ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವ ಜವಾಬ್ದಾರಿ ನಮ್ಮೆಲ್ಲ ಕಾರ್ಯಕರ್ತ ಮೇಲಿದೆ: ಬಿಎಸ್‌ ವೈ

Spread the love

ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವ ಜವಾಬ್ದಾರಿ ನಮ್ಮೆಲ್ಲ ಕಾರ್ಯಕರ್ತ ಮೇಲಿದೆ: ಬಿಎಸ್‌ ವೈ
 

ಹುಬ್ಬಳ್ಳಿ: ಕರ್ನಾಟಕದಲ್ಲಿ ಬಿಜೆಪಿ ಬರುವ ಅಚಲ ವಿಶ್ವಾಸವಿದೆ. ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವ ಜವಾಬ್ದಾರಿ ನಮ್ಮೆಲ್ಲ ಕಾರ್ಯಕರ್ತ ಮೇಲಿದೆ. ನೂರಾಕ್ಕೆ ನೂರು 140 ಸ್ಥಾನ ಗೆಲ್ಲುತ್ತೇವೆ ಎಂದು ಕೇಂದ್ರ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಬಲ್‌ ಎಂಜಿನ ಸರ್ಕಾರ ರಾಜ್ಯದಲ್ಲಿ ಬರಬೇಕು ಎಂಬ ಪ್ರಧಾನಿ ಮೋದಿಯವರ ಅಪೇಕ್ಷೆಯಂತೆ ನಾವು ಪೂರೈಸುತ್ತೇವೆ. ಪ್ರಧಾನಿ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿ ಅಮಿತ್ ಶಾ ರಾಜ್ಯದಲ್ಲಿ ಪ್ರವಾಸ ಮಾಡುವುದರಿಂದ ರಾಜ್ಯದ ಚಿತ್ರಣ ಬದಲಾಗಲಿದೆ.‌ ರಾಜ್ಯದಲ್ಲಿ ಪ್ರವಾಸ ವೇಳೆ ಜನರ ಬೆಂಬಲ ಸಿಗುತ್ತಿದೆ ಎಂದರು.

ಅಧಿಕಾರಕ್ಕೆ ಬರುವ ಹಂಬಲದಿಂದ ಕಾಂಗ್ರೆಸ್ ನವರು ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ. ಅವರು ಭರವಸೆಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವುಕುಮಾರ, ಸಿದ್ದರಾಮಯ್ಯ ಅವರು ಸುಳ್ಳು ಭರವಸೆ ನೀಡುವುದನ್ನು ಕೈಬಿಡಬೇಕು ಎಂದು ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ನೀಡಿದ ಎಲ್ಲ ಭರವಸೆ ಈಡೇರಿಸುತ್ತೇವೆ. ಮೋದಿ ಅವರ ಮಾತು ಪ್ರತಿಯೊಬ್ಬರ ಮನೆ ಮಾತಾಗಿದೆ. ಹೀಗಾಗಿ ಅವರ ಮಾತು ಕಾರ್ಯಕರ್ತರಿಗೆ ಸ್ಪೋರ್ತಿಯಾಗಿದೆ ಎಂದು ತಿಳಿಸಿದರು.


Spread the love