ನೀನಾಸಂ ಸತೀಶ್ ಸ್ವೀಪ್ ಯೂತ್ ಐಕಾನ್

Spread the love

ನೀನಾಸಂ ಸತೀಶ್ ಸ್ವೀಪ್ ಯೂತ್ ಐಕಾನ್

ಮಂಡ್ಯ: ಚುನಾವಣೆಯಲ್ಲಿ ಭಾಗವಹಿಸುವುದು ಪ್ರತಿಯೊಬ್ಬ ಮತದಾರನ ಕರ್ತವ್ಯವಾಗಿದೆ. ಹೀಗಿರುವಾಗ ಯುವ ಮತದಾರರಿಗೆ ಮತದಾನದ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದ್ದು ಮಂಡ್ಯ ಜಿಲ್ಲೆಗೆ ನಟ ನೀನಾಸಂ ಸತೀಶ್ ಯೂತ್ ಐಕಾನ್ ಆಗಿದ್ದಾರೆ.

ಮುಂಬರುವ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಸಂಬಂಧ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಮತದಾರರ ಪಾಲ್ಗೊಳ್ಳುವಿಕೆ(ಸ್ವೀಪ್) ಕಾರ್ಯಕ್ರಮದ ಅಡಿಯಲ್ಲಿ ಮಂಡ್ಯ ಜಿಲ್ಲೆಯ ಮತದಾರರಿಗೆ ಹಾಗೂ ಯುವ, ಭವಿಷ್ಯದ ಮತದಾರರಿಗೆ ಮತದಾನದ ಮಹತ್ವ ಹಾಗೂ ನೈತಿಕ ಮತದಾನ ಕುರಿತು ಜಾಗೃತಿ ಮೂಡಿಸಲು ಮಂಡ್ಯ ಜಿಲ್ಲಾ ಸ್ವೀಪ್ ಯೂತ್ ಐಕಾನ್ ಆಗಿ ಚಲನಚಿತ್ರ ನಟರಾದ ಬಿ.ಸತೀಶ್(ನೀನಾಸಂ ಸತೀಶ್) ಅವರನ್ನು ನೇಮಕ ಮಾಡಿ ಮುಖ್ಯಚುನಾಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮಖ್ಯಕಾರ್ಯನಿರ್ವಹಕ ಅಧಿಕಾರಿ ತಿಳಿಸಿದ್ದಾರೆ.


Spread the love

Leave a Reply

Please enter your comment!
Please enter your name here