ಪತ್ನಿಗೆ ಕೈಕೊಟ್ಟು ಚಿನ್ನಾಭರಣದೊಂದಿಗೆ ಪತಿ ಎಸ್ಕೇಪ್

Spread the love

ಪತ್ನಿಗೆ ಕೈಕೊಟ್ಟು ಚಿನ್ನಾಭರಣದೊಂದಿಗೆ ಪತಿ ಎಸ್ಕೇಪ್

ಮೈಸೂರು: ಮ್ಯಾಟ್ರಿಮೋನಿ ಮೂಲಕ ಯುವತಿಯನ್ನು ಪರಿಚಯ ಮಾಡಿಕೊಂಡು ಮದುವೆಯಾಗಿದ್ದ ವ್ಯಕ್ತಿಯೊಬ್ಬ ಇದೀಗ ಆಕೆಗೆ ವರದಕ್ಷಿಣೆ ಕಿರುಕುಳ ನೀಡಿದ್ದಲ್ಲದೆ, ಆಕೆಯ ಚಿನ್ನಾಭರಣವನ್ನು ಪಡೆದುಕೊಂಡು ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.

ಕೇರಳ ಮೂಲದ ಸುನೀಶ್ ಪಿಳ್ಳೈ (33) ಎಂಬಾತನೇ ಪತ್ನಿಗೆ ಮೋಸ ಮಾಡಿ ಪರಾರಿಯಾಗಿರುವ ವಂಚಕ, ಈತ ಕಳೆದ ಐದು ವರ್ಷಗಳ ಹಿಂದೆ ಮ್ಯಾಟ್ರಿಮೋನಿಯಲ್ಲಿ ಮೈಸೂರಿನ ವಿಜಯನಗರದ ವಾಸಿ ಪ್ರೀತಿ ಸಿಂಗ್ ಎಂಬಾಕೆಯನ್ನು ಮದುವೆಯಾಗಿದ್ದನು. ಮದುವೆ ವೇಳೆ ಪ್ರೀತಿ ಸಿಂಗ್ ಮನೆಯವರು ವರದಕ್ಷಿಣೆಯಾಗಿ ಹಣ ಚಿನ್ನಾಭರಣ ನೀಡಿದ್ದರು. ಮದುವೆ ನಂತರ ಒಂದು ಮಗುವೂ ಇದ್ದು ಇತ್ತೀಚೆಗೆ ಈತ ಆಕೆಯ ಚಿನ್ನಾಭರಣವನ್ನು ಪಡೆದುಕೊಂಡಿದ್ದಲ್ಲದೆ, ವರದಕ್ಷಿಣೆಯನ್ನು ತವರಿಂದ ತರುವಂತೆ ಕಿರುಕುಳ ನೀಡುತ್ತಿದ್ದನು.

ಈತನ ಹಿಂಸೆಯಿಂದ ಬೇಸತ್ತ ಪ್ರೀತಿ ಸಿಂಗ್ ಪತಿ ಸುನೀಶ್ ಪಿಳ್ಳೈ ವಿರುದ್ಧ ಮೈಸೂರಿನ ಮಹಿಳಾ ಪೋಲಿಸ್ ಸ್ಟೇಷನ್ ನಲ್ಲಿ ದೂರು ನೀಡಿದ್ದಳು ಅದರಂತೆ ಪೊಲೀಸರು ಐಪಿಸಿ ಸೆಕ್ಷನ್ 498 ಕಾಯ್ದೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.ಇದೀಗ ಆತ ನಾಪತ್ತೆಯಾಗಿದ್ದಾನೆ. ನನ್ನಂತೆ ಬಹಳಷ್ಟು ಯುವತಿಯರಿಗೆ ಸುನೀಶ್ ಮೋಸ ಮಾಡಿ ಮದುವೆ ಆಗಿದ್ದಾನೆ ಎಂದು ಪ್ರೀತಿ ಸಿಂಗ್ ದೂರಿನಲ್ಲಿ ತಿಳಿಸಿದ್ದಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


Spread the love

Leave a Reply

Please enter your comment!
Please enter your name here