ಪರ್ಯಾಯ ಮಹೋತ್ಸವ : ಉಡುಪಿ ನಗರ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ

Spread the love

ಪರ್ಯಾಯ ಮಹೋತ್ಸವ : ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ

ಉಡುಪಿ: ನಗರದಲ್ಲಿ ಜನವರಿ 17 ಮತ್ತು 18 ಪರ್ಯಾಯ ಮಹೋತ್ಸವ ಜರುಗಲಿದ್ದು ಈ ಪ್ರಯುಕ್ತ ಸುಗಮ ವ್ಯವಸ್ಥೆಯನ್ನು ಮಾಡುವ ಸಲುವಾಗಿ ಜನವರಿ 17 ರ ಮಧ್ಯಾಹ್ನ 2 ಗಂಟೆಯಿಂದ 18 ರ ಬೆಳೀಗ್ಗೆ 7 ರ ವರೆಗೆ ವಾಹನ ಸಂಚಾರ ನಿಷೇಧ ಮತ್ತು ಬದಲಿ ರಸ್ತೆ ಸಂಚಾರ ಮಾರ್ಗದ ಕುರಿತು ಜಿಲ್ಲಾಧಿಕಾರಿ ಕೂರ್ಮ ರಾವ್‌ ಎಂ ಆದೇಶ ಹೊರಡಿಸಿದ್ದಾರೆ

ಮಂಗಳೂರು ಕಡೆಯಿಂದ ಉಡುಪಿ ಮಣಿಪಾಲ ಕಡೆಗೆ ಬರುವಂತಹ ವಾಹನ: *ದಿನಾಂಕ:17/01/2022 ರಂದು ಮಧ್ಯಾಹ್ನ 2.00 ಗಂಟೆಯಿಂದ ದಿನಾಂಕ.18/01/2022 ರಂದು ಬೆಳಿಗ್ಗೆ 7.00 ಗಂಟೆಯವರೆಗೆ ನೇರವಾಗಿ ರಾಹ 66 ರಲ್ಲಿ ಕರಾವಳಿ ಜಂಕ್ಷನ್‌ತಲುಪಿ ನಂತರ ಬನ್ನಂಜೆ ಮಾರ್ಗವಾಗಿ ಉಡುಪಿ ಸಿಟಿ ಮತ್ತು ಸರ್ವಿಸ್ ಬಸ್ ನಿಲ್ದಾಣಕ್ಕೆ ಪ್ರವೇಶಿಸುವುದು ಮುಂದುವರಿದು ಮಣಿಪಾಲಕ್ಕೆ ಹೋಗುವುದು.ಉಡುಪಿ ನಗರಕ್ಕೆ ಸಂಜೆ 7.00 ಗಂಟೆಯಿಂದ ಬೆಳಿಗ್ಗೆ 07:00 ಗಂಟೆಯ ತನಕ ಎಲ್ಲಾ ವಾಹನಗಳು ಪ್ರವೇಶಿಸುವುದನ್ನು ನಿಷೇಧಿಸಿದ ಸಂಜೆ 7:00 ಗಂಟೆಯಿಂದ ಬೆಳಿಗ್ಗೆ 07:00 ಗಂಟೆಯತನಕ ಕರಾವಳಿ ಜಂಕ್ಷನ್ ಅಂತಿಮ ನಿಲುಗಡೆಯಾಗಿದ್ದು, ಕರಾವಳಿ ಜಂಕ್ಷನ್‌ನಲ್ಲಿ ಪ್ರಯಾಣಿಕರನ್ನು ಇಳಿಸಿ ಅಲ್ಲಿಂದಲೇ ಪ್ರಯಾಣಿಕರನ್ನು ಕರೆದುಕೊಂಡು ವಾಪಾಸು ಮಂಗಳೂರು ಕಡೆಗೆ ರಾಹ 66 ರಲ್ಲಿ ಅಂಬಲಪಾಡಿ, ಬಲಾಯಿಪದ ಮುಖೇನಾ ಹೋಗುವುದು.ಮಣಿಪಾಲಕ್ಕೆ ಹೋಗುವ ವಾಹನಗಳು ಕರಾವಳಿ ಜಂಕ್ಷನ್‌ನಿಂದ ಮುಂದಕ್ಕೆ ಸಾಗಿ ಅಂಬಾಗಿಲು ಮುಖೇನ ಪರಂಪಳ್ಳಿ ರಸ್ತೆಯಿಂದಾಗಿ ಕಾಯಿನ್ ಸರ್ಕಲ್, ಸಿಂಡಿಕೇಟ್ ಸರ್ಕಲ್ ಮಾರ್ಗವಾಗಿ ಮಣಿಪಾಲ, ಕಾರ್ಕಳ ಕಡೆಗೆ ಹೋಗುವುದು.

ಕುಂದಾಪುರ ಕಡೆಯಿಂದ ಉಡುಪಿ ಮಣಿಪಾಲ ಕಡೆಗೆ ಬರುವಂತಹ ವಾಹನ:

ದಿನಾಂಕ:17/01/2022 ರಂದು ಸಂಜೆ 7.00 ಗಂಟೆಯತನಕ ಕುಂದಾಪುರ ಬ್ರಹ್ಮಾವರ ಮಾರ್ಗವಾಗಿ ಉಡುಪಿ ನಗರಕ್ಕೆ ಬರುವ ಎಲ್ಲಾ ವಾಹನಗಳು ಅಂಬಾಗಿಲು ಮುಖೇನ ರಾಹ66 ರಲ್ಲಿ ಕರಾವಳಿ ಜಂಕ್ಷನ್ ತಲುಪಿ ಬನ್ನಂಜೆ ಮಾರ್ಗವಾಗಿ ಉಡುಪಿ ಸಿಟಿ, ಸರ್ವಿಸ್ ಬಸ್ ನಿಲ್ದಾಣಕ್ಕೆ ಪ್ರವೇಶಿಸುವುದು, ಸಂಜೆ 7:00 ಗಂಟೆಯಿಂದ ಬೆಳಿಗ್ಗೆ 07:00 ಗಂಟೆಯತನಕ ಕುಂದಾಪುರದಿಂದ ಉಡುಪಿ ನಗರಕ್ಕೆ ಆಗಮಿಸುವ ಎಲ್ಲಾ ವಾಹನಗಳನ್ನು ಪ್ರವೇಶಿಸುದನ್ನು ನಿಷೇಧಿಸಿದ. ಸಂಜೆ 7:00 ಗಂಟೆಯಿಂದ ಬೆಳಿಗ್ಗೆ 07:00 ಗಂಟೆಯತನಕ ಕರಾವಳಿ ಜಂಕ್ಷನ್ ಅಂತಿಮ ನಿಲುಗಡೆಯಾಗಿದ್ದು, ಕರಾವಳಿ ಜಂಕ್ಷನ್‌ನಲ್ಲಿ ಪ್ರಯಾಣಿಕರನ್ನು ಇಳಿಸಿ ಅಲ್ಲಿಂದಲೇ ಪ್ರಯಾಣಿಕರನ್ನು ಕರೆದುಕೊಂಡು ವಾಪಾಸು ನಿಟ್ಟೂರು, ಅಂಬಾಗಿಲು, ಸಂತೆಕಟ್ಟೆ ಮುಖೇನಾ ಕುಂದಾಪುರ ಕಡೆಗೆ ಹೋಗುವುದು.ಮಣಿಪಾಲಕ್ಕೆ ಹೋಗುವ ವಾಹನಗಳು ಅಂಬಾಗಿಲು ಮುಖೇನ ಪರಂಪಳ್ಳಿ ರಸ್ತೆಯಿಂದಾಗಿ ಕಾಯಿನ್ ಸರ್ಕಲ್, ಸಿಂಡಿಕೇಟ್ ಸರ್ಕಲ್ ಮಾರ್ಗವಾಗಿ ಮಣಿಪಾಲ, ಕಾರ್ಕಳ ಕಡೆಗೆ ಹೋಗುವುದು.

ಹೋಗುವ ಮತ್ತು ಬರುವಂತಹ ಉಡುಪಿ ನಗರಕ್ಕೆ ಕುಕ್ಕಿಕಟ್ಟೆ, ಮೂಡುಬೆಳ್ಳ, ಅಲೆವೂರು, ಕೊರಂಗ್ರಪಾಡಿ, ಬೈಲೂರು ಕಡೆಗಳಿಗೆ ವಾಹನಗಳು:

ದಿನಾಂಕ 17/01/2022 ರಂದು ಸಂಜೆ 7.00 ಗಂಟೆಯತನಕ ಕುಕ್ಕಿಕಟ್ಟೆ, ಮೂಡುಬೆಳ್ಳ, ಅಲೆವೂರು, ಕೂರಂಗ್ರಪಾಡಿ, ಬೈಲೂರು ಕಡೆಗಳಿಗೆ ಹೋಗುವ ಮತ್ತು ಬರುವಂತಹ ವಾಹನಗಳು ಚಿಟ್ಟಾಡಿ, ಬೀಡಿನಗುಡ್ಡ, ಶಾರದ ಕಲ್ಯಾಣ ಮಂಟಪ, ಕಲ್ಸಂಕ ಮಾರ್ಗವಾಗಿ ಉಡುಪಿ ಸಿಟಿ, ಸರ್ವಿಸ್ ಬಸ್ ನಿಲ್ದಾಣಕ್ಕೆ ಪ್ರವೇಶಿಸುವುದು, ಉಡುಪಿ ನಗರಕ್ಕೆ ಸಂಜೆ 7.00 ಗಂಟೆಯಿಂದ ಬೆಳಿಗ್ಗೆ 07:00 ಗಂಟೆಯತನಕ ಎಲ್ಲಾ ವಾಹನಗಳು ಪ್ರವೇಶಿಸುವುದನ್ನು ನಿಷೇಧಿಸಿದೆ. ಸಂಜೆ 7.00 ಗಂಟೆಯಿಂದ ಬೆಳಿಗ್ಗೆ 07:00 ಗಂಟೆಯತನಕ ಬೀಡಿನಗುಡ್ಡ, ಚಿಟ್ಟಾಡಿ ಮುಖಾಂತರ ಮಿಷನ್‌ಕಂಪೌಂಡ್ ರಸ್ತೆ ಅಂತಿಮ ನಿಲುಗಡೆಯಾಗಿದ್ದು, ಅಲ್ಲಿಂದಲೇ ವಾಪಾಸು ಹಿಂತಿರುಗುವುದು.

ಕಾರ್ಕಳ- ಮಣಿಪಾಲ ಕಡೆಯಿಂದ ಉಡುಪಿ ನಗರಕ್ಕೆ ಬರುವಂತಹ ವಾಹನಗಳು:

ದಿನಾಂಕ:17/01/2022 ರಂದು ಸಂಜೆ 7.00 ಗಂಟೆಯತನಕ ಕಾರ್ಕಳ, ಮಣಿಪಾಲಕ್ಕೆ ಹೋಗಿ ಬರುವಂತಹ ವಾಹನಗಳು ನೇರವಾಗಿ ಕಲ್ಸಂಕ ಮಾರ್ಗವಾಗಿ ಉಡುಪಿ ಸಿಟಿ, ಸರ್ವಿಸ್ ಬಸ್ ನಿಲ್ದಾಣಕ್ಕೆ ಪ್ರವೇಶಿಸುವುದು.ಉಡುಪಿ ನಗರಕ್ಕೆ ಸಂಜೆ 7.00 ಗಂಟೆಯಿಂದ ಬೆಳಿಗ್ಗೆ 07:00 ಗಂಟೆಯತನಕ ಎಲ್ಲಾ ವಾಹನಗಳು ಪ್ರವೇಶಿಸುವುದನ್ನು ನಿಷೇಧಿಸಿದೆ.ಸಂಜೆ 7.00 ಗಂಟೆಯಿಂದ ಬೆಳಿಗ್ಗೆ 07:00 ಗಂಟೆಯತನಕ ಮಣಿಪಾಲ ಸಿಂಡಿಕೇಟ್ ಸರ್ಕಲ್ ನಿಂದಕಾಯಿನ್ ಸರ್ಕಲ್, ಪರಂಪಳ್ಳಿ, ಅಂಬಾಗಿಲು, ನಿಟ್ಟೂರು ಮಾರ್ಗವಾಗಿ ಕರಾವಳಿ ಜಂಕ್ಷನ್ ಆಗಮಿಸಿ, ಕರಾವಳಿ ಜಂಕ್ಷನ್ ಅಂತಿಮ ನಿಲುಗಡೆಯಾಗಿದ್ದು, ಅಲ್ಲಿಂದಲೇ ಪ್ರಯಾಣಿಕರನ್ನು ಕರೆದುಕೊಂಡು ವಾಪಾಸು ನಿಟ್ಟೂರು, ಅಂಬಾಗಿಲು, ಪರಂಪಳ್ಳಿ ಮಾರ್ಗವಾಗಿ ಮಣಿಪಾಲ, ಕಾರ್ಕಳ ಕಡೆಗೆ ಹೋಗುವುದು.

ಮಂಗಳೂರು – ಮುಂಬೈಗೆ – ಬೆಂಗಳೂರಿಗೆ ಹೋಗುವ ವಾಹನಗಳು:

ದಿನಾಂಕ:17/01/2022 ರಂದು ಸಂಜೆ 7.00 ಗಂಟೆಯತನಕ ಮಂಗಳೂರಿನಿಂದ ಮುಂಬೈ ಕಡೆಗೆ ಮತ್ತು ಬೆಂಗಳೂರಿಗೆ ಹೋಗುವ ಎಲ್ಲಾ ಖಾಸಗಿ /ಕೆಎಸ್‌ಆರ್‌ಟಿಸಿ ಬಸ್ಸುಗಳು ಬಪಾದ, ಅಂಬಲಪಾಡಿ, ಕರಾವಳಿ ಜಂಕ್ಷನ್, ಬನ್ನಂಜೆ, ಸಿಟಿ ಬಸ್ಸು ನಿಲ್ದಾಣ, ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣಕ್ಕೆ ಬಂದು ಪ್ರಯಾಣಿಕರನ್ನು ಕರೆದುಕೊಂಡು ಅದೇ ಮಾರ್ಗವಾಗಿ ಪ್ರಯಾಣವನ್ನು ಮುಂದುವರಿಸುವುದು.ಉಡುಪಿ ನಗರಕ್ಕೆ ಸಂಜೆ 7.00 ಗಂಟೆಯಿಂದ ಬೆಳಿಗ್ಗೆ 07:00 ಗಂಟೆಯತನಕ ಎಲ್ಲಾ ವಾಹನಗಳು ಪ್ರವೇಶಿಸುವುದನ್ನು ನಿಷೇಧಿಸಿದೆ. ಸಂಜೆ 7.00 ಗಂಟೆಯಿಂದ ಬೆಳಿಗ್ಗೆ 07:00 ಗಂಟೆಯತನಕ ಮುಂಬೈ, ಬೆಂಗಳೂರಿಗೆ ಹೋಗುವ ಎಲ್ಲಾ ಖಾಸಗಿ/ಕೆಎಸ್‌ಆರ್‌ಟಿಸಿ ಬಸ್ಸುಗಳು ಕರಾವಳಿ ಜಂಕ್ಷನ್ ಅಂತಿಮಗೊಳಿಸಿ ಅಲ್ಲಿಯೇ ಎರಡೂ ಬದಿಯ ಸರ್ವಿಸ್ ರಸ್ತೆಯಲ್ಲಿ ಪ್ರಯಾಣಿಕರನ್ನು ಕರೆದುಕೊಂಡ ಮುಂಬೈ, ಬೆಂಗಳೂರಿಗೆ ಪ್ರಯಾಣ ಮುಂದುವರಿಸುವುದು,

ಮಲ್ಪೆ ಕಡೆಯಿಂದ ಉಡುಪಿಗೆ ಬರುವಂತಹ ವಾಹನ

ದಿನಾಂಕ:17/01/2022 ರಂದು ಸಂಜೆ 6.00 ಗಂಟೆಯತನಕ ಮಲ್ಪೆಯಿಂದ ಬರುವಎಲ್ಲಾ ಬಸ್ಸುಗಳು, ಆದಿಉಡುಪಿ, ಕರಾವಳಿ ಜಂಕ್ಷನ್, ಬನ್ನಂಜೆ, ಮಾರ್ಗವಾಗಿ ಉಡುಪಿ ನಗರಕ್ಕೆ ಪ್ರವೇಶಿಸುವುದು, ಉಡುಪಿ ನಗರಕ್ಕೆ ಸಂಜೆ 7.00 ಗಂಟೆಯಿಂದ ಬೆಳಿಗ್ಗೆ 07:00 ಗಂಟೆಯತನಕಎಲ್ಲಾ ವಾಹನಗಳು ಪ್ರವೇಶಿಸುವುದನ್ನು ನಿಷೇಧಿಸಿದೆ. ಸಂಜೆ 7.00 ಗಂಟೆಯಿಂದ ಬೆಳಿಗ್ಗೆ 07:00 ಗಂಟೆಯತನಕಮಲ್ಪೆ ಕಡೆಯಿಂದ ಬರುವಂತಹಎಲ್ಲಾ ವಾಹನಗಳು ಆದಿ ಉಡುಪಿ ಜಂಕ್ಷನ್‌ತನಕ ಆಗಮಿಸಿ ನಂತರ ವಾಪಾಸು ಅದೇ ಮಾರ್ಗದಲ್ಲಿ ಮಲ್ಪೆ ಕಡೆಗೆ ಹಿಂತಿರುಗುವುದು.ಮಂಗಳೂರು, ಕುಂದಾಪುರ ಕಡೆಗೆ ಹೋಗುವ ವಾಹನಗಳು ಕರಾವಳಿ ಜಂಕ್ಷನ್ ಮುಖೇನ ಹಾದು ಹೋಗುವುದು,

ಪರ್ಯಾಯೋತ್ಸವ ಅಂಗವಾಗಿ ಸುಗಮ ಸಂಚಾರದ ಕುರಿತು ವಾಹನ ನಿಲುಗಡೆ ನಿಷೇಧ ಮಾಡಲಾದ ಸ್ಥಳಗಳು:

ದಿನಾಂಕ:17/01/2022 ರಂದು ಮಧ್ಯಾಹ್ನ 2.00 ಗಂಟೆಯಿಂದ ದಿನಾಂಕ:18/01/2022 ರಂದು ಬೆಳಿಗ್ಗೆ 07.00 ಗಂಟೆಯವರೆಗೆ ಈ ಕೆಳಕಂಡ ಸ್ಥಳಗಳಲ್ಲಿ ಎಲ್ಲಾ ಮಾದರಿಯ ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲುಗಡೆ ಮಾಡದಂತೆ ನಿಷೇಧಿಸಿದೆ.

1) ಅಂಬಲಪಾಡಿಯಿಂದ ಜೋಡುಕಟ್ಟೆಯವರೆಗೆ ಎರಡೂ ಬದಿಯಲ್ಲಿ ಎಲ್ಲಾ ರೀತಿಯ ವಾಹನಗಳಿಗೆ ನಿಷೇಧ,

2) ಬ್ರಹ್ಮಗಿರಿಯಿಂದ ಬನ್ನಂಜೆವರೆಗೆ,

3) ಲಯನ್ ಸರ್ಕಲ್‌ನಿಂದ ಮಿಷನ್ ಕಂಪೌಂಡ್‌ವರೆಗೆ,

4) ಬೇತಲ್ ಚರ್ಚ್‌ನಿಂದ ಸಿಂಡಿಕೇಟ್ ಸರ್ಕಲ್‌ವರೆಗೆ, ಸಿಂಡಿಕೇಟ್ ಸರ್ಕಲ್‌ನಿಂದ ತ್ರಿವೇಣಿ ಜಂಕ್ಷನ್ ತನಕ.

5) ಹನುಮಾನ್ ಜಂಕ್ಷನ್‌ನಿಂದ (ತ್ರೀವೇಣಿಜಂಕ್ಷನ್) ನಿಂದ ಸಂಸ್ಕೃತ ಕಾಲೇಜ್ ಜಂಕ್ಷನ್, ಕನಕದಾಸ ರಸ್ತೆಯ ಪಲಿಮಾರು ಮಠದ ಗೇಟ್ ತನಕ,

6) ಸಿಟಿ ಸೆಂಟರ್‌ನಿಂದ, ಚಿತ್ತರಂಜನ್ ಸರ್ಕಲ್, ಮಿತ್ರಾ ಆಸ್ಪತ್ರ ರಸ್ತೆ ತನಕ

7) ಐಡಿಯಲ್‌ಜಂಕ್ಷನ್, ಎಲ್.ವಿ.ಟಿ ತಂಕಪೇಟೆ ದೇವಸ್ಥಾನ, ಪಿಪಿಸಿ ಕಾಲೇಜ್ ತನಕ

8) ಐಡಿಯಲ್ ಜಂಕ್ಷನ್‌ನಿಂದ ಹರಿಶ್ಚಂದ್ರ ಮಾರ್ಗ, ವಿದ್ಯೋದಯ ಶಾಲೆಯವರೆಗೆ,

9) ಕಲ್ಸಂಕದಿಂದ ರಾಜಾಂಗಣ ಪಾರ್ಕಿಂಗ್ ಸ್ಥಳದವರೆಗೆ

10) ಓಶಿಯನ್ ಪರ್ಲ್ ಹೊಟೇಲ್‌ನಿಂದ, ಕಟ್ಟೆ ಆಚಾರ್ಯ ಮಾರ್ಗ, ಮಥುರಾ ಹೊಟೇಲ್ ತನಕ

11) ಉಡುಪಿ ಶ್ರೀಕೃಷ್ಣ ಮಠದ ರಥಬೀದಿಗಳಲ್ಲಿ ಯಾವುದೇ ವಾಹನ ಪ್ರವೇಶ ಮತ್ತು ನಿಲುಗಡೆಯನ್ನು ನಿಷೇಧಿಸಿದೆ.

12) ಪೇಜಾವರ ಮಠದ ಹಿಂಭಾಗದಲ್ಲಿ ಲಘು ಹಾಗೂ ದ್ವಿಚಕ್ರ ವಾಹನ ನಿಲುಗಡೆ ಮಾಡುತ್ತಿದ್ದು, ವುಡ್‌ಲ್ಯಾಂಡ್ ಹೋಟೇಲ್‌ನಿಂದ ಪೇಜಾವರ ಮಠದ ಹಿಂಭಾಗದವರೆಗೆ ವಾಹನಗಳ ನಿಲುಗಡೆಯನ್ನು ನಿಷೇಧಿಸಿದೆ.

13) ಪುರಪ್ರವೇಶ ಹಾಗೂ ಹೊರಕಾಣಿಕೆಯ ದಿನದಂದು ಸಾರ್ವಜನಿಕರು ಹೆಚ್ಚಾಗಿ ಭಾಗವಹಿಸಲಿರುವುದರಿಂದ ಸುಗಮ ಸಂಚಾರದ ಬಗ್ಗೆ ತ್ರಿವೇಣಿ ಜಂಕ್ಷನ್‌ನಿಂದ, ಸಂಸ್ಕೃತ ಕಾಲೇಜ್, ಕನಕದಾಸ ರಸ್ತೆಯ ಪಲಿಮಾರು ಮಠದಗೇಟ್ ತನಕ ದಿನಾಂಕ:10/01/2022 ರಿಂದ 18/01/2022 ರ ಸಂಜೆ ತನಕ ವಾಹನಗಳ ನಿಲುಗಡೆಯನ್ನು ನಿಷೇಧಿಸಿದೆ.

14) ಅಲ್ಲದೇ ದಿನಾಂಕ 17/01/2022 ರಂದು ಬೆಳಿಗ್ಗೆ 09.00 ಗಂಟೆಯಿಂದ ದಿನಾಂಕ:18/01/2022 ರಂದು ಬೆಳಿಗ್ಗೆ 07.00 ಗಂಟೆಯವರೆಗೆ ಹೆಚ್ಚುವರಿಯಾಗಿ ಸ್ವಾಗತಗೋಪುರ, ಕಿನ್ನಿಮುಲ್ಕಿ, ಗೋವಿಂದಕಲ್ಯಾಣ ಮಂಟಪ, ಜೋಡುಕಟ್ಟೆ ಲಯನ್ ಸರ್ಕಲ್, ಡಯಾನ ಸರ್ಕಲ್, ಮಿತ್ರಜಂಕ್ಷನ್, ಐಡಿಯಲ್ ಜಂಕ್ಷನ್, ತಂಕಪೇಟೆ ರಸ್ತೆಯ ಎರಡೂ ಬದಿಯಲ್ಲಿ ವಾಹನ ಸಂಚಾರ ಹಾಗೂ ವಾಹನ ನಿಲುಗಡೆಯನ್ನು ನಿಷೇಧಿಸಿದೆ.


Spread the love

Leave a Reply