ಪಂಪ್ ವೆಲ್ ಗಣೇಶೋತ್ಸವ: ಸಮಿತಿ ಒಗ್ಗಟ್ಟು ,ನಿಸ್ವಾರ್ಥ ಸೇವೆಯಿಂದ ಸುವರ್ಣ ಮಹೋತ್ಸವದ ಕಿರೀಟ : ಒಡಿಯೂರು ಸಾಧ್ವಿ ಮಾತಾನಂದಮಯಿ

Spread the love

ಪಂಪ್ ವೆಲ್ ಗಣೇಶೋತ್ಸವ: ಸಮಿತಿ ಒಗ್ಗಟ್ಟು ,ನಿಸ್ವಾರ್ಥ ಸೇವೆಯಿಂದ ಸುವರ್ಣ ಮಹೋತ್ಸವದ ಕಿರೀಟ : ಒಡಿಯೂರು ಸಾಧ್ವಿ ಮಾತಾನಂದಮಯಿ

ಮಂಗಳೂರು: ಸುವರ್ಣ ಮಹೋತ್ಸವದ ವರೆಗೆ ಸುಧೀರ್ಘವಾಗಿ ಈ ಸಂಸ್ಥೆಯ ಪದಾಧಿಕಾರಿಗಳು,ಸದಸ್ಯರ ನಿಸ್ವಾರ್ಥ ಸೇವೆ. ಹಿಂದೂ ಸಮಾಜದ ಸೇವೆಯ ಮನೋಭಾವದಿಂದ ಒಗ್ಗಟ್ಟಿನಿಂದ ಶ್ರಮಿಸಿದ ಕಾರಣ ಇಂದು ಸಂಭ್ರಮದ ಗಣೇಶೋತ್ಸವ ಸಾಧ್ಯವಾಗಿದೆ ಎಂದು ಒಡಿಯೂರು ಸಾಧ್ವಿ ಮಾತಾನಂದಮಯಿ ನುಡಿದರು.

ಅವರು ಶುಕ್ರವಾರ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಶ್ರೀ ಮಹಾಗಣಪತಿ ಸೇವಾ ಪ್ರತಿಷ್ಠಾನ, ಶ್ರೀ ಗಣೇಶೋತ್ಸವ ಸುವರ್ಣ ಮಹೋತ್ಸವ ಸಮಿತಿ ಗಣೇಶಪುರ-ಪಂಪ್‌ವೆಲ್ ಇದರ ೫೦ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸುವರ್ಣ ಮಹೋತ್ಸವದ ಪ್ರಯುಕ್ತ,ಸ್ವಾಮಿ ವಿವೇಕಾನಂದ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಗಣಾಧಿಪತಿಯು ಬುದ್ದಿ ಮತ್ತು ಜ್ಞಾನ ಕರುಣಿಸುವ ವಿದ್ಯಾಧೀಶನಾಗಿದ್ದಾನೆ.ಮಾತ್ರವಲ್ಲ ಅಷ್ಟ ದಿಕ್ಪಾಲಕರ ಒಡೆಯನಾಗಿ,ಮತ್ತು ಗಣಪತಿಯ ಶರೀರದ ವರ್ಣನೆಯನ್ನು ಹೇಳುವುದಾದರೆ ಅದರಲ್ಲೂ ಸಂದೇಶ ಅಡಕವಾಗಿದೆ.ಈ ನಿಟ್ಟಿನಲ್ಲಿ ಪ್ರಥಮ ಪೂಜಿತನ ಆರಾಧನೆಯಿಂದ ಎಲ್ಲರಿಗೂ ಒಳಿತಾಗಲಿ ಎಂದರು.

ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಕಾಶ್ ಪಿ.ಎಸ್ ಧಾರ್ಮಿಕ ಉಪನ್ಯಾಸ ನೀಡಿ, ಧರ್ಮ ಬೇರೆ ಅಲ್ಲ ರಾಷ್ಟ್ರ ಬೇರೆ ಅಲ್ಲ. ಸಹೋದರತೆ,ಪಿತೃ ದೇವೋಭವ,ಮಾತೃ,ಗುರು ದೇವೋಭವ ಹೀಗೆ ಜೀವನ ಪದ್ದತಿ,ಹಿಂದೂ ಸಮುದಾಯ ಪ್ರಕೃತಿಯಲ್ಲಿ ದೇವರನ್ನು ಪೂಜಿಸುವ ಸಮುದಾಯವಾಗಿದೆ .ಇದು ಧರ್ಮವಾಗಿದೆ.ಆಚರಣೆ ಜೀವನದ ಭಾಗವಾಗಿದೆ ಅಷ್ಟೆ. ಬೇರೆಲ್ಲೂ ಇಲ್ಲದ ಪವಿತ್ರ ಕಲ್ಪನೆ ಭಾರತದಲ್ಲಿರುವುದರಿಂದ ದೇಶವು ಗೌರವಿಸಲ್ಪಡುತ್ತಿದೆ ಮಾತ್ರವಲ್ಲ ಪುಣ್ಯ ಕ್ಷೇತ್ರದ ಜತೆಗೆ ಶಾಂತಿಯ ಬೆಳಕನ್ನು ಕೊಡುವ ದೇಶವಾಗಿದೆ ಎಂದರು.

ಶ್ರೀ ಅನ್ನಪೂರ್ಣೇಶ್ವರೀ ಅಮ್ಮನವರ ದೇವಾಲಯ ಶ್ರೀ ಕ್ಷೇತ್ರ ಹೊರನಾಡಿನ  ಧರ್ಮಕರ್ತರು, ಆದಿಶತ್ತ್ಯಾತ್ಮಕ ಡಾ.ಜಿ. ಭೀಮೇಶ್ವರ ಜೋಶಿ ಅಧ್ಯಕ್ಷತೆ ವಹಿಸಿದ್ದರು.

ವಿಶ್ವ ಹಿಂದೂ ಪರಿಷತ್ ಮಂಗಳೂರು ಇದರ ಜಿಲ್ಲಾ ಉಪಾಧ್ಯಕ್ಷ ರತೀಂದ್ರನಾಥ್ ಆಶು, ಬಜರಂಗದಳದ ಪ್ರಾಂತ ಸಂಯೋಜಕ  ಸುನೀಲ್ ಕೆ.ಆರ್., ಶ್ರೀ ಗೋಕರ್ಣಾಥೇಶ್ವರ ದೇವಸ್ಥಾನ, ಕುದ್ರೋಳಿ ಇದರ ಮೊಕ್ತೇಸರ ರವಿಶಂಕರ್ ಮಿಜಾರ್, ಶ್ರೀ ಬ್ರಹ್ಮಬೈದರ್ಕಳ ಕ್ಷೇತ್ರ ಕಂಕನಾಡಿಯ ಮೊಕ್ತೇಸರ ಜಗದೀಪ್ ಸುವರ್ಣ, ಪದವು ವ್ಯವಸಾಯ ಸೇವಾ ಸಹಕಾರಿ ಸಂಘದ  ಅಧ್ಯಕ್ಷೆ ಸುಮನಾ ಶರಣ್, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಶ್ರೀ ಕ್ಷೇತ್ರ ಗೆಜ್ಜೆಗಿರಿ ಇದರ ಉಪಾಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ನಿಧಿ ಬಿಲ್ಡರ್ಸ್ನ  ನಿರ್ದೇಶಕ ಪ್ರಶಾಂತ್, ಉದ್ಯಮಿ ಸುಧೀರ್ ಹೆಗ್ಡೆ ಬೈಲೂರು,  ಪಟ್ಲ ಟ್ರಸ್ಟ್ ಪಟ್ಲ ಫೌಂಡೇಷನ್ ಸ್ಥಾಪಕ ಪಟ್ಲ ಸತೀಶ್ ಶೆಟ್ಟಿ, ಹಿಂದೂ ಯುವ ಸೇನೆ ಟ್ರಸ್ಟ್ನ ಗೌರವಾಧ್ಯಕ್ಷ ಭಾಸ್ಕರ ಚಂದ್ರ ಶೆಟ್ಟಿ, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆಯ ವಕ್ತಾರ ಜಗದೀಶ್ ಶೇಣವ, ಉದ್ಯಮಿ ಸತೀಶ್ ಬೋಳಾರ್, ದಕ್ಷಿಣ ಕನ್ನಡ ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ,ಸಮಿತಿಯ ಪ್ರಮುಖರಾದ ಜಗದೀಶ್ ಗರೋಡಿ, ಟಿ.ಎ ಅಶೋಕನ್,ಕೆ.ಬಿ ಅರಸ್ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾಧಕರನ್ನು ಗೌರವಿಸಲಾಯಿತು.

ಸಂದೀಪ್ ಸಾಲ್ಯಾನ್ ಸ್ವಾಗತಿಸಿದರು. ಕಾರ್ಯಕ್ರಮ ವನ್ನು ಜೆ ದಿನೇಶ್ ಅಂಚನ್ ನಿರೂಪಿಸಿದರು. ಅನಿಲ್ ಕುಮಾರ್ ವಂದಿಸಿದರು.

ಬಳಿಕ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ,ಸಂಜೆ ವಿಸರ್ಜನಾ ಪೂಜೆ, ಜರುಗಿ ಶ್ರೀ ಮಹಾಗಣಪತಿ ದೇವರ ಶೋಭಾಯಾತ್ರೆ ಜರಗಿತು.ಸಾವಿರಾರು ಭಕ್ತರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.


Spread the love