ಪಾಕಿಸ್ತಾನದ ಮುಸ್ಲಿಂರನ್ನೂ ಹಿಂದುಗಳಾಗಿ ಪರಿವರ್ತಿಸುವುದು ನಮ್ಮ ಗುರಿ – ಸಂಸದ ತೇಜಸ್ವಿ ಸೂರ್ಯ

Spread the love

ಪಾಕಿಸ್ತಾನದ ಮುಸ್ಲಿಂರನ್ನೂ ಹಿಂದುಗಳಾಗಿ ಪರಿವರ್ತಿಸುವುದು ನಮ್ಮ ಗುರಿ – ಸಂಸದ ತೇಜಸ್ವಿ ಸೂರ್ಯ

ಉಡುಪಿ: ಕೇವಲ ಭಾರತದಲ್ಲಿರುವ ಮುಸ್ಲಿಮರನ್ನು ಮಾತ್ರವಲ್ಲ ಪಾಕಿಸ್ತಾನದಲ್ಲಿರುವ ಮುಸ್ಲಿಮರನ್ನು ಕೂಡ ಹಿಂದುಗಳಾಗಿ ಪರಿವರ್ತನೆ ಮಾಡಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಎಲ್ಲ ಮಠ ಮಂದಿರಗಳು ವರ್ಷಕ್ಕೆ ಗುರಿಯನ್ನು ನಿಗದಿ ಪಡಿಸಿ ಬೇರೆ ಧರ್ಮದವರನ್ನು ವಾಪಾಸ್ಸು ಹಿಂದು ಧರ್ಮಕ್ಕೆ ಕರೆತರಬೇಕು ಎಂದು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ಶನಿವಾರ ನಡೆದ ಪರ್ಯಾಯ ಅದಮಾರು ಮಠದ ಪರ್ಯಾಯ ಮಂಗಲೋತ್ಸವದ ‘ವಿಶ್ವಾರ್ಪಣಮ್’ ಸಮಾರಂಭದಲ್ಲಿ ಅವರು ರಾಜಕಾರಣದಲ್ಲಿ ಯುವ ಪೀಳಿಗೆ ಪ್ರವೇಶ ಎಂಬ ವಿಷಯದಲ್ಲಿ ಮಾತನಾಡಿದರು.

ಟಿಪ್ಪು ಜಯಂತಿಯನ್ನು ನಾವು ಆಚರಿಸುಬೇಕು. ಟಿಪ್ಪು ಸುಲ್ತಾನನ ಖಡ್ಗದ ಕಾರಣದಿಂದ ಮುಸ್ಲಿಮ್ ಧರ್ಮಕ್ಕೆ ಮತಾಂತರಗೊಂಡಿ ರುವವರನ್ನು ಅದೇ ಟಿಪ್ಪು ಜಯಂತಿ ಮೂಲಕವೇ ಮಠ ಮಂದಿರಗಳು ವಾಪಾಸ್ಸು ಹಿಂದು ಧರ್ಮಕ್ಕೆ ಕರೆದು ಕೊಂಡು ಬರಬೇಕು. ಮುಸ್ಲಿಮ್ ಕ್ರಿಶ್ಚಿಯನ್ನರನ್ನು ವಾಪಾಸ್ಸು ಹಿಂದು ಧಮಕ್ಕೆ ಕರೆತರುವುದು ನಮೆಲ್ಲರ ಜವಾಬ್ದಾರಿ. ಈ ಕೆಲಸವನ್ನು ನಾವು ಮಾಡ ಬೇಕಾಗಿದೆ. ಆರ್ಟಿಕಲ್ 370 ತೆಗೆದು ಹಾಕಿದಂತೆ ಮತ್ತು ರಾಮಮಂದಿರ ನಿರ್ಮಾಣ ಮಾಡಿದಂತೆ ಇದು ಕೂಡ ಸಾಧ್ಯ ಎಂದರು.

ನಾವು ಮೊಗಲರು ಮತ್ತು ಬಿಟ್ರಿಷರನ್ನು ಹೊರಗಡೆ ಓಡಿಸಿದ್ದೇವೆಯೇ ಹೊರತು ಅವರು ಬಿಟ್ಟು ಹೋದ ಸಿದ್ಧಾಂತ ಅಲ್ಲ. ಅದನ್ನು ತೆಗೆದು ಹಾಕಿದರೆ ಮಾತ್ರ ನಮ್ಮ ವಿಜಯ ಸಂಪೂರ್ಣ ಆಗುತ್ತದೆ. ಈ ಕೆಲಸವನ್ನು ಈ ತಲೆಮಾರಿ ನವರು ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.

ಪರ್ಯಾಯ ಪೀಠಾಧೀಶ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ, ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಕೊಂಡೆವೂರು ನಿತ್ಯಾ ನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು.

ಜ್ಯೋತಿಷ್ಯ ಶಾಸ್ತ್ರಜ್ಞ ವಿಷ್ಣುಪ್ರಸಾದ್ ಹೆಬ್ಬಾರ್, ಮುಂಬೈಯ ಡಾ.ಸುರೇಶ ರಾವ್, ಉಡುಪಿಯ ಉದ್ಯಮಿ ಟಿ.ಶಂಭು ಶೆಟ್ಟಿ, ಹಿರಿಯ ಛಾಯಾಗ್ರಾಹಕ ಯಜ್ಞ ಮಂಗಳೂರು ಅವರನ್ನು ಸನ್ಮಾನಿಸಲಾಯಿತು. ಉಡುಪಿಯ ವಾಸ್ತು ತಜ್ಞ ಶತಾವಧಾನಿ ಸುಬ್ರಹ್ಮಣ್ಯ ಭಟ್ ಮತ್ತು ಉದ್ಯಮಿ ಬಿ.ಪಿ.ರಾಘವೇಂದ್ರ ರಾವ್ ಉಪಸ್ಥಿತರಿದ್ದರು. ಮಠದ ವ್ಯವಸ್ಥಾಪಕ ಗೋವಿಂದರಾಜ್ ಸ್ವಾಗತಿಸಿದರು. ಕೃಷ್ಣರಾಜ ಭಟ್ ಕುತ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.


Spread the love

1 Comment

  1. Unauthentic impossible during the period of history. eyewash, diverting mindset of innocent citizen.
    pl. try to do nothing is favor towards citizen is more then sufficient stop dirty political activities.

Comments are closed.