ಪಟ್ಲ ಸಂಭ್ರಮದಲ್ಲಿ ವಿದ್ಯಾರ್ಥಿಗಳಿಗೆ ಯಕ್ಷಗಾನ ಸ್ಪರ್ಧೆ

Spread the love

ಪಟ್ಲ ಸಂಭ್ರಮದಲ್ಲಿ ವಿದ್ಯಾರ್ಥಿಗಳಿಗೆ ಯಕ್ಷಗಾನ ಸ್ಪರ್ಧೆ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಆಶ್ರಯದಲ್ಲಿ ಜರಗುವ ಪಟ್ಲ ಸಂಭ್ರಮ 2023ರಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಯಕ್ಷಗಾನ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರು ತಿಳಿಸಿದ್ದಾರೆ.

ಮೇ 28 ಆದಿತ್ಯವಾರ ಮಂಗಳೂರಿನ ಅಡ್ಯಾ‌ ಗಾರ್ಡನ್‌ನಲ್ಲಿ ಎರಡು ಪ್ರತ್ಯೇಕ ವೇದಿಕೆಗಳಲ್ಲಿ ಹೈಸ್ಕೂಲ್ ಹಾಗೂ ಕಾಲೇಜು ಎರಡು ವಿಭಾಗಗಳ ತೆಂಕುತಿಟ್ಟಿನ ಯಕ್ಷಗಾನ ಬಯಲಾಟ ಸ್ಪರ್ಧೆ ನಡೆಯಲಿದೆ. 2022-23 ಶೈಕ್ಷಣಿಕ ವರ್ಷದ ವಿದ್ಯಾರ್ಥಿ ವಿದ್ಯಾರ್ಥಿನಿಯರು 45 ನಿಮಿಷದ ಪೌರಾಣಿಕ ಕನ್ನಡ ಪ್ರಸಂಗವನ್ನು ಪ್ರಸ್ತುತಗೊಳಿಸಬೇಕು. ಶಾಲೆ/ಕಾಲೇಜಿನ ಹೆಸರಿನಲ್ಲೇ ತಂಡದ ಹೆಸರು ನೊಂದಾಯಿಸಿಕೊಳ್ಳಬೇಕು.

ಒಂದು ತಂಡದಲ್ಲಿ ಭಾಗವಹಿಸಿದ ಹಿಮ್ಮೇಳ ಕಲಾವಿದರು ಮತ್ತೊಂದು ತಂಡದಲ್ಲಿ ಭಾಗವಹಿಸುವಂತಿಲ್ಲ. ಮುಮ್ಮೇಳದಲ್ಲಿ ಕನಿಷ್ಠ 10 ವಿದ್ಯಾರ್ಥಿ ವೇಷಧಾರಿಗಳು ಇರಬೇಕು. ಗರಿಷ್ಠ ಮಿತಿ ನಿರ್ಭಂಧ ಇಲ್ಲ.

ಬಹುಮಾನಗಳು

ಎರಡೂ ವಿಭಾಗಗಳಿಗೆ ಪ್ರಥಮ (ರೂ. 50,000), ದ್ವಿತೀಯ (ರೂ. 30,000), ತೃತೀಯ(ರೂ. 20,000) ನಗದು ಬಹುಮಾನ ಹಾಗೂ ಶಾಶ್ವತ ಫಲಕಗಳಿವೆ. ಭಾಗವಹಿಸಿದ ಉಳಿದ ಎಲ್ಲಾ ತಂಡಗಳಿಗೆ ರೂ. 10,000/- ಗೌರವಧನ ನೀಡಲಾಗುವುದು. ಶಿಸ್ತುಬದ್ಧ ತಂಡ ಬಹುಮಾನವೂ ಇದೆ. ಪುಂಡು, ಸ್ತ್ರೀ, ರಾಜ, ಹಾಸ್ಯ, ಬಣ್ಣ ಹಾಗೂ ಪೋಷಕ ಪಾತ್ರಗಳಿಗೆ ವೈಯಕ್ತಿಕ ಬಹುಮಾನಗಳಿವೆ. (ಪ್ರಥಮ ರೂ. 5,000, ದ್ವಿತೀಯ ರೂ. 3,000)

ಮೊದಲು ಪ್ರವೇಶ ಪತ್ರ ತಲಪಿಸಿದ 10+10 ತಂಡಗಳಿಗೆ ಸ್ಪರ್ಧಾ ಅವಕಾಶ ನೀಡಲಾಗುವುದು. ವೇಷಭೂಷಣ ಒದಗಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ (9448123061), ಸ್ಪರ್ಧಾ ಸಂಚಾಲಕ ಕೃಷ್ಣ ಶೆಟ್ಟಿ ತಾರೆಮಾರ್ (9448356191) ಅವರನ್ನು ಜನವರಿ 31ರ ಮುಂಚಿತವಾಗಿ ಸಂಪರ್ಕಿಸಬೇಕು.


Spread the love

Leave a Reply

Please enter your comment!
Please enter your name here