ಪಡುಬಿದ್ರಿ ಬ್ಲೂಫ್ಲ್ಯಾಗ್‌ ಬೀಚ್‌ ನಿರ್ವಹಣೆಯಲ್ಲಿ ಅಕ್ರಮ – ಜಿಲ್ಲಾಧಿಕಾರಿಗೆ ಮನವಿ

Spread the love

ಪಡುಬಿದ್ರಿ ಬ್ಲೂಫ್ಲ್ಯಾಗ್‌ ಬೀಚ್‌ ನಿರ್ವಹಣೆಯಲ್ಲಿ ಅಕ್ರಮ – ಜಿಲ್ಲಾಧಿಕಾರಿಗೆ ಮನವಿ

ಪಡುಬಿದ್ರೆ: ಇಲ್ಲಿನ ಬ್ಲೂಫ್ಲ್ಯಾಗ್ ಬೀಚ್ ನಲ್ಲಿ ನಕಲಿ ರಶೀದಿಗಳನ್ನು ನೀಡಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ನೊಂದ ಉದ್ಯೋಗಿಗಳು ಉಡುಪಿ ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ.

ಕಳೆದ15ತಿಂಗಳುಗಳಿಂದ ಕೆಲಸದ ವಾತಾವರಣವು ಹದಗೆಟ್ಟಿದ್ದು, ಇಲ್ಲಿ ಬೋಟಿಂಗ್‍ಗೆ ನಕಲಿ ರಶೀದಿಗಳನ್ನು ನೀಡಿ ಹಣ ವಸೂಲು ಮಾಡಲಾಗುತ್ತಿದೆ. ಇದು ಬೀಚ್ ಕಮಿಟಿಯ ಖಾತೆಗಾಗಲೀ, ಪ್ರವಾಸೋದ್ಯಮ ಇಲಾಖೆ ಖಾತೆಗೆ ಜಮೆಯಾಗುತ್ತಿಲ್ಲ. ಅಲ್ಲಿನ ಓರ್ವರ ಖಾಸಗಿ ಬ್ಯಾಂಕ್ ಖಾತೆಗೆ ಇದು ಜಮೆಯಾಗುತ್ತಿದೆ. ಈ ಕುರಿತಾಗಿ ಈ ಹಿಂದೆಯೂ ಜಿಲ್ಲಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖಾ ಪ್ರಭಾರ ಸಹಾಯಕ ನಿರ್ದೇಶಕರಿಗೂ ದೂರು ನೀಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲವೆಂದೂ ಮನವಿಗೆ ಸಹಿ ಮಾಡಿರುವ 22 ಗುತ್ತಿಗೆ ಉದ್ಯೋಗಿಗಳು ದೂರಿದ್ದಾರೆ.

ತಾವು 31 ಮಂದಿ ಇದ್ದು ತಮಗೆ ನ್ಯಾಯ ದೊರಕಬೇಕು. ಸೂಪರ್‌ವೈಸರ್‌ ಗಳಿಬ್ಬರು ತಮ್ಮ ಮೇಲೆ ಜೀವಭಯವನ್ನೂ ಹುಟ್ಟುಹಾಕುತ್ತಿರುವುದಾಗಿ ಹೇಳುತ್ತಿರುವ ಈ ಉದ್ಯೋಗಿಗಳು ಬೋಟಿಂಗ್ ಪಾವತಿಯು ಇಲ್ಲಿನ ಮಹಿಳಾ ಉದ್ಯೋಗಿಯೋರ್ವರ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿರುವುದಾಗಿ ಆರೋಪಿಸಿದ್ದಾರೆ.


Spread the love