ನ್ಯೂ ಈಯರ್ ; ಉಡುಪಿ ಜಿಲ್ಲೆಯಲ್ಲಿ ಡಿ 31 ರ ಸಂಜೆ 6 ರಿಂದ ಜ 1 ಬೆಳಿಗ್ಗೆ 6 ರವರೆಗೆ ಸಾರ್ವಜನಿಕರಿಗೆ ಬೀಚ್ ಪ್ರವೇಶ ನಿಷೇಧ

Spread the love

ನ್ಯೂ ಈಯರ್ ; ಉಡುಪಿ ಜಿಲ್ಲೆಯಲ್ಲಿ ಡಿ 31 ರ ಸಂಜೆ 6 ರಿಂದ ಜ 1 ಬೆಳಿಗ್ಗೆ 6 ರವರೆಗೆ   ಬೀಚ್ ಪ್ರವೇಶ ನಿಷೇಧ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊಸವರ್ಷ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ಕಡಲ ತೀರ ಪ್ರದೇಶಗಳಲ್ಲಿ ನಿಷೇಧಾಜ್ಞೆ ಹೇರಿ ಜಿಲ್ಲಾ ಧಿಕಾರಿ ಜಿ ಜಗದೀಶ್ ಆದೇಶ ಹೊರಡಿಸಿದ್ದಾರೆ.

ಹೊಸ ವರ್ಷ ಆಚರಣೆ ಹಿನ್ನಲೆಯಲ್ಲಿ ಬೀಚ್ ಗಳಲ್ಲಿ ಪ್ರವಾಸಿಗರು ಅತೀ ಹೆಚ್ಚು ಸಂಖ್ಯೆಯಲ್ಲಿ ಸೇರುವುದರಿಂದ ಸೋಂಕು ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಬೀಚ್ ಗಳಲ್ಲಿ ಡಿಸೆಂಬರ್ 31 ರ ಸಂಜೆ 6 ಗಂಟೆಯಿಂದ ಜನವರಿ 1 ಬೆಳಿಗ್ಗೆ 6 ಗಂಟೆವರೆಗೆ ನಿರ್ಬಂಧಕಾಜ್ಞೆ ವಿಧಿಸಿ ಉಡುಪಿ ಡಿಸಿ ಜಿ . ಜಗದೀಶ್ ಆದೇಶ ಹೊರಡಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲೆಯ ಬೀಚ್ ಗಳಿಗೆ ಸಾರ್ವಜನಿಕರು ಯಾರೂ ಕೂಡ ಹೋಗದಂತೆ ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಹೋಟೆಲ್ ಪಬ್ ಕ್ಲಬ್ ಗಳು, ರೆಸಾರ್ಟ್ಗಳು ರಾತ್ರಿ ಹತ್ತರ ನಂತರ ತೆರೆಯಬಾರದು ಎಂದು ನಾಲ್ಕು ದಿನಗಳ ಹಿಂದೆ ಉಡುಪಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಇದೀಗ ಏಕಾಏಕಿ ಇನ್ನೆರಡು ಗಂಟೆ ಬಾಕಿ ಇರುವಾಗ ಪ್ರವಾಸಿಗರು ಸ್ಥಳಿಯರು ಹೊಸ ವರ್ಷಾಚರಣೆಗೆ ಬೀಚಿಗೆ ಹೋಗುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ.


Spread the love