ಪಕ್ಷದಿಂದ ಉಚ್ಚಾಟನೆಯಾಗದ ಅಧಿಕಾರಿ – ದಕ ಜಿಲ್ಲಾ ಯುವ ಜೆಡಿಎಸ್ ವತಿಯಿಂದ ಫೆ.12ರಂದು ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆ

Spread the love

ಪಕ್ಷದಿಂದ ಉಚ್ಚಾಟನೆಯಾಗದ ಅಧಿಕಾರಿ – ದಕ ಜಿಲ್ಲಾ ಯುವ ಜೆಡಿಎಸ್ ವತಿಯಿಂದ ಫೆ.12ರಂದು ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆ

ಮಂಗಳೂರು: ಆರಾಧ್ಯರಾದ ಕೋಟಿ ಚೆನ್ನಯರ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿಯವರನ್ನು ತಮ್ಮ ಪಕ್ಷದಿಂದ ಇನ್ನೂ ಕೂಡ ಉಚ್ಚಾಟನೆ ಮಾಡದಿರುವ ಕಾರಣ ಯುವ ಜೆಡಿಎಸ್ ವತಿಯಿಂದ ಫೆಬ್ರವರಿ 12 ರಂದು ಸಂಜೆ 4 ಗಂಟೆಗೆ ದಕ ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ದಕ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಲ್ಲವರ ಆರಾಧ್ಯರಾದ ಕೋಟಿ ಚೆನ್ನಯರ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿಯವರನ್ನು ತಮ್ಮ ಪಕ್ಷದಿಂದ ಇನ್ನೂ ಕೂಡ ಉಚ್ಛಾಟನೆ ಮಾಡುವಂತೆ ಅಕ್ಷಿತ್ ಸುವರ್ಣ ಆಗ್ರಹಿಸಿದ್ದರು. ಒಂದು ವೇಳೆ ಉಚ್ಚಾಟನೆ ಮಾಡದೇ ಹೋದಲ್ಲಿ ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದ್ದರು.


Spread the love