
ಪಡುಬಿದ್ರೆ : ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜೂಜಾಟ; 15 ಮಂದಿ ಬಂಧನ, 1.17 ಲಕ್ಷ ನಗದು ವಶ
ಉಡುಪಿ: ಕಾಪು ತಾಲೂಕು ಹೆಜಮಾಡಿ ಗ್ರಾಮದ ತಾಜ್ಮಹಲ್ ಹಾಟ್ಸ್ಪೈಸ್ ಹೊಟೇಲ್ ಹಿಂಬದಿ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದ ತಂಡದ ಮೇಲೆ ಕಾಪು ವೃತ್ತ ನಿರೀಕ್ಷಕ ಪ್ರಕಾಶ್ ಮತ್ತು ಪಡುಬಿದ್ರೆ ಠಾಣಾಧಿಕಾರಿ ದಿಲೀಪ್ ಜಿ.ಆರ್. ನೇತೃತ್ವದ ತಂಡ ದಾಳಿ ನಡೆಸಿ 1,17,110-00 ರೂ ನಗದು ವಶಪಡಿಸಿಕೊಂಡು ಹದಿನೈದು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ
ಬಂಧಿತರನ್ನು ಕಂಕನಾಡಿ ನಿವಾಸಿ ಅಜಿತ್ ಕುಮಾರ್(31), ಅಶೋಕನಗರ ನಿವಾಸಿ ರಾಯ್ ಡಯಾಸ್(25), ಸುರತ್ಕಲ್ ನಿವಾಸಿ ಮೊಹಮ್ಮದ್(29), ಕೃಷ್ಣಾಪುರ ನಿವಾಸಿ ಮೊಹಮ್ಮದ್ ಇಮ್ರಾನ್ (28), ತೋಕುರು ನಿವಾಸಿ ಜಲಿಲ್ ಜೋಕಟ್ಟೆ (35), ಮೊಹಮ್ಮದ್ ಅನ್ವರ್ (45), ಬಜಾಲ್ ಗುಡ್ಡೆ ನಿವಾಸಿ ದೇವದಾಸ್ (47), ಕಾವೂರು ನಿವಾಸಿ ನಾಗೇಶ್ (40), ಕುಳಾಯಿ ನಿವಾಸಿ ಜಗದೀಶ್ (25), ಕಾರ್ನಾಡು ನಿವಾಸಿ ಶರೀಫ್ (43), ಬೈಕಂಪಾಡಿ ನಿವಾಸಿ ಪ್ರತಾಪ್ (38), ಕೆಂಜೂರು ನಿವಾಸಿ ರಾಜೇಶ್ (30), ಬೋಳಾರ್ ನಿವಾಸಿ ಅಶ್ರಫ್ (42), ಸತೀಶ್ ಶೆಟ್ಟಿ (51), ಬರ್ಕೆ ನಿವಾಸಿ ಚೇತನ್ (35) ಎಂದು ಗುರುತಿಸಲಾಗಿದೆ.
ಕಾಪು ವೃತ್ತ ನಿರೀಕ್ಷಕ ಪ್ರಕಾಶ್ ಅವರಿಗೆ ಕಾಪು ತಾಲೂಕು ಹೆಜಮಾಡಿ ಗ್ರಾಮದ ತಾಜ್ಮಹಲ್ ಹಾಟ್ಸ್ಪೈಸ್ ಹೊಟೇಲ್ ಹಿಂಬದಿ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದ ಕುರಿತು ಮಾಹಿತಿ ಬಂದಿದ್ದು ಅದರಂತೆ ಕಾಪು ವೃತ್ತ ನಿರೀಕ್ಷಕ ಪ್ರಕಾಶ್ ಮತ್ತು ಪಡುಬಿದ್ರೆ ಠಾಣಾಧಿಕಾರಿ ದಿಲೀಪ್ ಜಿ.ಆರ್. ನೇತೃತ್ವದ ತಂಡ ದಾಳಿ ನಡೆಸಿ ಹಣವನ್ನು ಪಣವಾಗಿ ಇಟ್ಟು ಅದೃಷ್ಟದ ಇಸ್ಪೀಟು ಆಟ ಆಡುತ್ತಿದ್ದ 15 ಮಂದಿಯನ್ನು ಬಂಧಿಸಿ ಅವರಿಂದ ಇಸ್ಪೀಟು ಎಲೆಗಳು– 52, ನಗದು ರೂಪಾಯಿ 1,17,110-00, ಹೊತ್ತಿ ಉರಿದ ಕ್ಯಾಂಡಲ್ತುಂಡು-2, ಹಳೆಯ ನ್ಯೂಸ್ಪೇಪರ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ