ನೂತನ ಕೆಎಸ್.ಆರ್.ಟಿ.ಸಿ ನಿಲ್ದಾಣ ಸೂಕ್ತ ನಿರ್ವಹಣೆಗೆ ಆಗ್ರಹಿಸಿ ಮನವಿ

Spread the love

ನೂತನ ಕೆಎಸ್.ಆರ್.ಟಿ.ಸಿ ನಿಲ್ದಾಣ ಸೂಕ್ತ ನಿರ್ವಹಣೆಗೆ ಆಗ್ರಹಿಸಿ ಮನವಿ

ಉಡುಪಿ: ಜಿಲ್ಲೆಯ ಜನರ ಅನೂಕೂಲತೆಯ ದೃಷ್ಟಿಯಿಂದ ರೂ. 29.81 ಕೋಟಿ ವೆಚ್ಚದಲ್ಲಿ ನೂತನವಾಗಿ ಪ್ರಾರಂಭವಾಗಲಿರುವಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲೆಯ ಜನರ ಅನೂಕೂಲತೆಯ ದೃಷ್ಟಿಯಿಂದ ರೂ. 29.81 ಕೋಟಿ ವೆಚ್ಚದಲ್ಲಿ ನೂತನವಾಗಿ ಪ್ರಾರಂಭವಾಗಲಿರುವಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಜನರು ಅಜಾಕರೂಕತೆಯಿಂದ ಕಸ / ಇತ್ಯಾದಿ ತ್ಯಾಜವನ್ನು ಎಸೆಯುವುದನ್ನು ನಿರ್ಬಂಧಿಸಲು ಬಸ್ ನಿಲ್ದಾಣದಲ್ಲಿ ದಿನದ 24 ಗಂಟೆಯೂ( ಕನಿಷ್ಟ ಪಕ್ಷ ದಿನದ 12 ಗಂಟೆಯಾದರೂ ) ಕಾರ್ಯಾಚರಿಸಲು 02 ಗೃಹ ರಕ್ಷಕ ದಳದ ಸಿಬ್ಬಂದಿಗಳನ್ನು / 02 ಪ್ರಮಾಣಿಕ ಸ್ವಯಂ ಸೇವಕರನ್ನು ನಿಯೋಜಿಸುವಂತೆ ಕೋರಿ ಹಾಗೂ ಜನರು ಎಲ್ಲೆಂದರಲ್ಲಿ ತಿಂಡಿ – ತಿನಿಸುಗಳ ಪೊಟ್ಟಣವನ್ನು ಜನರು ಎಸೆಯದಂತೆ ನೋಡಿಕೊಳ್ಳಲು ಆ ಬಸ್ ನಿಲ್ದಾಣದ ಕಟ್ಟಡದಲ್ಲಿ ವ್ಯಾಪಾರ ನಡೆಸುವ ಅಂಗಡಿಗಳ ಮಾಲಕರಿಗೆ ಈ ಬಗ್ಗೆ ಜಾಗರೂಕತೆಯನ್ನು ಮೂಡಿಸಿ, ಅವರ ವ್ಯಾಪ್ತಿಯಲ್ಲಿ , ಆಯಾ ಅಂಗಡಿಗಳಿಂದ ಮಾರಾಟವಾಗುವ ತಿಂಡಿ- ತಿನಿಸುಗಳ ಪೊಟ್ಟಣಕ್ಕೆ ಸಂಬಂಧಿಸಿ ಆಯಾ ಅಂಗಡಿಗಳ ಮಾಲಕರನೇ ಜವಬ್ದಾರರನ್ನಾಗಿಮಾಡಿಸುವ ನಿಟ್ಟಿನಲ್ಲಿ ಆಮೂಲಕ ಜಿಲ್ಲೆಯಲ್ಲಿ ಕಾರ್ಯಾರಂಭವಾಗಲಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣವನ್ನು ಸಚ್ಚ, ಸುಂದರ, ಹಾಗೂ ರಾಜ್ಯದ ಇತರ ಜಿಲ್ಲೆಗಳ ಬಸ್ ( ಸರ್ಕಾರಿ ಹಾಗೂ ಖಾಸಗಿ ) ನಿಲ್ದಾಣಗಳಿಗೆ ಮಾದರಿಯಾಗಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.

ಜಿಲ್ಲೆಯ ನಾಗರೀಕರ ಪರವಾಗಿ ಕಾಲೇಜು ವಿದ್ಯಾರ್ಥಿಗಳಾದ ರಾಯನ್ ಫೆರ್ನಾಂಡಿಸ್, ರಾಘವೇಂದ್ರ ರಾವ್, ಪ್ರದೀಶ್ ಮತ್ತಿತ್ತರು ಮನವಿ ಸಲ್ಲಿಸಿದರು.


Spread the love

Leave a Reply