
Spread the love
ಪಡುಬಿದ್ರಿ: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯ ಬಂಧನ
ಉಡುಪಿ: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಓರ್ವನನ್ನು ಪಡುಬಿದ್ರಿ ಪೊಲೀಸರು ನಂದಿಕೂರು ಗ್ರಾಮದ ಸರ್ವಧಾ ಡಿಸ್ಟಿಲರಿ ಕಡೆ ರಸ್ತೆಯ ಮೋರಿಯ ಬಳಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಅನ್ಸಿಫ್ ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿಯಂತೆ ಪಡುಬಿದ್ರಿ ಠಾಣಾ ತನಿಖೆ ಪಿಎಸ್ ಐ ಸುದರ್ಶನ್ ದೊಡ್ಡಮನಿ ಅವರು ಕಾಪು ತಾಲೂಕು ನಂದಿಕೂರು ಗ್ರಾಮದ ಕೈಗಾರಿಕಾ ಪ್ರದೇಶದ ಸರ್ವಧಾ ಡಿಸ್ಟಿಲ್ಲರಿ ಕಡೆಗೆ ಹೋಗುವ ರಸ್ತೆಯ ಮೋರಿಯ ಬಳಿಯಲ್ಲಿ ನಿಂತಿದ್ದ ಆರೋಪಿತ ಅನ್ಸಿಫ್ ಎಂಬಾತನ ಮೇಲೆ ದಾಳಿ ನಡೆಸಿ, ಆತನು ಯಾವುದೇ ಪರವಾನಿಗೆ ಇಲ್ಲದೆ ಕಾನೂನು ಬಾಹಿರವಾಗಿ 910 ಗ್ರಾಂ ತೂಕದ ಒಂದು ಪ್ಯಾಕ್, 810 ಗ್ರಾಂ ತೂಕದ ಒಂದು ಪ್ಯಾಕ್ ಮತ್ತು ಪ್ಲಾಸ್ಟಿಕ್ನ ಸಣ್ಣ ಸ್ಟ್ರಿಫ್ ಪ್ಕಾಕ್ನಲ್ಲಿರುವ 5 ಗ್ರಾಂ ತೂಕದ ಗಾಂಜಾ ಒಟ್ಟು 1,725 ಗ್ರಾಮ್ ನಿಷೇದಿತ ವಸ್ತುವಾದ ಗಾಂಜಾವನ್ನು ಹೊಂದಿದ್ದು, ಅದರ ಅಂದಾಜು ಮೌಲ್ಯ 77,250/- ರೂಪಾಯಿ ಆಗಿರುತ್ತದೆ.
ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Spread the love