ಪರಸ್ತ್ರೀಯೊಂದಿಗೆ ಸಿಕ್ಕಿ ಬಿದ್ದ ಶಾಸಕರ ಸಹೋದರ

Spread the love

ಪರಸ್ತ್ರೀಯೊಂದಿಗೆ ಸಿಕ್ಕಿ ಬಿದ್ದ ಶಾಸಕರ ಸಹೋದರ

ಕೆ.ಆರ್.ಪೇಟೆ: ತಾಲೂಕಿನ ಮಾಜಿ ಶಾಸಕರೊಬ್ಬರ ಸಹೋದರ ಕೆ.ಬಿ.ರವಿಕುಮಾರ್ ತಮ್ಮ ಮನೆಯಲ್ಲಿ ಪರಸ್ತ್ರೀಯೊಂದಿಗೆ ಸಿಕ್ಕಿಬಿದ್ದಿದ್ದು ಮನೆಯಿಂದ ಹೊರಬರಲು ಪೊಲೀಸರ ರಕ್ಷಣೆ ಪಡೆದ ಘಟನೆ ನಡೆದಿದೆ.

ಪಟ್ಟಣದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿರುವ ಮಹಿಳೆ ಶುಕ್ರವಾರ ರಾತ್ರಿ ಪಟ್ಟಣದ ಬಸವೇಶ್ವರ ನಗರದಲ್ಲಿರುವ ಕೆ.ಬಿ.ರವಿ ಅವರ ಮನೆಯಲ್ಲಿ ರವಿಕುಮಾರ್ ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು ಗುಟ್ಟಾಗಿ ಕದ್ದುಮುಚ್ಚಿ ಆಗಾಗ ಸಂಪರ್ಕ ಹೊಂದುತ್ತಿರುವುದನ್ನು ಪತ್ತೆಹಚ್ಚಲು ಕಾರ್ಯೋನ್ಮುಖವಾಗಿದ್ದ ಪತಿ ಕೊಮ್ಮೇನಹಳ್ಳಿ ವಿಶ್ವನಾಥ್ ಮತ್ತು ಅವರ ಸಂಬಂಧಿಗಳು ರವಿ ಮತ್ತು ಮಹಿಳೆ ಗುಟ್ಟಾಗಿ ಸೇರಿರುವುದನ್ನು ತಿಳಿದು ಮಧ್ಯರಾತ್ರಿಯ ಸಮಯದಲ್ಲಿ ಮನೆಯ ಬಾಗಿಲಿನಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ರಾತ್ರಿಯಿಡೀ ಮನೆಯನ್ನು ಕಾದು ಬೆಳಿಗ್ಗೆ ಆಕೆಯು ಮನೆಯಿಂದ ಹೊರಬಂದು ತನ್ನ ಸ್ಕೂಟಿಯನ್ನು ಚಾಲನೆ ಮಾಡಲು ಪ್ರಯತ್ನಿಸುತ್ತಿದ್ದಂತೆ ಹಿಡಿದು ತನ್ನ ಪ್ರಿಯಕರ ರವಿಯೊಂದಿಗೆ ಪೋಲಿಸರಿಗೆ ಒಪ್ಪಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳ ಹಿಂದಷ್ಟೇ ಪ್ರೀತಿಸಿ ವಿಶ್ವನಾಥನನ್ನು ಮದುವೆಯಾಗಿದ್ದ ಆಕೆಗೆ ಮೂರು ವರ್ಷದ ಹೆಣ್ಣು ಮಗುವಿದೆ. ತನ್ನ ಪತಿ ವಿಶ್ವನಾಥ್ ನೊಂದಿಗೆ ಭಿನ್ನಾಭಿಪ್ರಾಯವನ್ನು ಹೊಂದಿದ್ದ ಆಕೆ ತನ್ನ ಗಂಡನಿಗೆ ಒತ್ತಡ ಹಾಕಿ ರವಿಕುಮಾರ್ ಒಡೆತನದ ಕಾಂಪ್ಲೆಕ್ಸ್‌ನಲ್ಲಿ ಬ್ಯೂಟಿ ಝೋನ್ ಎಂಬ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು. ಪತಿಯೊಂದಿಗೆ ಜಗಳವಾಡಿಕೊಂಡು ತನ್ನ ತಂದೆಯ ಮನೆಯಲ್ಲಿದ್ದ ಆಕೆ ತನ್ನ ಪತಿ ಹಾಗೂ ಅತ್ತೆ ಮಾವನ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸನ್ನು ದಾಖಲಿಸಿ ವಿವಾಹ ವಿಚ್ಛೇಧನಕ್ಕೆ ಹಾಗೂ ಜೀವನಾಂಶಕ್ಕೆ ಕಾನೂನು ಹೋರಾಟ ನಡೆಸುತ್ತಿದ್ದಳು.

ಶುಕ್ರವಾರ ರಾತ್ರಿ ತನ್ನ ಪ್ರಿಯಕರ ರವಿಕುಮಾರ್ ಮನೆಯಲ್ಲಿ ತಂಗಿದ್ದು ಅನೈತಿಕ ಚಟುವಟಿಕೆಯಲ್ಲಿ ತೊಡಗಿರುವ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ರವಿಕುಮಾರ್ ಮನೆಯ ಬಳಿ ಹೋದಾಗ ಆಕೆಯ ಸ್ಕೂಟಿ ಗೇಟಿನೊಳಗೆ ನಿಂತಿರುವುದನ್ನು ಖಾತ್ರಿಪಡಿಸಿಕೊಂಡ ಪತಿ ವಿಶ್ವನಾಥ ಊರಿನಿಂದ ತನ್ನ ತಂದೆತಾಯಿಗಳು ಹಾಗೂ ಸಂಬಂಧಿಗಳನ್ನು ಕರೆಸಿ ಆಕೆಯ ನಿಜಬಣ್ಣವನ್ನು ಬಯಲು ಮಾಡಿದ್ದಾರೆ.

ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ನಡೆದ ನಾಟಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಹಿಳೆ ಹಾಗೂ ಆಕೆಯ ಪ್ರಿಯಕರ ಮತ್ತು ಪತಿ ವಿಶ್ವನಾಥ ಅವರೊಂದಿಗೆ ರಾಜೀ ಸಂಧಾನ ನಡೆಸಿದ ಗ್ರಾಮಸ್ಥರು ಮಹಿಳೆ ಕೋರ್ಟಿನಲ್ಲಿ ದಾಖಲಿಸಿರುವ ವರದಕ್ಷಿಣೆ ಕಿರುಕುಳ ಹಾಗೂ ಜೀವನಾಂಶದ ಸುಳ್ಳು ಕೇಸನ್ನು ವಾಪಸ್ ಪಡೆಯುವುದು, ಹಾಗೂ ತನ್ನ ಹೆಣ್ಣು ಮಗುವನ್ನು ಗಂಡ ವಿಶ್ವನಾಥನ ವಶಕ್ಕೆ ಒಪ್ಪಿಸುವುದು ಸೇರಿದಂತೆ ವಿಶ್ವನಾಥನ ತಂಟೆಗೆ ಮತ್ತೆ ಬರದಂತೆ ಮುಚ್ಚಳಿಕೆ ಬರೆಸಿ ರಾಜಿಸಂಧಾನ ಮಾಡಿಸಿ ಪ್ರಕರಣವನ್ನು ಇತ್ಯರ್ಥಪಡಿಸಿದ್ದಾರೆ.

ಕೆ.ಆರ್.ಪೇಟೆ ಪಟ್ಟಣದಲ್ಲಿ ಅನೈತಿಕ ಚಟುವಟಿಕೆ ನಡೆಸುವಾಗ ಕಾಂಗ್ರೇಸ್ ಮುಖಂಡ ರವಿಕುಮಾರ್ ಹಾಗೂ ಪ್ರಿಯತಮೆ ಲಕ್ಷ್ಮಿಯು ಸಿಕ್ಕಿಬಿದ್ದು ಪೋಲಿಸರ ಅತಿಥಿಗಳಾಗಿರುವ ಸುದ್ದಿಯು ಕಾಳ್ಗಿಚ್ಚಿನಂತೆ ಹರಡಿದ ಹಿನ್ನೆಲೆಯಲ್ಲಿ ಪ್ರೇಮಿಗಳ ಜೋಡಿಯನ್ನು ವೀಕ್ಷಿಸಲು ಠಾಣೆಯ ಮುಂಭಾಗದಲ್ಲಿ ಜನಜಾತ್ರೆಯೇ ನೆರೆದಿತ್ತು.


Spread the love

Leave a Reply

Please enter your comment!
Please enter your name here