ಪಿಎಫ್ ಐ ನಿಷೇಧ ಸ್ವಾಗತಾರ್ಹ – ನಯನಾ ಗಣೇಶ್

Spread the love

ಪಿಎಫ್ ಐ ನಿಷೇಧ ಸ್ವಾಗತಾರ್ಹ – ನಯನಾ ಗಣೇಶ್

ಉಡುಪಿ: ದೇಶದಲ್ಲಿ ಅಶಾಂತಿ ಮತ್ತು ಮತಿಯವಾದವನ್ನು ಪ್ರತಿಪಾದಿಸಿ ದೇಶ ವಿರೋಧಿಸಿ ಕೃತ್ಯದಲ್ಲಿ ತೊಡಗಿದ್ದ ಪಿಎಫ್ ಐಅದರ ಅಂಗಸಂಸ್ಥೆಗಳನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿರುವುದನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಸ್ವಾಗತಿಸಿದ್ದಾರೆ.

ಕಳೆದ ಅನೇಕ ವರ್ಷಗಳಿಂದ ದೇಶದ ಅನೇಕ ಕಡೆ ಮುಖ್ಯವಾಗಿ ಕರಾವಳಿ ಪ್ರದೇಶದಲ್ಲಿ ಹಲವು ವಿಧ್ವಂಸಕ ಚಟುವಟಿಕೆಯಲ್ಲಿ ಭಾಗಿಯಾಗಿ,ದೇಶದ ಐಕ್ಯತೆ ಗೆ ಪಿಎಫ್ ಐ ಧಕ್ಕೆ ತಂದಿದ್ದು,ಭಯದ ವಾತಾವರಣ ಮೂಡಿಸುತ್ತ ಬಂದಿದೆ.ಅನೇಕ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡುವ ಮುಖಾಂತರ ರಾಷ್ಟ್ರೀಯತೆ ಧ್ವನಿಯನ್ನು ಹುಟ್ಟಡಗಿಸುವ ಪ್ರಯತ್ನ ಮಾಡಿದ್ದು,ಇಂತಹ ರಾಷ್ಟ್ರ ವಿರೋಧಿ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿರುವುದು ರಾಷ್ಟ್ರ ವಿರೋಧಿಗಳಿಗೆ ಪಾಠವಾಗಿದೆ, ರಾಷ್ಟ್ರ ದ ಭದ್ರತೆ ವಿಚಾರದಲ್ಲಿ ನಮ್ಮ ಪಕ್ಷ ಯಾವತ್ತೂ ರಾಜಿ ಮಾಡಿಕೊಳ್ಳುವುದಿಲ್ಲ,ಕೇಂದ್ರ ಸರ್ಕಾರದ ಈ ಕ್ರಮವನ್ನು ಸ್ವಾಗತಿಸುತ್ತೇನೆಂದು   ಹೇಳಿಕೆ ಯಲ್ಲಿ ತಿಳಿಸಿದ್ದಾರೆ


Spread the love