ನ.28 ರಿಂದ ಮಂಗಳೂರಿನಿಂದ ಎರ್ನಾಕುಲಂಗೆ   ಮಲ್ಟಿ ಆಕ್ಸೆಲ್ ಬಸ್ ಸಂಚಾರ ಆರಂಭ

Spread the love

ನ.28 ರಿಂದ ಮಂಗಳೂರಿನಿಂದ ಎರ್ನಾಕುಲಂಗೆ   ಮಲ್ಟಿ ಆಕ್ಸೆಲ್ ಬಸ್ ಸಂಚಾರ ಆರಂಭ

ಮಂಗಳೂರು: ಕೋವಿಡ್-19 ಸಂದರ್ಭದಲ್ಲಿ ಮಂಗಳೂರಿನಿಂದ ಕೇರಳದ ಎರ್ನಾಕುಲಂಗೆ ವೋಲ್ವೋ ಮಲ್ಟಿಆಕ್ಸೆಲ್ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಪ್ರಸ್ತುತ ಲಾಕ್ಡೌನ್ ಸಡಿಲಗೊಂಡ ಹಿನ್ನಲೆಯಲ್ಲಿ ಮತ್ತು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಬೇಡಿಕೆಗನುಗುಣವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದಿಂದ ಮಂಗಳೂರು-ಎರ್ನಾಕುಲಂ (ಮಂಗಳೂರಿನಿಂದ ಕಾಸರಗೋಡು, ಕ್ಯಾಲಿಕಟ್, ತ್ರಿಶ್ಯೂರ್, ಅಳಪೆ ಮಾರ್ಗವಾಗಿ ಎರ್ನಾಕುಲಂ) ಮಾರ್ಗದಲ್ಲಿ ವೋಲ್ವೋ ಮಲ್ಟಿಆಕ್ಸಲ್ ಸಾರಿಗೆ ಸೌಲಭ್ಯವನ್ನು ಇದೇ ನ.28 ರಿಂದ ಪುನಃ ಪ್ರಾರಂಭಿಸಿ ಕಾರ್ಯಾಚರಣೆ ಮಾಡಲಾಗುತ್ತಿದೆ.

ಮಂಗಳೂರಿನಿಂದ ಎರ್ನಾಕುಲಂ ರಾತ್ರಿ 9 ಗಂಟೆಗೆ ಮತ್ತು ಎರ್ನಾಕುಲಂ ನಿಂದ ಮಂಗಳೂರು ರಾತ್ರಿ 8.35 ಕ್ಕೆ ಹೊರಡಲಿದೆ.

ಮಂಗಳೂರಿನಿಂದ ಎರ್ನಾಕುಲಂಗೆ ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣ ದರ 760 ರೂ.ಗಳು. ಪ್ರಯಾಣಿಕರಿಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.   ಹತ್ತಿರದ ರಿಸರ್ವೇಶನ್ ಕೌಂಟರ್ ಅನ್ನು ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗೆ ಮಂಗಳೂರು ಬಸ್ಸು ನಿಲ್ದಾಣ ದೂ.ಸಂ: 7760990720, ಮಂಗಳೂರು ಮುಂಗಡ ಬುಕ್ಕಿಂಗ್ ಕೌಂಟರ್ ದೂ.ಸಂ: 9663211553 ಸಂಪರ್ಕಿಸಬಹುದು ಎಂದು ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love