ಪರಿಷತ್‌ ಚುನಾವಣೆ: ಸಚಿವ‌ ಕೋಟ ನಾಮಪತ್ರ‌ ಸಲ್ಲಿಕೆ

Spread the love

ಪರಿಷತ್‌ ಚುನಾವಣೆ: ಸಚಿವ‌ ಕೋಟ ನಾಮಪತ್ರ‌ ಸಲ್ಲಿಕೆ
 

ಮಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯಲಿರುವ‌ ಚುನಾವಣೆಯಲ್ಲಿ‌ ದಕ್ಷಿಣ ಕನ್ನಡ‌ ದ್ವಿಸದಸ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶನಿವಾರ ದಕ್ಷಿಣ‌ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರಿಗೆ ನಾಮಪತ್ರ ಸಲ್ಲಿಸಿದರು.


ಈ ಸಂದರ್ಭದಲ್ಲಿ ಸಚಿವರಾದ ಎಸ್. ಅಂಗಾರ, ಸುನೀಲ ಕುಮಾರ ಬಿಜೆಪಿ ಉಭಯ ಜಿಲ್ಲಾಘಟಕಗಳ ಅಧ್ಯಕ್ಷರಾದ ಕುಯಿಲಾಡಿ ಸುರೇಶ್‌ ನಾಯ್ಕ್, ಸುದರ್ಶನ ಮೂಡುಬಿದಿರೆ ಇದ್ದರು.

ದ್ವಿಸದಸ್ಯ ಕ್ಷೇತ್ರದಲ್ಲಿ ಒಂದು ಸ್ಥಾನಕ್ಕೆ ಮಾತ್ರ ಬಿಜೆಪಿ ಸ್ಪರ್ಧಿಸುತ್ತಿದ್ದು, ಕೋಟ ಶ್ರೀನಿವಾಸ ಪೂಜಾರಿ ಅವರಿಗೆ‌ ಟಿಕೆಟ್‌ ನೀಡಲಾಗಿದೆ.


Spread the love