
Spread the love
ಪರ್ಯಾಯ ಬಂದೋಬಸ್ತ್ ಗೆ ಸಜ್ಜುಗೊಂಡ ಜಿಲ್ಲಾ ಪೊಲೀಸರು
ಉಡುಪಿ: ಜನವರಿ 17ರ ರಾತ್ರಿ ಮತ್ತು ಜನವರಿ 18 ರಂದು ನಡೆಯಲಿರುವ ಪರ್ಯಾಯ ಮಹೋತ್ಸವಕ್ಕೆ ಜಿಲ್ಲಾ ಪೊಲೀಸ್ ಸಂಪೂರ್ಣ ಬಂದೋಬಸ್ತ್ ವ್ಯವಸ್ಥೆ ಮಾಡಿರುವುದಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎನ್ ವಿಷ್ಣುವರ್ಧನ್ ಹೇಳಿದ್ದಾರೆ.
ಪರ್ಯಾಯ ಬಂದೋಬಸ್ತ್ ಪ್ರಯುಕ್ತ ಒರ್ವ ಎಸ್ಪಿ, ಒರ್ವ ಹೆಚ್ಚುವರಿ ಎಸ್ಪಿ ಸೇರಿದಂತೆ ಡಿವೈಎಸ್ಪಿಯಿಂದ ಪಿಎಸ್ ಐ ಹಂತದ 70 ಮಂದಿ ಅಧಿಕಾರಿಗಳು, 60 ಮಂದಿ ಎಎಸೈಗಳು, 60 ಡಬ್ಲ್ಯೂಹೆಚ್ ಸಿ./ಡಬ್ಲ್ಯೂಪಿಸಿ, 650 ಕಾನ್ಸ್ ಟೇಬಲ್ ಗಳು, 4 ಎಎಸ್.ಸಿ ತಂಡ, 7 ಡಿಎಆರ್ ತಂಡ, 2 ಕೆ ಎಸ್ ಆರ್ ಪಿ ಮತ್ತು ಒಂದು ಕ್ವಿಕ್ ರೆಸ್ಪಾನ್ಸ್ ತಂಡವನ್ನು ಬಂದೋಬಸ್ತಿಗಾಗಿ ನಿಯೋಜನೆಗೊಳಿಸಿಲಾಗಿದೆ. ಜನತೆ ಪರ್ಯಾಯದ ಅವಧಿಯಲ್ಲಿ ಪೊಲೀಸರೊಂದಿಗೆ ಬಂದೋಬಸ್ತ್ ವಿಚಾರದಲ್ಲಿ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.
Spread the love