
ನೆಲೆ ಇಲ್ಲದೆ ಪರದಾಡುವ ಸಿದ್ದರಾಮಯ್ಯರಿಗೆ ಸಿದ್ದಾಂತ ಯಾಕೆ ಬೇಕು? – ಸುನೀಲ್ ಕುಮಾರ್
ಕಾರ್ಕಳ: ನೆಲೆ ಇಲ್ಲದೆ ಪರದಾಡುವ ನಾಯಕ ಸಿದ್ದರಾಮಯ್ಯನಿಗೆ ಯಾವಾಗ ಹಿಂದುತ್ವದ ಜ್ಞಾನ ಬರುತ್ತದೋ ಯಾವಾಗ ಇಸ್ಲಾಮಿಕರಣ ಪುಟಿದೇಳುತ್ತದೋ ಅವರೇ ಹೇಳಬೇಕು ಎಂದು ರಾಜ್ಯ ಇಂಧನ ಸಚಿವ ವಿ ಸುನೀಲ್ ಕುಮಾರ್ ಹೇಳಿದರು
ಅವರು ಕಾರ್ಕಳದ ಬೈಲೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಸಿದ್ದರಾಮಯ್ಯ ಒಂದೊಂದು ಭಾಷಣದಲ್ಲಿ ಒಂದೊಂದು ಮಾತಾಡ್ತಾರೆ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳು ರಾಷ್ಟ್ರೀಯತೆಯ ಪ್ರಯೋಗಶಾಲೆ. ಹಿಂದುತ್ವ ಅಂದ್ರೆ ರಾಷ್ಟ್ರೀಯತೆ ದೇಶದ ಸಂಸ್ಕೃತಿ ದೇಶ ಮೊದಲು ಎಂದು ಚಿಂತನೆ ಮಾಡುವ ಜಿಲ್ಲೆ ಇದಾಗಿದ್ದುಹಿರಿಯರು ನಡೆಸಿಕೊಂಡು ಬಂದದ್ದನ್ನು ಯುವ ಪೀಳಿಗೆ ಮುಂದುವರಿಸಿದೆ ಎಂದರು.
ದೇಶ ಮೊದಲು ಎನ್ನುವ ಜಿಲ್ಲೆಯ ಜನರ ಭಾವನೆಗೆ ಸಿದ್ದರಾಮಯ್ಯ ಕೊಡುತ್ತಿಲ್ಲ ಆದ್ದರಿಂದ ಸಿದ್ದರಾಮಯ್ಯನ ಆಲೋಚನೆಗೆ ಈ ಜಿಲ್ಲೆಯ ಜನ ಹೊಣೆಯಲ್ಲ. ಸಿದ್ದರಾಮಯ್ಯ ನೆಲೆ ಇಲ್ಲದೆ ಪರದಾಡುವ ನಾಯಕ ವರುಣ ಚಾಮುಂಡೇಶ್ವರಿ ಬಾದಾಮಿ ಕೋಲಾರದಲ್ಲಿ ಪರದಾಡುತ್ತಿದ್ದಾರೆ ಪರದಾಡುವ ನಾಯಕರಿಗೆ ಸಿದ್ಧಾಂತ ಯಾಕೆ ಬೇಕೋ ಗೊತ್ತಿಲ್ಲ ಎಂದರು.