ನೂತನ ದಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಿಗೆ ಅಭಿನಂದನೆ

Spread the love

ನೂತನ ದಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಿಗೆ ಅಭಿನಂದನೆ

ಮಂಗಳೂರು: ಲುಕ್ಮಾನ್ ಬಂಟ್ವಾಳ ಅವರು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಗುರುವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಅಭಿನಂದನಾ ಸಮಾರಂಭ ನಡೆಯಿತು.

ಈ ವೇಳೆ ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಅವರು ಲುಕ್ಮಾನ್ ಬಂಟ್ವಾಳ ಅವರಿಗೆ ಶಾಲು ಹೊದಿಸಿ ಸನ್ಮಾನಿದರು.

ಕಾರ್ಯಕ್ರಮದಲ್ಲಿ ಮ.ನ.ಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್, ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಡಾ.ಶಕೀಲ್ ದೇರಳಕಟ್ಟೆ, ದ.ಕ. ಜಿಲ್ಲಾ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಶಾಹುಲ್ ಹಮೀದ್, ಕಾರ್ಪೊರೇಟರ್ ನವೀನ್ ಡಿಸೋಜಾ, ಸಿ.ಎಂ.ಮುಸ್ತಫಾ, ಚಿತ್ತರಂಜನ್ ಬೊಂಡೇಲಾ, ದಿನಕರ್ ಶೆಟ್ಟಿ, ನೀರಜ್ ಚಂದ್ರಪಾಲ್, ಆರೀಫ್ ಬಂದರ್, ಶೌಹಾನ್ ಎಸ್.ಕೆ., ಅನ್ವೀತ್ ಕಟೀಲ್ ಮತ್ತಿತರರು ಉಪಸ್ಥಿತರಿದ್ದರು.

ಯು.ಬಿ.ಸಲೀಂ ಸ್ವಾಗತಿಸಿದರು. ಮನ್ಸೂರ್ ಕುದ್ರೋಳಿ ವಂದಿಸಿದರು.


Spread the love