ನ್ಯೂಯಾರ್ಕ್‌ ಟೈಮ್ಸ್‌ ಸ್ಕ್ವೇರ ಬಿಲ್‌ ಬೋರ್ಡ್‌ನಲ್ಲಿ ಸತೀಶ್ ಆಚಾರ್ಯ ಅವರ ಕಲಾಕೃತಿ ಪ್ರದರ್ಶನ

Spread the love

ನ್ಯೂಯಾರ್ಕ್‌ ಟೈಮ್ಸ್‌ ಸ್ಕ್ವೇರ ಬಿಲ್‌ ಬೋರ್ಡ್‌ನಲ್ಲಿ ಸತೀಶ್ ಆಚಾರ್ಯ ಅವರ ಕಲಾಕೃತಿ ಪ್ರದರ್ಶನ 

ಕುಂದಾಪುರ: ಅಮೇರಿಕಾದ ನ್ಯೂಯಾರ್ಕ್‌ ನಗರದ ಪ್ರತಿಷ್ಠಿತ ಟೈಮ್ಸ್‌ ಸ್ಕ್ವೇರ ನಲ್ಲಿ ಎನ್‌ಎಫ್‌ಟಿ ಡಾಟ್ ಎನ್‌ವೈಸಿ ಸಂಸ್ಥೆ ಈ ಬಾರಿ ಆಯೋಜಿಸಿದ್ದ ಎನ್‌ಎಫ್‌ಟಿ ಕಲಾಕೃತಿಗಳ ಪ್ರದರ್ಶನದಲ್ಲಿ ಖ್ಯಾತ ಅಂತರಾಷ್ಟ್ರೀಯ ವ್ಯಂಗ್ಯಚಿತ್ರಕಾರ ಕುಂದಾಪುರದ ಸತೀಶ್ ಆಚಾರ್ಯ ಅವರ ಕಲಾಕೃತಿ ಪ್ರದರ್ಶನಗೊಂಡಿದೆ.

ಅಮೇರಿಕಾದಲ್ಲಿನ ಎನ್‌ಎಫ್‌ಟಿ ಡಾಟ್ ಎನ್‌ವೈಸಿ ಸಂಸ್ಥೆ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿನ ಕಲಾವಿದರಲ್ಲಿ ಸಮನ್ವಯ ಸಾಧಿಸಿ ಅವರನ್ನು ಒಗ್ಗೂಡಿಸುವ ಸದುದ್ದೇಶದಿಂದ ಈ ಕಲಾಕೃತಿ ಪ್ರದರ್ಶವನ್ನು ಏರ್ಪಡಿಸಿಕೊಂಡು ಬರುತ್ತಿದೆ. ಇದೇ ಮೊದಲ ಬಾರಿಗೆ ಡಿಜಿಟಲ್ ಆರ್ಟ್‌ಗೆ ಒತ್ತು ನೀಡಿದೆ.

ಜೂ.20 ರಿಂದ ಜೂ.23 ರವರೆಗೆ ನಡೆದ ಈ ಕಲಾಕೃತಿಯ ಪ್ರದರ್ಶನದಲ್ಲಿ ಪ್ರದರ್ಶನದ ಅಪೇಕ್ಷೆಯಿಂದ ಜಗತ್ತಿನ ವಿವಿಧ ಭಾಗದಿಂದ ಅನೇಕ ಕಲಾಕೃತಿಗಳು ಬಂದಿದ್ದವು. ಅದರಲ್ಲಿ ಆಯ್ದ 200 ಕೃತಿಗಳನ್ನು ಆಯ್ಕೆ ಮಾಡಿಕೊಂಡು ಟೈಮ್ಸ್‌ ಸ್ಕ್ವೇರ ಬಿಲ್‌ ಬೋರ್ಡ್‌ನಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಇದರಲ್ಲಿ ಸತೀಶ್ ಆಚಾರ್ಯ ಅವರ ‘ ಐ ಕೇರ್ ‘ ಶೀರ್ಷಿಕೆಯ ಎನ್‌ಎಫ್‌ಟಿ ಡಿಜಿಟಲ್ ಕಲಾಕೃತಿಯೂ ಒಂದಾಗಿತ್ತು.

ಪ್ರದರ್ಶನದಲ್ಲಿ ಅವಕಾಶ ಕೋರಿ ಜಗತ್ತಿನ ಬೇರೆ ಬೇರೆ ದೇಶದ 1500 ಕ್ಕೂ ಮಿಕ್ಕಿ ಕಲಾಕೃತಿಗಳು ಬಂದಿದ್ದವು. ಅದರಲ್ಲಿ ಆಯ್ಕೆಯಾದ 200 ಕಲಾಕೃತಿಗಳಲ್ಲಿ ನನ್ನದು ಒಂದು ಎನ್ನುವ ಬಗ್ಗೆ ಹೆಮ್ಮೆ ಇದೆ. ಮೊದಲ ಬಾರಿ ಟೈಮ್ಸ್‌ ಸ್ಕ್ವೇರ ಬಿಲ್‌ ಬೋರ್ಡ್‌ನಲ್ಲಿ ಕಲಾಕೃತಿ ಪ್ರದರ್ಶನವಾಗಿರುವುದು ಖುಷಿ ತಂದಿದೆ ಎಂದು ಸತೀಶ್‌ ಆಚಾರ್ಯ ಹೇಳಿದ್ದಾರೆ.

ತಂತ್ರಜ್ಞಾನದ ಬೆಂಬಲದೊಂದಿಗೆ ಆಧುನೀಕತೆಯತ್ತ ದಾಪುಗಾಲು ಹಾಕುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಮಾನವನಗಿಂತ ಯಂತ್ರವೇ ಹೆಚ್ಚು ಮಾನವೀಯತೆ ತೋರಿದರು ಆಶ್ಚರ್ಯವಿಲ್ಲ ಎನ್ನುವ ಸಂದೇಶದಲ್ಲಿ ಈ ಕಲಾಕೃತಿಯನ್ನು ರಚಿಸಲಾಗಿತ್ತು. ಭಾರತದ ಆಗ್ರಗಣ್ಯ ವ್ಯಂಗ್ಯಚಿತ್ರಕಾರರ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಸತೀಶ್ ಆಚಾರ್ಯ ಅವರು 2015 ರಲ್ಲಿ ಪೋರ್ಬ್ಸ್ ಇಂಡಿಯಾ ಗುರುತಿಸಿದ 24 ಪ್ರಮುಖರಲ್ಲಿ ಒಬ್ಬರಾಗಿದ್ದಾರೆ. ವಿಶ್ವದಾದ್ಯಂತ ದೊಡ್ಡ ಸಂಖ್ಯೆಯ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಅವರ ನೇತ್ರತ್ವದಲ್ಲಿ ಪ್ರತಿ ವರ್ಷ ನಡೆಯುವ ‘ ಕಾರ್ಟೂನ್ ಹಬ್ಬ ‘ ಪ್ರಸಿದ್ಧವಾಗಿದೆ.


Spread the love

Leave a Reply