ಪಡೀಲ್ ನ ಕಾರು ಶೋರೂಂನಲ್ಲಿ ಬೆಂಕಿ: ವಾಹನಗಳಿಗೆ ಹಾನಿ
ಪಡೀಲ್ ನ ಕಾರು ಶೋರೂಂವೊಂದರಲ್ಲಿ ಶುಕ್ರವಾರ ರಾತ್ರಿ ಹಠಾತ್ ಹೊಗೆ ಸಹಿತ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ಅಗ್ನಿಶಾಮಕದಳದವರು ಧಾವಿಸಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ಶುಕ್ರವಾರ ರಾತ್ರಿ 8 ಗಂಟೆ ವೇಳೆಗೆ ಹಠಾತ್ ಹೊಗೆ ಕಾಣಿಸಿಕೊಂಡು ಇಡೀ ಶೋರೂಂ ಆವರಿಸಿದೆ. ನೋಡನೋಡುತ್ತಿದ್ದ ಬೆಂಕಿ ಶೋರೂಂಗೆ ಹೊತ್ತಿಕೊಂಡಿದೆ. ಶೋರೂಂ ಒಳಗಿದ್ದ ಕಾರುಗಳಿಗೂ ಹಾನಿಯಾಗಿದೆ.
ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಂಟೆಗಳ ಕಾಲ ಕಾರ್ಯಾಚರಣೆ ಬೆಂಕಿ ನಂದಿಸಿದ್ದಾರೆ. ನಷ್ಟ ಪ್ರಮಾಣ ಇನ್ನಷ್ಟೇ ಅಂದಾಜಿಸಬೇಕಾಗಿದೆ.
