ನೈಸರ್ಗಿಕ ಚಿಕಿತ್ಸೆ ಮತ್ತು ಯೋಗ: ಆರೋಗ್ಯದ ಸಹಜ ಮಾರ್ಗ
ಅಧುನಿಕ ಯುಗದ ಜೀವನ ಶೈಲಿಯು ರೋಗಗಳಿಗೆ ಮರಾಮಾರಿ ಎಂಬುದರಲ್ಲಿ ಸಂಶಯವಿಲ್ಲ. ಇದಕೆಲ್ಲ ಕಾರಣ ಕುಸಿಯುತ್ತಿರುವ ದೈಹಿಕ ಚಟುವಟಿಕೆಗಳು, ಅಸಮತೋಲನ ಆಹಾರ ಪದ್ಧತಿ, ತಿಂದ ಆಹಾರವನ್ನು ಸರಿಯಾಗಿ ಜೀರ್ಣಸಿಕೊಳ್ಳದೇ ಇರುವುದು , ಒತ್ತಡ , ಸರಿಯಾಗಿ ನಿದ್ದೆ ಮಾಡದೇ ಇರುವುದು. ಇಂತಹ ಹತ್ತು ಹಲವು ಕಾರಣಗಳಿಂದಾಗಿ ಮಧುಮೇಹ, ಹೃದಯ ಸಂಬಂಧಿ ರೋಗಗಳು, ಅತಿಯಾದ ದೇಹ ತೂಕ, ಬಂಜೆತನ, ಅಧಿಕರಕ್ತದೊತ್ತಡ, ಮುಂತಾದ ಕಾಯಿಲೆಗಳಿಗೆ ಒಳಗಾಗುವ ಉದಾಹರಣೆಗಳಿವೆ.

ರೋಗಭರಿತ ದೇಹವನ್ನು ರೋಗಮುಕ್ತರಾಗಿಸಲು ಸಾಧ್ಯವೇ?
ಖಂಡಿತವಾಗಿಯು ಸಾಧ್ಯವಿದೆ. ಮೊದಲನೆಯದಾಗಿ ಜೀವನ ಶೈಲಿಯನ್ನು ಬದಲಾಯಿಸುವುದು, ಮತ್ತು ಸಮಗ್ರ ಚಿಕಿತ್ಸಾ ವಿಧಾನಗಳನ್ನು ಅಲವಡಿಸಿಕೊಳ್ಳುವ ಮೂಲಕ ಇವುಗಳನ್ನು ತಡೆಯಬಹುದು. ಈ ದ್ರಷ್ಟಿಯಿಂದ ಪ್ರಕೃತಿ ಚಿಕಿತ್ಸಾ ಪದ್ದತಿ ಮತ್ತು ಯೋಗವು ಮಹತ್ವದ ಪಾತ್ರವಹಿಸುವುದು.
ಪುರಾತನ ಕಾಲದಲ್ಲಿ ಸಕಲ ರೋಗಗಳಿಗೂ ಪ್ರಕೃತಿಯಿಂದ ದೊರೆಯುವ ಪಂಚಭೂತಗಳನ್ನು (ಗಾಳಿ, ನೀರು , ಆಕಾಶ, ಅಗ್ನಿ, ಪೃಥ್ವಿ ) ಬಳಸಿ ರೋಗ ಮುಕ್ತರಾಗುತ್ತಿದ್ಧರು. ಅಂತೆಯೇ ಇಂದು ನಾವು ಕೂಡ ಪ್ರಕೃತಿಯತ್ತ ಮರಳುವ ಅವಶ್ಯಕತೆ ಇದೆ . ಪ್ರಕೃತಿಯು ಸರ್ವರೋಗವನ್ನು ಗುಣಪಡಿಸಲು ಶಕ್ತಿಯನ್ನು ಹೊಂದಿದೆ ಎಂಬ ನಂಬಿಕೆಯೇ ಇದರ ಮೂಲವಾಗಿದೆ. ಇದು ದೇಹ, ಮನಸ್ಸು ಮಾತು ಆತ್ಮವನ್ನು ಸಮಗ್ರವಾಗಿಡುವ ಚಿಕಿತ್ಸಾ ಪದ್ಧತಿಯಾಗಿದೆ. ಭೂಮಿ, ನೀರು, ಅಗ್ನಿ, ವಾಯು, ಮತ್ತು ಆಕಾಶ ಎಂಬ ಐದು ತತ್ವಗಳನ್ನು ಅಧಾರವಾಗಿಟ್ಟುಕೊಂಡು ಔಷಧ ರಹಿತ ಆಕ್ರಮಣಕಾರಿ ಅಲ್ಲದ ರೋಗ ತಡೆಗಟ್ಟುವ ಚಿಕಿತ್ಸೆಯಾಗಿ ಇಂದು ಎಲ್ಲರ ಗಮನ ಸೆಳೆಯುತ್ತಿದೆ.
ಇಂದು ಜಗತ್ತಿನಾದ್ಯಂತ ವ್ಯಾಪಿಸಿರುವ ಯೋಗವು ಒಂದು ಉತ್ತಮ ಜೀವನ ಶೈಲಿಯ ವಿಧಾನವಾಗಿದೆ. ರೋಗಗಳು ಮಾನಸಿಕ ಅಶಾಂತಿ ಮತ್ತು ಒತ್ತಡದಿಂದ ಉಂಟಾಗುತ್ತದೆ. ಇದನ್ನು ಶಮನಗೊಳಿಸಲು ಯೋಗವು ಪ್ರಮುಖವಾಗಿದೆ. ಯೋಗ ಮಾತು ಧ್ಯಾನದ ಮೂಲಕ ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆಗಳನ್ನು ಶಮನಗೊಳಿಸಿ ದೇಹವನ್ನು ಆರೋಗ್ಯಕರವಾಗಿಸುತ್ತದೆ. ಯೋಗ ಚಿಕಿತ್ಸೆ ಎಂದರೆ ಆಸನಗಳು, ಪ್ರಾಣಾಯಾಮ, ಶುದ್ಧೀಕರಣ ಕ್ರಿಯೆಗಳು ವಿಶ್ರಾಂತಿ ಮತ್ತು ಮನಸ್ಸಿನ ಸ್ಥಿಮಿತದ ಮೂಲಕ ಮಾನಸಿಕ ಮತ್ತು ಭಾವನಾತ್ಮಕವನ್ನು ಬೆಂಬಲಿಸುವ ಚಿಕಿತ್ಸೆಯಾಗಿದೆ.
ಆರೋಗ್ಯವಂತ ದೇಹದಲ್ಲಿ ಆರೋಗ್ಯವಾದ ಮನಸ್ಸಿರಬೇಕು, ಚಿಕಿತ್ಸೆ ಎಂದರೆ ಕೇವಲ ನೋವನ್ನು ಸರಿಪಡಿಸುವುದಲ್ಲ ಬದಲಾಗಿ ದೇಹ, ಮನಸ್ಸು ಮತ್ತು ಉಸಿರಾಟದ ಸಮತೋಲನವನ್ನು ಪುನಃ ಸ್ಥಾಪಿಸುವುದಾಗಿದೆ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ನಮಗೆ ಸರಳ ಎಂದೆನಿಸಬಹುದು ಆದರೆ ಇದು ಶಕ್ತಿಶಾಲಿ ಸತ್ಯವನ್ನು ನೆನಪಿಸುತ್ತದೆ. ದೇಹಕ್ಕೆ ಸರಿಯಾದ ಆರೈಕ್ಕೆ, ಸಹನೆ, ತಾಳ್ಮೆ ಮತ್ತು ಗೌರವ ಹೊರೆತಾದ ಸ್ವತಃ ಗುಣಮುಖವಾಗುವ ಸಾಮರ್ಥ್ಯವನ್ನು ಹೊಂದುತ್ತದೆ.
ವೇಗವಾಗಿ ಸಾಗುತ್ತಿರುವ ಜೀವನ ಮತ್ತು ಹೆಚ್ಚುತ್ತಿರುವ ದೀರ್ಘಕಾಲದ ರೋಗಗಳ ಯುಗದಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗವು ಸಂಪೂರ್ಣ ಆರೋಗ್ಯದತ್ತ ಸಾಗುವ ಸಮಗ್ರ ಮಾರ್ಗವನ್ನು ನೀಡುತ್ತದೆ. ದೇಹ, ಮನಸ್ಸು ಮತ್ತು ಆತ್ಮದ ಸಮಗ್ರ ಆರೋಗ್ಯ ಮತ್ತು ಸಾಮರಸ್ಯವನ್ನು ಉತ್ತೇಜಿಸುವ ದೃಷ್ಟಿಕೋನದೊಂದಿಗೆ, ಮಂಗಳೂರಿನ ಫಾದರ್ ಮುಲ್ಲರ್ ಹೋಮಿಯೋಪತಿ ಆಸ್ಪತ್ರೆ ದೇರಳಕಟ್ಟೆಯಲ್ಲಿ ಕ್ಷೇಮ ಕೇಂದ್ರವನ್ನು ಸ್ಥಾಪಿಸುವುದಾಗಿ ಘೋಷಿಸಲು ನಾವು ಸಂತೋಷಪಡುತ್ತೇವೆ.
ನಮ್ಮ ಆಸ್ಪತ್ರೆಯಲ್ಲಿ ನೀಡಲಾಗುವ ಸೇವೆಗಳೆಂದರೆ, ಆಹಾರ ಮತ್ತು ಪೋಷಣೆ, ಯೋಗ ಚಿಕಿತ್ಸೆ, ಜಲಚಿಕಿತ್ಸೆ, ಮಸಾಜ್ ಚಿಕಿತ್ಸೆ, ಅಕ್ಯುಪಂಕ್ಚರ್, ಕಪ್ಪಿಂಗ್, ಫಿಸಿಯೋಥೆರಪಿ ಜೀವನಶೈಲಿ ಮತ್ತು ಒತ್ತಡ ನಿರ್ವಹಣೆ, ವಿಶ್ರಾಂತಿ ಚಿಕಿತ್ಸೆಗಳು, ಸಮಗ್ರ ಆರೋಗ್ಯ ಶಿಕ್ಷಣ ಮತ್ತು ತಡೆಗಟ್ಟುವ ಆರೈಕೆ ಕಾರ್ಯಕ್ರಮ.
ನಿಮ್ಮ ಆರೋಗ್ಯ ಪ್ರಯಾಣವನ್ನು ನಮ್ಮೊಂದಿಗೆ ಪ್ರಾರಂಭಿಸಿ- ಬನ್ನಿ ನಾವು ನೀಡುವ ಚಿಕಿತ್ಸೆಯಲ್ಲಿ ನೀವೂ ಪಾಲ್ಗೊಂಡು ರೋಗ ಮುಕ್ತರಾಗಿ.
ಜನವರಿ – 18 ಜನವರಿ – 28 ಜನವರಿ
ಫೆಬ್ರವರಿ – 22 ಫೆಬ್ರವರಿ – 4th ಮಾರ್ಚ್
ಮಾರ್ಚ್ – 8 ಮಾರ್ಚ್ –18 ಮಾರ್ಚ್
ನಿಮ್ಮ ಸ್ಲಾಟ್ ಬುಕ್ ಮಾಡಲು ಅಥವಾ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9459456633, 0824220390