ಪಡುಬಿದ್ರಿ: ಜಾನುವಾರು ಅಕ್ರಮ ಸಾಗಾಟ; ಇಬ್ಬರ ಬಂಧನ

Spread the love

ಪಡುಬಿದ್ರಿ: ಜಾನುವಾರು ಅಕ್ರಮ ಸಾಗಾಟ; ಇಬ್ಬರ ಬಂಧನ

ಪಡುಬಿದ್ರಿ: ಹುಬ್ಬಳ್ಳಿಯಿಂದ ಕೇರಳಕ್ಕೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಬುಧವಾರ ಬೆಳಗ್ಗೆ ಪಡುಬಿದ್ರಿಯಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ 18 ಜಾನುವಾರುಗಳನ್ನು ರಕ್ಷಿಸಲಾಗಿದೆ.

ಚಾಲಕ ಹುಬ್ಬಳ್ಳಿಯ ಕಲಂದರ್‌ (33) ಮತ್ತು ಕ್ಲೀನರ್‌ ಕಲಘಟಗಿಯ ಅಬ್ದುಲ್‌ ರೆಹಮಾನ್‌ (35) ನನ್ನು ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿ ಆರಿಫ್‌ ಪರಾರಿಯಾಗಿದ್ದಾನೆ.

ಹೆಜಮಾಡಿ ಟೋಲ್‌ಗೇಟ್‌ ಬಳಿ ಪಡುಬಿದ್ರಿ ಎಸ್ಸೈ ಅಶೋಕ್‌ ಕುಮಾರ್‌ ಅವರ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಜಾನುವಾರು ಸಹಿತ ಒಟ್ಟು 18 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love