ಪಾಂಡೇಶ್ವರ ಮಹಿಳಾ ಠಾಣಾ ಎಸೈ ಸಹಿತ ಆರು ಮಂದಿ ಪೊಲೀಸರ ಅಮಾನತು

Spread the love

ಪಾಂಡೇಶ್ವರ ಮಹಿಳಾ ಠಾಣಾ ಎಸೈ ಸಹಿತ ಆರು ಮಂದಿ ಪೊಲೀಸರ ಅಮಾನತು

ಮಂಗಳೂರು : ನಗರದ ಪಾಂಡೇಶ್ವರದಲ್ಲಿರುವ ಮಹಿಳಾ ಪೊಲೀಸ್ ಠಾಣೆಯ ಎಸ್ಸ ಸಹಿತ ಆರು ಮಂದಿ ಪೊಲೀಸರನ್ನು ಪ್ರತ್ಯೇಕ ಘಟನೆಗೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅಮಾನತು ಮಾಡಿದ್ದಾರೆ.

ಪೊಕ್ಕೊ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಲು ನಿರ್ಲಕ್ಷ್ಯ ತಾಳಿದ ಆರೋಪದ ಮೇರೆಗೆ ಎಸ್ಸೇ ರೋಸಮ್ಮ ಅವರನ್ನು ಅಮಾನತು ಮಾಡಲಾಗಿದೆ. ಪೊಲೀಸ್‌ ಹೆಡ್‌ಕಾನ್ಸ್‌ಟೇಬಲ್‌ ವಿರುದ್ಧ ಪೊಸ್ಕೊ ಕಾಯ್ದೆಯಡಿ ದೂರು ಬಂದಾಗ ಎ ರೋಸಮ್ಮ ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಮಹಿಳಾ ಠಾಣೆಯ ಐವರು ಸಿಬ್ಬಂದಿಯು ಕರ್ತವ್ಯದ ಅವಧಿಯಲ್ಲಿ ಠಾಣೆಯಲ್ಲಿ ಮದ್ಯಪಾನ ಮಾಡಿ ಇಲಾಖೆಯ ನಿಯಮಾವಳಿಗೆ ವಿರುದ್ಧವಾಗಿ ವರ್ತಿಸಿದ್ದರು. ಈ ಬಗ್ಗೆ, ಸಿಸಿಟಿವಿ ದೃಶ್ಯಾವಳಿ ಹಾಗೂ ಡಿಸಿಪಿ ಮತ್ತು ಎಸಿಪಿ ನೀಡಿದ ವರದಿಯನ್ನು ಆಧರಿಸಿ ಇಬ್ಬರು ಎಎಸೈ, ಇಬ್ಬರು ಹೆಡ್‌ಕಾನ್ಸ್‌ಟೇಬಲ್, ಒಬ್ಬ ಪೊಲೀಸ್ ಕಾನ್ಸ್ ಟೇಬಲ್ ಸಹಿತ ಐವರನ್ನು ಪೊಲೀಸ್ ಆಯುಕ್ತರು ಅಮಾನತು ಮಾಡಿದ್ದಾರೆ.


Spread the love