ಪಾಕಿಸ್ತಾನ ಪರ ಘೋಷಣೆ – ದೇಶದ್ರೋಹಿ ಎಸ್ ಡಿ ಪಿ ಐ – ಪಿ ಎಫ್ ಐ ಸಂಘಟನೆಗಳ ಬಹಿಷ್ಕರಿಸಲು ಸಮಾಜಕ್ಕೆ ಕರೆ

Spread the love

ಪಾಕಿಸ್ತಾನ ಪರ ಘೋಷಣೆ – ದೇಶದ್ರೋಹಿ ಎಸ್ ಡಿ ಪಿ ಐ – ಪಿ ಎಫ್ ಐ ಸಂಘಟನೆಗಳ ಬಹಿಷ್ಕರಿಸಲು ಸಮಾಜಕ್ಕೆ ಕರೆ
ಮಂಗಳೂರು: ಸಿಮಿ ಸಂಘಟನೆಯ ಇನ್ನೊಂದು ಮುಖವಾದ SDPI ಮತ್ತು PFI ಕಳೆದ ಹಲವಾರು ವರ್ಷಗಳಿಂದ ದೇಶದಲ್ಲಿ ಬೇರೆ ಬೇರೆ ದೇಶದ್ರೋಹಿ ಚಟುವಟಿಕೆಗಳನ್ನು ಮಾಡಿಕೊಂಡು ಬರುತ್ತಿದ್ದು, ಇತ್ತೀಚಿಗೆ ನಡೆದ NRC ವಿರುದ್ಧ ನಡೆದ ಪ್ರತಿಭಟನೆ ಹೆಸರಿನಲ್ಲಿ ಮಂಗಳೂರು ಮತ್ತು ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದು, ಪೋಲೀಸರ ಮೇಲೆ ಹಲ್ಲೆ, ಕೊಲೆಯತ್ನ ಪ್ರಕರಣಗಳು, ಮಂಗಳೂರಿನಲ್ಲಿ ಉಗ್ರರ ಪರ ಗೋಡೆಬರಹ ಪ್ರಕರಣಗಳು, SDPI – PFI ಬ್ಯಾಂಕ್ ಖಾತೆಗಳಿಗೆ ಪಾಕಿಸ್ತಾನದಿಂದ ನೂರಾರು ಕೋಟಿ ಹವಾಲಾ ಅಕ್ರಮ ಹಣದ ವ್ಯವಹಾರ ಪ್ರಕರಣ ಇವೆಲ್ಲವನ್ನೂ ನೋಡುವಾಗ ಪಾಕಿಸ್ತಾನದಲ್ಲಿ ಯಾವ ರೀತಿಯ ಮಾನಸಿಕತೆ ಇದೆಯೋ ಅದೇ ರೀತಿಯ ಮಾನಸಿಕತೆ SDPI – PFI ಕಾರ್ಯಕರ್ತರಲ್ಲಿ ಇದೆ.

ಪಾಕಿಸ್ತಾನದಲ್ಲಿ ಲಕ್ಷಾಂತರ ಹಿಂದೂಗಳ ಮತಾಂತರ, ದೇವಸ್ಥಾನಗಳ ಧ್ವಂಸ, ಭಾರತದ ವಿರುದ್ಧ ನಿರಂತರ ಭಯೋತ್ಪಾದಕ ಚಟುವಟಿಕೆಗಳು, ನಮ್ಮ ಸೈನಿಕರನ್ನು ಕತ್ಯೆ ಮಾಡುವ ಕೃತ್ಯಗಳು ನಿರಂತರವಾಗಿ ಆಗುತಿದ್ದು ಇಂತಹ ಭಾರತ ವಿರೋಧಿ ಪಾಕಿಸ್ತಾನ ದೇಶದ ಪರ SDPI – PFI ಸಂಘಟನೆಯವರು ಜೈಕಾರ ಹಾಕುತ್ತಿದ್ದಾರೆ. ಇಂತಹ ದೇಶದ್ರೋಹಿ ಸಂಘಟನೆಗಳ ನಿಷೇಧಿಸಲು ಸರಕಾರ ವಿಳಂಬ ಮಾಡುತ್ತಿದ್ದು ಅದಕ್ಕಾಗಿ SDPI – PFI ಸಂಘಟನೆಯ ಕಾರ್ಯಕರ್ತರನ್ನು ಸಮಾಜ ಅವರೊಡನೆ ಯಾವುದೇ ವ್ಯಾಪಾರ, ವಹಿವಾಟು ನಡೆಸದೆ ಅವರನ್ನು ಸಮಾಜದಿಂದ ಬಹಿಸ್ಕರಿಸಬೇಕು ಮತ್ತು SDPI ಯಲ್ಲಿ ಗೆದ್ದಿರುವ ಅಭ್ಯರ್ಥಿಗಳ ಸದಸ್ಯತ್ವವನ್ನು ರದ್ದು ಮಾಡಬೇಕೆಂದು ಚುನಾವಣಾ ಇಲಾಖೆಗೆ ವಿಶ್ವ ಹಿಂದು ಪರಿಷದ್ ಆಗ್ರಹ ಮಾಡುತ್ತದೆ ಎಂದು ವಿಶ್ವ ಹಿಂದು ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Spread the love