ನ. 7 : ಯೆನಪೋಯ ವಿಶ್ವವಿದ್ಯಾಲಯದ 12ನೇ ವಾರ್ಷಿಕ ಘಟಿಕೋತ್ಸವ

Spread the love

ನ. 7 : ಯೆನಪೋಯ ವಿಶ್ವವಿದ್ಯಾಲಯದ 12ನೇ ವಾರ್ಷಿಕ ಘಟಿಕೋತ್ಸವ

ಮಂಗಳೂರು: ಯೆನಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ)ದ 12ನೇ ವಾರ್ಷಿಕ ಘಟಿಕೋತ್ಸವವು ಇದೇ ಬರುವ ದಿನಾಂಕ ನವೆಂಬರ್ 07, 2022 ಸೋಮವಾರದಂದು ಬೆಳಿಗ್ಗೆ 9.30 ಗಂಟೆಗೆ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿರುವುದು.

ಈ ಸಮಾರಂಭದಲ್ಲಿ 1370 ಕ್ಕೂ ಹೆಚ್ಚು ಪಿ.ಎಚ್.ಡಿ , ಎಂ.ಸಿ.ಎಚ್, ಎಂಡಿ/ಎಂಎಸ್, ಎಂ.ಡಿ.ಎಸ್ ಎಂ.ಎಸ್‍ಸಿ (ನರ್ಸಿಂಗ್), ಎಂ.ಪಿ.ಟಿ, ಸ್ನಾತಕೋತ್ತರ ಡಿಪೆÇ್ಲೀಮ, ಎಂ.ಬಿ.ಬಿ.ಎಸ್, ಬಿ.ಡಿ.ಎಸ್, ಬಿ.ಎಸ್ಸಿ (ನರ್ಸಿಂಗ್), ಬಿ.ಪಿ.ಟಿ, ಅಲೈಡ್ ಸೈನ್ಸ್, ವಿಜ್ಞಾನ ಹಾಗೂ ವಾಣಿಜ್ಯಾ ವಿಭಾಗ ಮತ್ತು ನಿರ್ವಹಣೆಯ ವಿಭಾಗ ಪದವೀಧರರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಹಾಗೆಯೆ ಕಲಿಕೆಯಲ್ಲಿ ಅತ್ಯುನ್ನತ ಶ್ರೇಣಿಯನ್ನು ಪಡೆದ 7 ಪದವೀಧರರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಗುವುದು.

ಈ ಸಮಾರಂಭದ ಅಧ್ಯಕ್ಷತೆಯನ್ನು ಯೆನಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ)ದ ಕುಲಾಧಿಪತಿಗಳಾದ ಡಾ| ವೈ ಅಬ್ದುಲ್ಲ ಕುಂಞ ಇವರು ವಹಿಸಲಿರುವರು ಮತ್ತು ಪದವಿ ಪ್ರದಾನ ಮಾಡಲಿರುವರು. ಪದ್ಮಶ್ರೀ, ಪದ್ಮಭೂಷಣ, ಶಾಂತಿ ಸ್ವರೂಪ್ ಭಟ್ನಾಗರ್ ಮತ್ತು ಬಿ.ಸಿ ರಾಯ್ ಪ್ರಶಸ್ತಿ ಪುರಸ್ಕ್ರತರಾದ ,ಡೆಂಟಲ್ ಕೌನ್ಸಿಲ್ ಅಫ್ ಇಂಡಿಯಾ ಹೊಸದೆಹಲಿ ಇದರ ಮಾಜಿ ಅಧ್ಯಕ್ಷರಾದ ಡಾ| ಅನಿಲ್ ಕೊಹ್ಲಿ, ಮುಖ್ಯ ಅತಿಥಿಗಳಾಗಿ ಘಟಿಕೋತ್ಸವ ಭಾಷಣ ಮಾಡಲಿರುವರು. ಪದ್ಮಶ್ರೀ ಹಾಗೂ ಬಿ.ಸಿ ರಾಯ್ ಪ್ರಶಸ್ತಿ ಪುರಸ್ಕ್ರತರಾದ, ಚಂಡಿಗಡದ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸ್ನಾತಕೋತ್ತರ ಸಂಸ್ಥೆಯ ಮಾಜಿ ನಿರ್ದೇಶಕರು ಹಾಗೂ ಪೆÇ್ರೀಫೆಸರ್‍ರಾಗಿರುವ ಪೆÇ್ರೀ.ಡಾ| ಯೋಗೀಶ್ ಕುಮಾರ್ ಚಾವ್ಲಾ ಇವರು ಗೌರಾವಾನ್ವಿತ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ. ಕ್ಯಾಲಿಕಟ್ ವೈದ್ಯಕೀಯ ಕಾಲೇಜಿನ ಮಾಜಿ ವೈದ್ಯಕೀಯ ಪ್ರಾಧ್ಯಾಪಕರು ಹಾಗೂ ಇಂಗ್ಲೆಂಡಿನಲ್ಲಿ ಹೆಮೆಟಾಲಜಿ ಸಲಹಾ ತಜ್ಞರಾದ ಪೆÇ್ರೀ.ಡಾ| ಕಾಸಿಂ ಅಬ್ದುಲ್ ಸಲೀಂರವರಿಗೆ ಗೌರವ ಡಾಕ್ಟರ್ ಬಿರುದು “ಡಾಕ್ಟರ್ ಅಫ್ ಸೈನ್ಸ್”ನೀಡಲಾಗುವುದು.

ಈ ಸಮಾರಂಭದಲ್ಲಿ ವಿಶ್ವವಿದ್ಯಾನಿಲಯದ ಇತರ ಅಧಿಕಾರಿಗಳು, ಪ್ರಾಂಶುಪಾಲರು ಹಾಗೂ ಇನ್ನಿತರ ಪ್ರಾಧ್ಯಾಪಕರು ಭಾಗವಹಿಸಲಿದ್ದಾರೆ.


Spread the love