ಪಡುಬಿದ್ರಿಯಲ್ಲಿ ರಸ್ತೆ ಅಫಘಾತ – ಕಾರ್ಕಳ ಯುವಕ ಅಶ್ವಿನ್ ಸೋನ್ಸ್ ಸಾವು

Spread the love

ಪಡುಬಿದ್ರಿಯಲ್ಲಿ ರಸ್ತೆ ಅಫಘಾತ – ಕಾರ್ಕಳ ಯುವಕ ಅಶ್ವಿನ್ ಸೋನ್ಸ್ ಸಾವು

ಉಡುಪಿ: ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ನಡೆದ ಅಫಘಾತದಲ್ಲಿ ಗಂಭೀರ ಗಾಯಗೊಂಡು ಯುವಕನೋರ್ವ ಮೃತಪಟ್ಟ ಘಟನೆ ಪಡುಬಿದ್ರೆಯಲ್ಲಿ ನಡೆದಿದೆ.

ಮೃತ ಯುವಕನನ್ನು ಕಾರ್ಕಳ ನಿವಾಸಿ ಅಶ್ವಿನ್ ಸ್ಯಾಮ್ಸನ್ ಸೋನ್ಸ್ ಎಂದು ಗುರುತಿಸಲಾಗಿದೆ.

ಗುರುವಾರ ನಡ್ಸಾಲು ಗ್ರಾಮದ ಆಭರಣ ಜ್ಯುವೆಲರ್ ಎದುರು ಪಡುಬಿದ್ರೆ- ಕಾರ್ಕಳ ರಾಜ್ಯ ಹೆದ್ಯಾರಿ 1 ರ ರಸ್ತೆಯಲ್ಲಿ ಈ ದಿನ ಸಂದೀಪ್ ಕಾಮತ್ ಎಂಬವರು ತಮ್ಮ ಸುಜುಕಿ ಇಕೋ ವಾಹನದಲ್ಲಿ ಕಾರ್ಕಳ ಕಡೆಯಿಂದ ಪಡುಬಿದ್ರಿ, ಕಡೆಗೆ ಅತಿವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿಕೊಂಡು ಬಂದ್ದಿದ್ದು ಪಡುಬಿದ್ರೆ ಕಡೆಯಿಂದ ಕಾರ್ಕಳ ಕಡೆಗೆ ಚಲಾಯಿಸುತ್ತಿದ್ದ ಅಶ್ವಿನ್ ಅವರ ಜುಪಿಟರ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಜುಪಿಟರ್ ವಾಹನ ಸಮೇತ ಅದರ ಸವಾರ ಅಶ್ಮೀಲ್ ಸ್ಯಾಮ್ಸನ್ ಸೋನ್ಸ್ ಎಂಬರು ಕೆಳಗೆ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love