
Spread the love
ನೀಟ್ ಎಮ್.ಸಿ.ಎಚ್ ಪ್ರವೇಶ ಪರೀಕ್ಷೆಯಲ್ಲಿ ಕುಂದಾಪುರದ ಆತೀಶ್ ಬಿ ಶೆಟ್ಟಿ ಪ್ರಥಮ
ಕುಂದಾಪುರ: ಗುರುವಾರ ಪ್ರಕಟವಾದ ಅಖಿಲ ಭಾರತ ವೈದ್ಯಕೀಯ ವಿಶೇಷ ಅಧ್ಯಯನ (ಸೂಪರ್ ಸ್ಪೆಶಾಲಿಟಿ) ನೀಟ್ ಎಮ್.ಸಿ.ಎಚ್ ಪ್ರವೇಶ ಪರೀಕ್ಷೆಯಲ್ಲಿ ಕುಂದಾಪುರದ ಆತೀಶ್ ಬಿ ಶೆಟ್ಟಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಕುಂದಾಪುರದ ಚಿನ್ಮಯಿ ಆಸ್ಪತ್ರೆಯ ಹಿರಿಯ ಶಸ್ತೃ ಚಿಕಿತ್ಸಕ ತಜ್ಞ ಡಾ. ಬಾಲಕೃಷ್ಣ ಶೆಟ್ಟಿ ಹಾಗೂ ಕಂದಾವರ ಸುನೀತಾ ಶೆಟ್ಟಿ ದಂಪತಿಗಳ ಪುತ್ರರಾಗಿರುವ ಇವರು ಸಿಇಟಿ ಪ್ರವೇಶ ಪರೀಕ್ಷೆಯಲ್ಲಿ 13ನೇ ಸ್ಥಾನ ಪಡೆದುಕೊಂಡಿದ್ದರು.
ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸವನ್ನು ಪೂರೈಸಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪದವಿಯನ್ನು ಪಡೆದುಕೊಂಡಿದ್ದರು. ಬೆಂಗಳೂರಿನ ಬಿ ಎಮ್ ಸಿ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದ ಇವರು, ಆಗಸ್ಟ್ ನಲ್ಲಿ ನಡೆದ ನೀಟ್ ಪರೀಕ್ಷೆಯನ್ನು ಬರೆದಿದ್ದರು.
Spread the love