ಪರಿಸರ ದಿನ ಒಂದೇ ದಿನಕ್ಕೆ ಸೀಮಿತವಾಗದಿರಲಿ

Spread the love

ಪರಿಸರ ದಿನ ಒಂದೇ ದಿನಕ್ಕೆ ಸೀಮಿತವಾಗದಿರಲಿ

ಮೈಸೂರು: ವಿಶ್ವ ಪರಿಸರ ದಿನ ಒಂದೇ ದಿನಕ್ಕೆ ಇದು ಸೀಮಿತವಾಗದೆ ವರ್ಷ ಪೂರ್ತಿ ಗಿಡಗಳ ನೆಡುವ ಮತ್ತು ಪೋಷಿಸುವ ಕೆಲಸಗಳು ನಡೆಯಬೇಕು ಎಂದು ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಹೇಳಿದರು.

ವಿಶ್ವ ಪರಿಸರ ದಿನದ ಅಂಗವಾಗಿ ವಾಡ್೯ 56 ರ ಕೃಷ್ಣಮೂರ್ತಿಪುರಂ ನಲ್ಲಿರುವ ಅನಂತಸ್ವಾಮಿ ಉದ್ಯಾನವನ ದಲ್ಲಿ ಹಾಗೂ ಅಶೋಕಪುರಂ ನ ಅಂಬೇಡ್ಕರ್ ಉದ್ಯಾನವನದಲ್ಲಿ ಸಸಿ ನೆಟ್ಟು, ಕ್ಷೇತ್ರದಲ್ಲಿರುವ ಪ್ರತಿ ಮನೆಗಳಿಗೂ ಎರಡರಂತೆ ಆರ್ಯುವೇದ ಗಿಡಗಳನ್ನು ವಿತರಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪರಿಸರ ಸಂರಕ್ಷಣೆಗೆ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದು, ಗ್ರೀನ್ ಸ್ಕಿಲ್ ಡೆವಲಪ್ ಮೆಂಟ್, ನಮಾಮಿ ಗಂಗೆ, ವಿದ್ಯುತ್ ವಾಹನಗಳಿಗೆ ಗಳಿಗೆ ಉತ್ತೇಜನ, 2030 ರ ಒಳಗೆ ಭಾರತದ ರೈಲ್ವೇಯನ್ನು ಸಂಪೂರ್ಣ ವಿದ್ಯುತೀಕರಣ ಮಾಡುವಿಕೆ ಇವೆಲ್ಲ ಮಹತ್ತರವಾದವುಗಳಾಗಿವೆ.

ಮುಂದಿನ ಪೀಳಿಗೆಗೆ ಪರಿಸರ ಜಾಗೃತಿಯನ್ನು ನೀಡಬೇಕಾದ ಹೊಣೆ ನಮ್ಮ ಮೇಲಿದೆ ಎಂದ ಅವರು, ಕೃಷ್ಣಮೂರ್ತಿಪುರಂ ನಲ್ಲಿ ವಾಸವಾಗಿದ್ದ ಸಂಗೀತಕಾರರಾಗಿದ್ದ ಅನಂತಸ್ವಾಮಿ ಅವರ ಅವರ ಹೆಸರಲ್ಲಿರುವಂತಹ ಪಾರ್ಕ್ ಅನ್ನು ವಿಶೇಷವಾಗಿ ಅಭಿವೃದ್ಧಿ ಪಡಿಸಿ ಅವರ ಹಾಡುಗಳು ಸದಾ ಕಾಲ ಪಾರ್ಕ್ ನಲ್ಲಿ ಕೇಳುವಂತಹ ಯೋಜನೆಯನ್ನ ರೂಪಿಸಿದ್ದೇವೆ. ಇದೀಗ ಪುಟ್ಟ ಬಾಲಕಿ ಚಿರಂತನ ಗೆ ಆಯುರ್ವೇದದ ಗಿಡವನ್ನ ಕೊಡುವ ಮೂಲಕ ಒಂದು ವರ್ಷದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ, ನಮ್ಮಲ್ಲಿರುವಂತಹ 62 ಸಾವಿರ ಮನೆಗಳಿಗೆ 2 ಆಯುರ್ವೇದಿಕ್ ಗಿಡಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಪಾಲಿಕಾ ಸದಸ್ಯರಾದ ಪಲ್ಲವಿ ಬೇಗಂ, ಪಾಲಿಕೆಯ ನಾಮ ನಿರ್ದೇಶಿತ ಸದಸ್ಯರಾದ ಪಿ.ಟಿ ಕೃಷ್ಣ. 56 ನೆ ವಾರ್ಡಿನ ಉಸ್ತುವಾರಿ ನಾಗಶಂಕರ್, ಬಿಜೆಪಿ ಪ್ರಮುಖರಾದ ಕೀರ್ತಿ ರಾಜ್, ರಾಜೀವ್, ರವಿ, ಮಧು, ಕುಮಾರ್ , ಜಿತೇಂದ್ರ, ಪ್ರವೀಣ್, ಶ್ರೀಧರ್ ನಗರಪಾಲಿಕಾ ಆರೋಗ್ಯ ಅಧಿಕಾರಿಗಳು, ವಲಯ ಆಯುಕ್ತರು ಹಾಗೂ ಅಭಿವೃದ್ಧಿ ಅಧಿಕಾರಿಗಳು, ಪೊಲೀಸ್ ಠಾಣೆಯ ನಿರೀಕ್ಷಕರು ಇದ್ದರು.


Spread the love