ಪಂಡಿತ್ ಜವಾಹರಲಾಲ್ ನೆಹರು ಕಪ್-2022

Spread the love

ಪಂಡಿತ್ ಜವಾಹರಲಾಲ್ ನೆಹರು ಕಪ್-2022

ಮಂಗಳೂರು: ಮಾಜಿ ಪ್ರಧಾನಿ ದಿ|| ಪಂಡಿತ್ ಜವಾಹರಲಾಲ್ ನೆಹರುರವರ ಜನ್ಮ ದಿನದ ಪ್ರಯುಕ್ತ ಯುವಕರಲ್ಲಿ ಮಾಜಿ ಪ್ರಧಾನಿ ನೆಹರುರವರ ಕೊಡುಗೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಮಂಗಳೂರು ನಗರ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ನೇತತ್ವದಲ್ಲಿ “ಪಂಡಿತ್ ಜವಾಹರಲಾಲ್ ನೆಹರು ಕಪ್-2022” ಕ್ರಿಕೆಟ್ ಪಂದ್ಯಾಟವನ್ನು ಮಂಗಳೂರು ನಗರದ ಉರ್ವಾ ಮೈದಾನದಲ್ಲಿ ಆಯೋಜಿಸಲಾಗಿತ್ತು.

ಈ ಪಂಧ್ಯಾಟದಲ್ಲಿ ಪ್ರಥಮ ಬಹುಮಾನವನ್ನು “ಬಂದರ್ ಬ್ರಿಗೇಡ್”, ದ್ವಿತೀಯ ಬಹುಮಾನವನ್ನು “ಯುನೈಟೆಡ್ ಅಶೋಕನಗರ” ಹಾಗೂ ಶಿಸ್ತುಬದ್ಧ ತಂಡವಾಗಿ “ಡೊಂಗೇರಿಕೆರಿ ಚಾಲೆಂಜರ್ಸ್” ಪಡೆದರು.

ಮಂಗಳೂರಿನ ಖ್ಯಾತ ಕ್ರಿಕೆಟ್ ಪಟುಗಳಾದ ಶ್ರೀದರ್ ಕುಮಾರ್ ಬೋಳೂರು ಮತ್ತು ಫುಟ್ಬಾಲ್ ಅಸೋಶಿಯೇಷನ್ ಅಧ್ಯಕ್ಷರಾದ ಡಿ ಎಂ ಅಸ್ಲಂ ಅವರನ್ನು ಸನ್ಮಾನಿಸಲಾಯಿತು.

ಈ ಕ್ರಿಕೆಟ್ ಪಂದ್ಯಾಟದಲ್ಲಿ ಮಾಜಿ ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ, ಮಾಜಿ ಸಚಿವರಾದ ರಮಾನಾಥ್ ರೈ,, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಿಥುನ್ ರೈ, ಇನಾಯತ್ ಅಲಿ, ಕೆಪಿಸಿಸಿ ವಕ್ತಾರರಾದ ಎಸಿ ವಿನಯ್ ರಾಜ್, ಸುರೇಶ್ ಬಲ್ಲಾಳ್, ಅಲ್ಪಸಂಖ್ಯಾತ ಜಿಲ್ಲಾಧ್ಯಕ್ಷರಾದ ಸಾಹುಲ್ ಹಮೀದ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಶಾಲೆಟ್ ಪಿಂಟೋ, ಹಿಂದುಳಿಗ ಘಟಕದ ಅಧ್ಯಕ್ಷರಾದ ವಿಶ್ವಾಸ್ ಕುಮಾರ್ ದಾಸ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂತೋಷ್ ಕುಮಾರ್, ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷರಾದ ಲಾರೆನ್ಸ್ ಡಿಸೋಜಾ , ವಿಧ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷರಾದ ಸವಾದ್ ಸುಳ್ಯ,ಯುವ ಕಾಂಗ್ರೇಸ್ ಜಿಲ್ಲಾಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ್,ಮಹಾನಗರ ಪಾಲಿಕೆ ವಿರೋಧ ಪಕ್ಷ ನಾಯಕರಾದ ನವೀನ್ ಡಿಸೋಜ, ಮನಪಾ ಸದಸ್ಯರುಗಳಾದ ಶಶಿಧರ್ ಹೆಗಡೆ, ಪ್ರವೀಣ್ ಚಂದ್ರ ಆಳ್ವ, ಅನಿಲ್ ಕುಮಾರ್, ಅಬ್ದುಲ್ ಲತೀಫ್ ಕಂದಕ್, ಅಬ್ದುಲ್ ರವೂಫ್ ಬಜಾಲ್, ಕೇಶವ ಮರಳಿ, ಶಂಶುದ್ದೀನ್ ಕುದ್ರೋಳಿ, ಮಾಜಿ ಮೇಯರ್ ಅಶ್ರಫ್.ಕೆ ಮತ್ತಿತರು ಉಪಸ್ಥಿತರಿದ್ದರು.

ಮಂಗಳೂರು ಸಿಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಸಾಲ್ಯಾನ್ ಸ್ವಾಗತಿಸಿ ಮಂಗಳೂರು ಸಿಟಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ರಾಕೇಶ್ ದೇವಾಡಿಗ ದನ್ಯವಾದ ಸಲ್ಲಿಸಿದರು , ಸುನಿಲ್ ಪೂಜಾರಿ ಅನ್ಸಾರುದ್ದೀನ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.


Spread the love

Leave a Reply

Please enter your comment!
Please enter your name here