ಪತ್ರಕರ್ತರಿಗೆ ಉಡುಗೊರೆ ಪರೋಕ್ಷವಾಗಿ ಓಪ್ಪಿಕೊಂಡತೆ: ಸುಶೀಲ್ ನೊರೊನ್ಹಾ

Spread the love

ಪತ್ರಕರ್ತರಿಗೆ ಉಡುಗೊರೆ ಪರೋಕ್ಷವಾಗಿ ಓಪ್ಪಿಕೊಂಡತೆ: ಸುಶೀಲ್ ನೊರೊನ್ಹಾ

ಪತ್ರಿಕಾ ಮಾಧ್ಯಮದವರಿಗೆ ಉಡುಗೊರೆ ಮುಖಾಂತರ ಹಣಕೊಟ್ಟ ಅರೋಪ ಬಹಳ ಗಂಭೀರ ಸ್ವರೂಪದಾಗಿದು ಈ ಆರೋಪವನ್ನು ಸರ್ಕಾರ ಅಥವಾ ಅಡಳಿತರೂಡ ಬಿಜೆಪಿ ಪಕ್ಷ ಸರಾಸಗಟಾಗಿ ಅಲ್ಲಗಳೆಯುವುದು ಕಾಣುವುದಿಲ್ಲ. ಇದರ ಬದಲು ಕಾಂಗ್ರೆಸ್ ಪಕ್ಷ ಅಡಳಿತ ಸಂದರ್ಭದಲ್ಲಿ ಈ ರೀತಿ ಮಾಡಿದೆ ಎಂದು ಹೇಳುತ್ತಿದು ಇದು ಸಮರ್ಪಕ ಉತ್ತರ ಅಲ್ಲ. ಅದರ ಬದಲು ಅದನ್ನು ತನಿಖೆ ಓಳಪಡಿಸಿ ನಿಜಾಂಶ ಹೊರಬರಲಿ.

ಆದರೆ ಸಂವಿಧಾನದ 4 ನೇ ಅಂಗವಾದ ಪತ್ರಿಕಾ ಅಂಗವನ್ನು ಯಾರೋ ಮಾಡಿದ ತಪ್ಪಿಗೆ ಇಡೀ ಪತ್ರಿಕಾ ರಂಗವನ್ನು ಇಡೀ ಕರ್ನಾಟಕದ ಜನಸಾಮಾನ್ಯರು ಸಂಶಯಾಸ್ಪದ ರೀತಿಯಲ್ಲಿ ನೋಡ ಬೇಕಾಗುವ ಪರಿಸ್ಥಿತಿ ಸಹಿಸಲು ಅಸಾಧ್ಯ. ಪತ್ರಿಕಾ ರಂಗಕ್ಕೆ ಸರ್ಕಾರ ಜಾಹೀರಾತು ಕೊಡುವುದು ಸಹಜ. ಇಲ್ಲವಾದಲ್ಲಿ ಪತ್ರಿಕಾ ಉದ್ಯಮ ನಡೆಸಲು ಕಷ್ಟ. ಹಾಗೆಂದು ಕೆಲವು ಪತ್ರಿಕಾ ಮಾಧ್ಯಮಗಳ ಪ್ರಮುಖರಿಗೆ ಈ ರೀತಿಯ ಅಮಿಷ ಓಡ್ಡಿ ಪತ್ರಿಕಾ ಮಾಧ್ಯಮಗಳನು ತಮ್ಮ ಕಪಿಮುಷ್ಟಿಯಲಿ ಇಟ್ಟು ಕೊಂಡು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯಲು ನೋಡುವುದು ನಾಚಕೇಡಿತನ. ಈ ಬಗ್ಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು ಎಂದು ಜೆಡಿಎಸ್ ದ. ಕ. ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹಾ ತಿಳಿಸಿದಾರೆ


Spread the love