ-ಸ್ವಚ್ಛ ಭ್ರಷ್ಟಾಚಾರ ರಹಿತ ಅಭಿವೃದ್ಧಿ ನನ್ನ ಮೂಲ ಧೈಯವಾಗಿದೆ

ನಿವೇಶನ ರಹಿತರಿಗೆ ನಿವೇಶನ:
ಕಾಪು ಕ್ಷೇತ್ರದಾದ್ಯಂತ ನಿವೇಶನ ರಹಿತ ಬಡವರಿಗೆ 10,000 ನಿವೇಶನಗಳನ್ನು ನೀಡುವ ಸಂಕಲ್ಪ ನನ್ನದಾಗಿದೆ. ಕಾಪು ಕ್ಷೇತ್ರದ ಸರಕಾರಿ ಜಾಗದಲ್ಲಿ ವಾಸಿಸುತ್ತಿರುವ ಎಲ್ಲಾ ಜನರಿಗೂ ಹಕ್ಕುಪತ್ರ ವಿತರಿಸುವ ಕ್ರಮ ಕೈಗೊಳ್ಳವುದು.

ಶೈಕ್ಷಣಿಕ ಅಭಿವೃದ್ಧಿ
ಕಾಪು ಕ್ಷೇತ್ರದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದೊಂದಿಗೆ, ಆರ್ಥಿಕವಾಗಿ ಹಿಂದುಳಿದ ಜನಾಂಗದ ಶೈಕ್ಷಣಿಕ ಅಭಿವೃದ್ಧಿಗಾಗಿ ಸರಕಾರದಿಂದ ಕೆಜಿಯಿಂದ ಐಟಿಯವರೆಗೆ ಎಲ್ಲಾ ಸಂಸ್ಥೆಗಳು, ಉನ್ನತ ಶಿಕ್ಷಣ ಕೇಂದ್ರ, ಪಾಲಿಟೆಕ್ನಿಕ್, ಐ.ಟಿ.ಐ. ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜು ಸ್ಥಾಪನೆ, ಸರಕಾರಿ ವಸತಿ ಶಾಲೆಗಳ ಮತ್ತು ಆಂಗ್ಲ ಮಾಧ್ಯಮ ಶಾಲೆಗಳ ನಿರ್ಮಾಣ ಗುರಿ ಹೊಂದಲಾಗಿದೆ

ಪ್ರವಾಸೋದ್ಯಮಕ್ಕೆ ಒತ್ತು: ಟೂರಿಸಂ ಪಾರ್ಕ್ ನಿರ್ಮಾಣ, ಕಾಪು ಕ್ಷೇತ್ರ ಕರಾವಳಿ ಭಾಗವನ್ನು ಹೊಂದಿಕೊಂಡಿರುವ ವಿಫುಲವಾದ ಪ್ರವಾಸೋದ್ಯಮ ಅವಕಾಶವಿರುವ ಕ್ಷೇತ್ರವಾಗಿದೆ. ಹೆಜಮಾಡಿಯಿಂದ ಮಲ್ಪೆಯ ಸಮುದ್ರ ಕಿನಾರೆಗೆ ನೇರ ವಿಶಾಲ ಸಂಪರ್ಕ ರಸ್ತೆ ಅಭಿವೃದ್ಧಿ, ಶಾಶ್ವತ ತಡೆಗೋಡೆ ನಿರ್ಮಾಣ, ಕಾಪು ಬೀಚ್ ಅಭಿವೃದ್ಧಿಯೊಂದಿಗೆ ‘ಲೈಟ್ ಹೌಸ್’ನ್ನು ಅಂತರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿಸುವ ಯೋಜನೆ. ಪಡುಬಿದ್ರಿಯ ಬ್ಲೂಫ್ಲಾಗ್ ಬೀಟ್ ಅಭಿವೃದ್ಧಿ, ಮಟ್ಟು ಬೀಟ್, ಉದ್ಯಾವರ ಬೀಚ್ ಅಭಿವೃದ್ಧಿಯೊಂದಿಗೆ ಟೂರಿಸಂ ಪಾರ್ಕ್ ಹಾಗೂ ಕಾಪುವನ್ನು ‘ಟೆಂಪಲ್ ಸಿಟಿ’ಯನ್ನಾಗಿಸುವ ಯೋಚನೆ, ರಾಷ್ಟ್ರಕ್ಕೆ ಮಾದರಿಯಾಗಿ ಕಾಪು ಹೊಸ ಮಾರಿಗುಡಿ ಜೀರ್ಣೋದ್ದಾರಕ್ಕೆ ಹೊಸ ರೂಪ ನೀಡಲಾಗವುದು. ಮಧ್ಯಕ್ಷೇತ್ರ ಕುಂಜಾರುಗಿರಿಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ, ಅಷ್ಟ ಮಠದ ಮೂಲ ದಂಡತೀರ್ಥ ಕೆರೆಯನ್ನು ಆಕರ್ಷಣೀಯವಾಗಿ ಅಭಿವೃದ್ಧಿಗೊಳಿಸುವುದರೊಂದಿಗೆ ಕಾವುದನ್ನು ಪ್ರವಾಸಿ ಕೇಂದ್ರವನ್ನಾಗಿಸುವ ಸಂಕಲ್ಪ ಮಾಡಲಾಗಿದೆ.

ಮನೆ ರಹಿತರಿಗೆ ಮನೆ ನಿರ್ಮಾಣ: ಕಾಪು ಕ್ಷೇತ್ರದಾದ್ಯಂತ ನಿವೇಶನ ನೀಡುವುದರೊಂದಿಗೆ ಮನೆ ನಿರ್ಮಿಸುವವರಿಗೆ ಸರಕಾರದಿಂದ ಇಂದಿರಾ ಆವಾಸ್ ಮನೆ ನಿರ್ಮಾಣ, ಬಡವರಿಗೆ ಮನೆ ರಿಪೇರಿಗೆ ಸಹಾಯಧನ ನೀಡಲಾಗುವುದು

ಮನೆ-ಮನೆಗೆ ಶುದ್ದ ಕುಡಿಯುವ ನೀರಿಗಾಗಿ ಶುದ್ದಗಂಗಾ ಯೋಜನೆ

ಕಾಪು ಕ್ಷೇತ್ರದ ಎಲ್ಲಾ ಮತದಾರರ ಬಂಧುಗಳ ಮನೆಗಳಿಗೆ ಶುದ್ಧ ನಿರಂತರ ಕುಡಿಯುವ ನೀರು ಸರಬರಾಜು ಯೋಜನೆಗೆ ಮರು ಚಾಲನೆ ನೀಡಲಾಗುವುದು. ಹೆಜಮಾಡಿ ಶಾಂಭವಿ ನದಿ, ಕುರ್ಕಾಲುವಿನ ಪಾಪನಾಶಿನಿ ನದಿ, ಬೈರಂಪಳ್ಳಿಯ ಸ್ವರ್ಣ ನದಿಯಿಂದ ನೀರೆತ್ತಿ ಶುದ್ದೀಕರಣಗೊಳಿಸಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಮನೆ-ಮನೆಗೆ ನೀರು ಒದಗಿಸುವುದು, ಅಲ್ಲದೆ ವಾರಾಹಿ ಯೋಜನೆಯ ಮೂಲಕ ಕೃಷಿಕರಿಗೆ ನೀರು ಒದಗಿಸುವ ಯೋಜನೆಗೆ ಚಾಲನೆ ನೀಡಲಾಗುವುದು.

ಕೌಶಲ್ಯಾಭಿವೃದ್ಧಿ ಕೇಂದ್ರ
ಮಹಿಳಾ ಅರ್ಥಿಕ ಸಬಲೀಕರಣಕ್ಕಾಗಿ ಸ್ವಂತ ಉದ್ದಿಮೆ ಸ್ಥಾಪಿಸಲು ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪಿಸಲಾಗುವುದು, ಮಹಿಳಾ ಸ್ವಸಹಾಯ ಸಂಘಗಳಿಗೆ ಉದ್ಯೋಗ ಸೃಷ್ಟಿಸುವ ಯೋಜನೆ, ಸ್ಥಳೀಯ ಬೃಹತ್ ಉದ್ದಿಮೆಗಳಲ್ಲಿ ಸ್ಥಳೀಯರಿಗೆ 3% ದರದಲ್ಲಿ ಸಾಲ ವಿತರಣೆಗೆ ಕ್ರಮ, ಸ್ವಂತ ಉದ್ಯಮಕ್ಕೆ ಉತ್ತೇಜನ

ಯುವಕರಿಗೆ ಉದ್ಯೋಗ-ಉದ್ದಿಮೆ
ಕಾಪು ಕ್ಷೇತ್ರದ ನಿರುದ್ಯೋಗಿ ಯುವಕರಿಗೆ ಕಾಪುವಿನಲ್ಲಿಯೇ ಉದ್ಯೋಗ ನೀಡುವ ಸಂಕಲ್ಪ, ಸ್ವಂತ ಉದ್ದಿಮೆ ಸ್ಥಾಪಿಸಲು ಸಣ್ಣ ಕೈಗಾರಿಕಾ ಪಾರ್ಕ್ ನಿರ್ಮಾಣ,

ಅತ್ಯಾಧುನಿಕ ತಂತ್ರಜ್ಞಾನದ ಕಸವಿಲೇವಾರಿ ಘಟಕ ಸ್ಥಾಪನೆ:
ಕಾಪು ಕ್ಷೇತ್ರದ ಗ್ರಾಮ ಪಂಚಾಯತ್ಗಳು ಮತ್ತು ಕಾಪು ಪುರಸಭೆಗೆ ಕಸವಿಲೇವಾರಿಯು ದೊಡ್ಡ ಸವಾಲಾಗಿದೆ. ಎಲ್ಲೂರಿನಲ್ಲಿ 10 ಎಕ್ರೆ ಜಾಗದಲ್ಲಿ – ಸ್ಥಾಪಿಸಿರುವ ಕಸ ವಿಲೇವಾರಿ ಘಟಕವನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಪರಿಸರ ಸ್ನೇಹಿ ಯೋಜನೆ ಮೂಲಕ ಆಭಿವೃದ್ಧಿಪಡಿಸುವುದು. ಕಸ ವಿಲೇವಾರಿ ಘಟಕ ಸುತ್ತಲೂ ಉದ್ಯಾನವನ, ವಾಕಿಂಗ್ ಟ್ರ್ಯಾಕ್ ನಿರ್ಮಿಸುವುದು, ಇದೇ ಮಾದರಿಯಲ್ಲಿ 5 ಗ್ರಾಮ ಪಂಚಾಯತ್ಗಳಿಗೆ ಒಂದರಂತೆ ‘ಕಸವಿಲೇವಾರಿ ಘಟಕ ನಿರ್ಮಾಣದೊಂದಿಗೆ ಖಾಸಗಿ ಸಹಭಾಗಿತ್ವದಲ್ಲಿ ಕಸದಿಂದ ಗೊಬ್ಬರ-ಗ್ಯಾಸ್ ವಿದ್ಯುತ್ ಯೋಜನೆಗೆ ಉತ್ತೇಜನ ನೀಡುವುದು

ಬಹುಮಹಡಿ ವಸತಿ ಯೋಜನೆ: ಕಾಪು ಪುರಸಭಾ-ಪಡುಬಿದ್ರಿ-ಕಟಪಾಡಿ-ಶಿರ್ವ-ಪೆರ್ಡೂರು ಗ್ರಾಮಗಳಲ್ಲಿ ಬಹುಮಹಡಿ ವಸತಿ ಯೋಜನೆಯೊಂದಿಗೆ ದು ಡಿಯುವ ಕೈಗಳಿಗೆ ಭದ್ರತೆ ಒದಗಿಸುವ ಯೋಜನೆ, ಕಾಪು ಕ್ಷೇತ್ರದ ರಿಕ್ಷಾ-ಕಾರು-ಬಸ್ ಚಾಲಕರಿಗೆ ಮತ್ತು ಕೂಲಿ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಯೋಜನೆ

ಕ್ರೀಡಾಂಗಣಗಳ ನಿರ್ಮಾಣ:
ಕಾಪು ಪುರಸಭಾ ಸಹಿತ ವಿವಿಧ ಗ್ರಾಮ ಪಂಚಾಯತ್ಗಳಲ್ಲಿ ಆದ್ಯತೆ ಮೇರೆಗೆ ಅತ್ಯಾಧುನಿಕವಾದ ಹೊರ ಕ್ರೀಡಾಂಗಣ ಮತ್ತು ಒಳ ಕ್ರೀಡಾಂಗಣ ನಿರ್ಮಾಣದ ಮೂಲಕ ಯುವ ಕ್ರೀಡಾಳುಗಳಿಗೆ ಸ್ಪಂದಿಸುವ ಉದ್ದೇಶ ನನ್ನದಾಗಿದೆ. ಹೆಜಮಾಡಿ ಕ್ರೀಡಾಂಗಣವನ್ನು ಮೇಲ್ದರ್ಜೆಗೇರಿಸುವುದು.

ಆಸ್ಪತ್ರೆಗಳ ನಿರ್ಮಾಣ-ಆರೋಗ್ಯಕ್ಕೆ ಒತ್ತು:
ಕಾಪು ಪುರಸಭಾ ವ್ಯಾಪ್ತಿಯಲ್ಲಿ 100 ಬೆಡನ ಸುಸಜ್ಜಿತವಾದ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಆಸ್ಪತ್ರೆ ನಿರ್ಮಾಣ ನನ್ನ ಆದ್ಯತೆ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳ ನಿರ್ಮಾಣ ಕ್ಷೇತ್ರದ 4 ಕಡೆ ಪಶು ವೈದ್ಯಕೀಯ ಆಸ್ಪತ್ರೆಗಳ ನಿರ್ಮಾಣ

ಈಜುಕೊಳ ನಿರ್ಮಾಣ
ಕಾಪು ಕ್ಷೇತ್ರದಲ್ಲಿ ವಿಶಾಲವಾದ ಈಜುಕೊಳ ನಿರ್ಮಿಸುವ ಉದ್ದೇಶ ನನ್ನದು, ಕ್ಷೇತ್ರದಾದ್ಯಂತ ಕೆರೆಗಳನ್ನು ಅಭಿವೃದ್ಧಿಪಡಿಸವ ಯೋಜನೆಗೆ ಚಾಲನೆ

ರೈತ ಸಂಜೀವಿನಿ ಯೋಜನೆ:
ಕಾಪು ಕ್ಷೇತ್ರದ ರೈತಾಪಿ ವರ್ಗದ ಜನರ ಅನುಕೂಲತೆಗಾಗಿ ನೀರಾವರಿ ಯೋಜನೆಗಳ ಅನುಷ್ಠಾನ, ಕಿಂಡಿ ಅಣೆಕಟ್ಟುಗಳ ಹೂಳೆತ್ತುವ ಬೃಹತ್ ಯೋಜನೆ, ಸರಕಾರದಿಂದ ರೈತರಿಗೆ ಶೂನ್ಯ ಬಡ್ಡಿಯಲ್ಲಿ ಸಾಲ, ಕಾಪು ತಾಲೂಕು ವ್ಯವಸಾಯ ಉತ್ಪನ್ನ ಕೃಷಿ ನನ್ನ ಯೋಜನೆಯಾಗಿದೆ, ದನ-ಕುರಿ-ಆಡು-ಕೋಳಿ ಸಾಕಾಣಿಕಗಾಗಿ ಕೃಷಿಕರಿಗೆ ವಿಶೇಷ ಸಹಾಯಧನ ನೀಡುವ ಉದ್ದೇಶ ನನ್ನದು.

ಸಮುದಾಯ ಭವನ:
ವಿವಿಧ ಧರ್ಮ, ಜಾತಿಗಳ ಸಮುದಾಯ ಭವನ ನಿರ್ಮಾಣಕ್ಕೆ ಸಹಾಯಧನ, ಕಾಪು ಪುರಸಭಾ ವ್ಯಾಪ್ತಿಯಲ್ಲಿ ಸಭಾಭವನ ನಿರ್ಮಾಣ, ರಾಣಿ ಅಬ್ಬಕ್ಕ ಸಾಂಸ್ಕೃತಿಕ ಕಲಾಭವನ ನಿರ್ಮಾಣ ನನ್ನ ಗುರಿಯಾಗಿದೆ ಎಂದು ಸೊರಕೆ ಹೇಳಿದರು

ಮತ್ಸಾಶ್ರಮ ಯೋಜನೆ:
ಕಾಪು ಕ್ಷೇತ್ರದ ಮೀನುಗಾರರ ಡೀಸೆಲ್, ಸೀಮೆ ಎಣ್ಣೆ ಸಬ್ಸಿಡಿ ಹೆಚ್ಚಿಸುವುದರೊಂದಿಗೆ ಕಡಲು ಕೊರೆತಕ್ಕೆ ಶಾಶ್ವತ ತಡೆಗೋಡೆ ನಿರ್ಮಾಣ, ಮತ್ಸ್ಯಾಶ್ರಯ ಯೋಜನೆಗೆ ಚಾಲನೆ, ಹೆಜಮಾಡಿ ಬಂದರಿಗೆ ಕಾಯಕಲ್ಪ, ಕ್ಷೇತ್ರದಾದ್ಯಂತ ಹೈಟೆಕ್ ಮೀನು ಮಾರುಕಟ್ಟೆಗಳ ನಿರ್ಮಾಣ, ಎರ್ಮಾಳುವಿನಲ್ಲಿ ಜಟ್ಟಿ ನಿರ್ಮಾಣ, ಮತ್ಸ್ಯೋದ್ಯಮದೊಂದಿಗೆ ಪ್ರವಾಸೋದ್ಯಮ ಉತ್ತೇಜನ

ಧಾರ್ಮಿಕ ಕೇಂದ್ರ ಅಭಿವೃದ್ಧಿಗೆ ಒತ್ತು

ಕಾವ್ಯ ಕ್ಷೇತ್ರದಲ್ಲಿ ವಿವಿಧ ಧರ್ಮದ ಧಾರ್ಮಿಕ ಕೇಂದ್ರಗಳಾದ ಮಂದಿರ, ಮಸೀದಿ, ಚರ್ಚ್ಗಳ ಅಭಿವೃದ್ಧಿಗೆ ವಿಶೇಷ ಅನುದಾನಕ್ಕೆ ಉತ್ತೇಜನ ನೀಡಲಾಗುವುದು.

ದಲಿತ ಶ್ರೇಯಾಭಿವೃದ್ಧಿ ಯೋಜನೆ:
ಕಾಪು ಕ್ಷೇತ್ರದಲ್ಲಿ, ದಲಿತ-ಸಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ ಅಭಿವೃದ್ಧಿಗೆ ಹಲವಾರು ಯೋಜನೆಗಳೊಂದಿಗೆ ದಲಿತ ಕಾಲೋನಿಗಳ ಅಭಿವೃದ್ಧಿ, ಸಮುದಾಯ ಭವನಗಳ ನಿರ್ಮಾ, ಮೊರಾರ್ಜಿ ಶಾಲೆಗಳ ನಿರ್ಮಾಣ ನನ್ನ ಆಶಯವಾಗಿದೆ.

ಸಿಆರ್ ಝಡ್ ನಿಯಮ ಸಡಿಲಿಕೆ:
ಸಿ ಆರ್ ಝಡ್ ನಿಯಮದಿಂದ ಆಗುತ್ತಿರುವ ತೊಂದರೆಗಳನ್ನು ನಿಆವರಿಸಲು ನಿಯಮದ ತಿದ್ದುಪಡಿಗೆ ಪ್ರಯತ್ನ ಮಾಡಲಾಗುವುದು

ಸುಸಜ್ಜಿತ ಬಸ್ಸು ತಂಗುದಾಣ:

ಕಾಪು ನಗರವನ್ನು ಕೇಂದ್ರೀಕರಿಸಿ ಸಜ್ಜಿತ ಬಸ್ಸು ತಂಗುದಾಣ ನಿರ್ಮಾಣ, ಗ್ರಾಮೀಣ ಪ್ರದೇಶಗಳಿಗೆ ಸರಕಾರಿ ಬಸ್ಸು ಸೌಲಭ್ಯ ಒದಗಿಸುವುದು ತನ್ನ ಆದ್ಯತೆಯಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನವೀನ್‌ಚಂದ್ರ ಸುವರ್ಣ, ದೇವಿಪ್ರಸಾದ್ ಶೆಟ್ಟಿ, ಮಾಧವ ಆರ್. ಪಾಲನ್, ಪ್ರಶಾಂತ್ ಜತ್ತನ್ನ, ಶರ್ಪುದ್ದೀನ್ ಶೇಖ್, ಅಮೀರ್ ಕಾಪು, ದೇವರಾಜ್ ಕೋಟ್ಯಾನ್, ಸಂತೋಷ್ ಕುಲಾಲ್ ಉಪಸ್ಥಿತರಿದ್ದರು.


Spread the love