ಪಂಪ್ವೆಲ್‌ ಮೇಲ್ಸೇತುವೆಯಿಂದ ಸರ್ವಿಸ್ ರಸ್ತೆಗೆ ಜಾರಿದ ಕಾರು

Spread the love

ಪಂಪ್ವೆಲ್‌ ಮೇಲ್ಸೇತುವೆಯಿಂದ ಸರ್ವಿಸ್ ರಸ್ತೆಗೆ ಜಾರಿದ ಕಾರು

ಮಂಗಳೂರು: ನಿಯಂತ್ರಣ ತಪ್ಪಿದ ಕಾರೊಂದು ನಗರದ ಪಂಪ್ವೆಲ್‌ ಮೇಲ್‌ ಸೇತುವೆಯಿಂದ ಸರ್ವಿಸ್‌ ರಸ್ತೆಗೆ ಜಾರಿದ ಘಟನೆ ಗುರುವಾರ ಸಂಜೆ ನಡೆದಿದೆ.

ನಗರ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಸೇರಿದ ಕಾರು ಇದಾಗಿದ್ದು, ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಆಗಮಿಸುತ್ತಿತ್ತು ಎನ್ನಲಾಗಿದೆ. ಎದುರಿನಿಂದ ವೇಗವಾಗಿ ಬಂದ ವಾಹನವೊಂದು ಸಾಗುವಾಗ ರಸ್ತೆಯಲ್ಲಿ ನಿಂತಿದ್ದ ಮಳೆ ನೀರು ವೈದ್ಯರ ಕಾರಿನ ಮುಂಬಾಗದ ಗ್ಲಾಸ್‌ ಮೇಲೆ ಚೆಲ್ಲಿದರ ಪರಿಣಾಮ ನಿಯಂತ್ರಣ ತಪ್ಪಿದ ವೈದ್ಯರ ಕಾರು ಸರ್ವಿಸ್‌ ರಸ್ತೆಗೆ ಜಾರಿದೆ ಎನ್ನಲಾಗಿದೆ.

ಕೆಳ ರಸ್ತೆಗೆ ಜಾರಿದ ಕಾರನ್ನು ಸ್ಥಳಿಯರ ಸಹಕಾರದೊಂದಿಗೆ ಪೊಲೀಸರು ತೆರವುಗೊಳಿಸಿದರು. ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love