ಪಣಂಬೂರು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ – ಮನೆಗಳ್ಳತನ ಆರೋಪಿಯ ಬಂಧನ

Spread the love

ಪಣಂಬೂರು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ – ಮನೆಗಳ್ಳತನ ಆರೋಪಿಯ ಬಂಧನ

ಮಂಗಳೂರು: ಪಣಂಬೂರು ಪೊಲೀಸ್ ಠಾಣೆಯಲ್ಲಿ ಮನೆಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಳಗಿನ ತೂಕೂರು ಎಂಬಲ್ಲಿ ಮನೆಕಳ್ಳತನ ಮಾಡಿ ಚಿನ್ನಾಭರಣ ಸ್ವತ್ತು ಮತ್ತು ನಗದು ಹಣ ಕಳ್ಳತನ ಮಾಡಿದ್ದ ಆರೋಪಿಯನ್ನು ಪ್ರಕರಣ ವರದಿಯಾದ ಕೆಲವೇ ಗಂಟೆಗಳಲ್ಲಿ ಮೇಲಾಧಿಕಾರಿಗಳ ನಿರ್ದೇಶನದಂತೆ ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರ ನೇತೃತ್ವದ ಪೊಲೀಸ್ ತಂಡ ಪತ್ತೆ ಮಾಡಿ ರೂಪಾಯಿ 11,06,270 ಮೌಲ್ಯದ ಸುಮಾರು 248.600 ಗ್ರಾಂ ತೂಕದ ಚಿನ್ನಾಭರಣ ಹಾಗೂ ನಗದು ಹಣ ಸೇರಿದಂತೆ ಒಟ್ಟು 11,11,270/-ಮೌಲ್ಯದ ಚಿನ್ನಾಭರಣ ಸ್ವತ್ತು ಗಳನ್ನು ಪ್ರಕರಣಕ್ಕೆ ಸಂಬಂದಿಸಿದಂತೆ ಸ್ವಾಧೀನಪಡಿಸಿಕೊಂಡಿರುತ್ತಾರೆ.

ಈ ಪ್ರಕರಣದಲ್ಲಿ ಪ್ರಕರಣ ವರದಿಯಾದ ಕೆಲವೇ ಗಂಟೆಗಳಲ್ಲಿ ಕಿಪ್ತ ಕಾರ್ಯಚರಣೆ ನಡೆಸಿ ಆರೋಪಿಯನ್ನು ಪತ್ತೆ ಮಾಡಿ ಚಿನ್ನಾಭರಣ ಸ್ವತ್ತುಗಳನ್ನು ಅತೀ ಶೀಘ್ರವಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿತನು ಪಣಂಬೂರು ಠಾಣಾ ವ್ಯಾಪ್ತಿಯ ಕೆಳಗಿನ ತೋಕೂರು ಎಂಬಲ್ಲಿಯ ನಿವಾಸಿಯಾಗಿರುತ್ತಾನೆ.

ಆತನು ಈ ಪ್ರಕರಣದ ದೂರುದಾರರ ಮನೆಯ ನೆರೆಯ ಮನೆಯಲ್ಲಿ ವಾಸವಾಗಿದ್ದು ದೂರುದಾರರ ಮನೆಯಲ್ಲಿ ನಿಕಟಸಂಪರ್ಕಹೊಂದಿದ್ದು ಅನ್ನೋನ್ಯತೆಯಿಂದ ಇದ್ದು ದೂರುದಾರರ ಮನೆಯ ಸದಸ್ಯರ ವಿಶ್ವಾಸಗಳಿಸಿ ಮನೆಯ ವಿಚಾರಗಳನ್ನು ತಿಳಿದುಕೊಂಡು, ದೂರುದಾರರ ಮನೆಯವರು 2 ದಿನ ಮನೆಯಲ್ಲಿ ಇಲ್ಲದೇ ಇದ್ದ ಸಂದರ್ಭದಲ್ಲಿ ಮನೆಯ ಹಂಚನ್ನು ತೆಗೆದು ಒಳಗೆ ಹೋಗಿ ಕಳ್ಳತನ ನಡೆಸಿರುತ್ತಾನೆ ಹಾಗೂ ಆಪಾದಿತನು ಸಾಲಮಾಡಿಕೊಂಡಿದ್ದು ಹಣಕಾಸಿನ ತೊಂದರೆಯಲ್ಲಿದ್ದವನು ಅದೇ ಕಾರಣಕ್ಕಾಗಿ ಕಳ್ಳತನ ನಡೆಸಿರುತ್ತಾನೆ ಎಂಬುದು ಪ್ರಕರಣದ ತನಿಖೆಯಿಂದ ತಿಳಿದುಬಂದಿರುತ್ತದೆ.

ಈ ಪ್ರಕರಣದ ಪತ್ತೆ ಕಾರ್ಯವು ಮಂಗಳೂರು ನಗರದ ಪೊಲೀಸು ಆಯುಕ್ತರಾದ ಎನ್. ಶಶಿಕುಮಾರ್, ಐ.ಪಿ.ಎಸ್ ರವರ ನಿರ್ದೇಶನದಂತೆ ಹರಿರಾಂ ಶಂಕರ್, ಐ.ಪಿ.ಎಸ್, ಮಂಗಳೂರು ನಗರ ಪೊಲೀಸ್ ಉಪ ಆಯುಕ್ತರು (ಕಾ ಸು) ದಿನೇಶ್ ಕುಮಾರ್ ಬಾರಿಕೆ, ಪೊಲೀಸ್ ಉಪ ಆಯುಕ್ತರು(ಅ.ಸಂ) ಮತ್ತು ಮಂಗಳೂರು ಉತ್ತರ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ಎಸ್. ಮಹೇಶ್ ಕುಮಾರ್ ಅವರ ನೇತೃತ್ವದಲ್ಲಿ ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕರಾದ ಅಝಮತ್ ಅಲಿ, ಪೊಲೀಸ್ ಉಪ ನಿರೀಕ್ಷಕರಾದ ಉಮೇಶ್ ಕುಮಾರ್,ಎಂ.ಎನ್ ಮತ್ತು ಕುಮಾರೇಶನ್, ಪ್ರೋ, ಪೊಲೀಸ್ ಉಪ ನಿರೀಕ್ಷಕರಾದ ಮನೋಹರ್ ಪ್ರಸಾದ್ ಹಾಗೂ ಪಣಂಬೂರು ಪೊಲೀಸ್ ಠಾಣಾ ಎ.ಎಸ್.ಐ ಕೃಷ್ಣ ಹಾಗೂ ಸಿಬ್ಬಂಧಿಗಳಾದ ಡೇವಿಡ್ ಡಿ.ಸೋಜಾ, ಕಮಲಾಕ್ಷಿ, ಚಂದ್ರಹಾಸ್ ಅಳ್ವಾ, ದಾದನಾಬ್ ಹಾಗೂ ಇತರರು ಶ್ರಮಿಸಿರುತ್ತಾರೆ.


Spread the love