
ಪಿಯುಸಿಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ: ಕಂಪ್ಯೂಟರ್ ಇಂಜಿನಿಯರ್ ಆಗುವಾಸೆ – ಸಾತ್ವಿಕ್ ಭಟ್
ಉಡುಪಿ: ಎಸ್ ಎಸ್ ಎಲ್ ಸಿಯಲ್ಲಿ 625 ಪೂರ್ಣಾಂಕಗಳೊಂದಿಗೆ ರಾಜ್ಯಕ್ಕೆ ಟಾಪರ್ ಆಗಿದ್ದ ಸಾತ್ವಿಕ್ ಭಟ್, ಕೊರೋನಾ ಕಾರಣಕ್ಕೆ ಪೂರ್ಣಾಂಕ ನೀಡಿದ್ದಾರೆ ಎಂದು ಕೆಲವರು ಕೊಂಕು ನುಡಿದಿದ್ದರಂತೆ. ಆದರೇ ಅದನ್ನು ಸುಳ್ಳು ಮಾಡುವಂತೆ ತಂದೆ ತಾಯಿ ಹೇಳಿದ್ದರು. ಅದರಂತೆ ರಾಜ್ಯಕ್ಕೆ 2ನೇ ರ್ಯಾಂಕ್ ತಗೊಂಡಿದ್ದೇನೆ ಎಂದವರು ಹೆಮ್ಮೆಯಿಂದ ಹೇಳುತ್ತಾರೆ.
ಉಡುಪಿಯ ಕೊಡವೂರು ಗ್ರಾಮದ ನಿವಾಸಿ, ಇಲ್ಲಿನ ಎಂಜಿಎಂ ಕಾಲೇಜಿನ ವಿಜ್ಞಾನ ವಿದ್ಯಾರ್ಥಿ ಸಾತ್ವಿಕ್ ಭಟ್ 595 ಅಂಕಗಳೊಂದಿಗೆ ರಾಜ್ಯಕ್ಕೆ 2ನೇ ರ್ಯಾಂಕ್ ಗಳಿಸಿದ್ದಾರೆ.
ಅವರು ಗಣಿತ, ರಸಾಯನ ಶಾಸ್ತ್ರ ಮತ್ತು ಜೀವ ಶಾಸ್ತ್ರಗಳಲ್ಲಿ ತಲಾ 100 ಅಂಕಗಳನ್ನು ಗಳಿಸಿದ್ದಾರೆ. ಭೌತಶಾಸ್ತ್ರದಲ್ಲಿ 99, ಇಂಗ್ಲೀಷ್ ಮತ್ತು ಹಿಂದಿಯಲ್ಲಿ 98 ಅಂಕಗಳನ್ನು ಗಳಿಸಿದ್ದಾರೆ.
ತಂದೆ ಶಶಿಕುಮಾರ್ ಮಲ್ಪೆ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು. ತಾಯಿ ತ್ರಿವೇಣಿ ಅಂಚೆ ಇಲಾಖೆಯ ಉದ್ಯೋಗಿ, ಎಂಎಸ್ಸಿ ಮಾಡುತ್ತಿರುವ ಅಕ್ಕ ಶರಣ್ಯ ಅವರ ಪ್ರೋತ್ಸಾಹವೇ ತನ್ನ ಈ ಸಾಧನೆಗೆ ಕಾರಣ ಎನ್ನುತ್ತಾನೆ ಸಾತ್ವಿಕ್. ಕೊರೋನಾ ಕಾಲದ ಆನ್ ಲೈನ್ ತರಗತಿಗಳು ಪಾಠದಳನ್ನು ಸರಿಯಾಗಿ ಮನನ ಮಾಡಲಿಕ್ಕೆ ತನಗೆ ಸಾಕಷ್ಟು ಸಮಯ ನೀಡಿತು. ಜೊತೆಗೆ ಕೋಚಿಂಗ್ ಗೂ ಹೋಗುತ್ತಿದ್ದೆ. ಮುಂದೆ ಕಂಪ್ಯೂಟರ್ ಇಂಜಿನಿಯರಿಂಗ್ ಮಾಡುವ ಆಸೆ ಇದೆ ಎಂದು ತಿಳಿಸಿದ್ದಾನೆ.
ಪಾಠಗಳ ಜೊತೆಗೆ ಸಂಗೀತದಲ್ಲಿ ಅಭಿರುಚಿ ಇರುವ ಸಾತ್ವಿಕ್ ಈಗಾಗಲೇ ಜ್ಯೂನಿಯರ್ ಪರೀಕ್ಷೆ ಪಾಲಸಾಗಿದ್ದಾರೆ. ಯಕ್ಷಗಾನ ಕಲಿತಿದ್ದು ಅದರಲ್ಲಿಯೂ ಅಭಿರುಚಿ ಇದೆ ಎನ್ನುತ್ತಾರೆ.