ಪರವಾನಿಗೆ ಪಡೆಯದೆ ತಡರಾತ್ರಿ ತನಕ ಡಿಜೆ ಹಾಕಿ ನೃತ್ಯ – ಉಡುಪಿ ನಗರ ಪೊಲೀಸರ ದಾಳಿ

Spread the love

ಪರವಾನಿಗೆ ಪಡೆಯದೆ ತಡರಾತ್ರಿ ತನಕ ಡಿಜೆ ಹಾಕಿ ನೃತ್ಯ – ಉಡುಪಿ ನಗರ ಪೊಲೀಸರ ದಾಳಿ

ಉಡುಪಿ: ಪರವಾನಿಗೆ ಪಡೆಯದೆ ತಡರಾತ್ರಿ ತನಕ ಡಿಜೆ ಹಾಕಿದ ಕುರಿತು ಉಡುಪಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಘಟನೆ ಪುತ್ತೂರು ಗ್ರಾಮದ ಕೊಡಂಕೂರು ಎಂಬಲ್ಲಿ ನಡೆದಿದೆ.

ಉಡುಪಿ ನಗರ ಠಾಣಾ ಎ ಎಸ್ ಐ ಜಯಕರ ಎ ಎಂಬವರು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಮಾರ್ಚ್ 23 ರ ಬೆಳಿಗಿನ ಜಾವ 00.15 ಗಂಟೆ ಸಮಯದಲ್ಲಿ ನಿಟ್ಟೂರು ಪರಿಸರದಲ್ಲಿ ಅತೀ ಕರ್ಕಶವಾಗಿ ಡಿಜೆ ಸೌಂಡ್ ಹಾಕಿದ್ದು ಕೊಡಂಕೂರು ಪುತ್ರನ್ ಗ್ಯಾಸ್ ಗೋಡೌನ್ ಬಳಿ ರವಿರಾಜ್ ಎಂಬವರ ಮನೆಯ ಅಂಗಳದಲ್ಲಿ ಶಾಮಿಯಾನ ಹಾಕಿ ಯಾವುದೇ ಪರವಾನಿಗೆ ಅಥವಾ ಪೂರ್ವಾನುಮತಿ ಪಡೆಯದೆ ಡಿಜೆ ಸೌಂಡ್ಸ್ ಹಾಕಿಕೊಂಡು ನೃತ್ಯ ಮಾಡುತ್ತಿದ್ದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸೌಂಡ್ಸ್ ಮಿಕ್ಸರ್ ಹಾಗೂ 2 ಸೌಂಡ್ ಬಾಕ್ಸ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love