ಪಿಯು ಫಲಿತಾಂಶ: ಕೋಚಿಂಗ್ ಇಲ್ಲದೇ ರಾಜ್ಯಕ್ಕೆ 2ನೇ ರ‍್ಯಾಂಕ್‌ ಪಡೆದ ಜೆಸ್ವಿಟಾ ಡಯಾಸ್

Spread the love

ಪಿಯು ಫಲಿತಾಂಶ: ಕೋಚಿಂಗ್ ಇಲ್ಲದೇ ರಾಜ್ಯಕ್ಕೆ 2ನೇ ರ‍್ಯಾಂಕ್‌ ಪಡೆದ ಜೆಸ್ವಿಟಾ ಡಯಾಸ್

ಉಡುಪಿ: ಗಣಿತ, ಸಂಸ್ಕೃತ ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿ ತಲಾ 100 ಅಂಕಗಳನ್ನು ಪಡೆದಿರುವ ಜೆಸ್ವಿತಾ ಡಯಾಸ್ ರಾಜ್ಯಕ್ಕೆ 2ನೇ ಸ್ಥಾನ ಗಳಿಸಿದ್ದಾರೆ. ಆದರೇ ಆಕೆ ಈ ಸಾಧನೆಗಾಗಿ ಯಾವುದೇ ರೀತಿಯ ಕೋಚಿಂಗ್ ಅಥವಾ ಟ್ಯೂಷನ್ ಗಳಿಗೆ ಹೋಗಿದ್ದಿಲ್ಲ.

ಉಡುಪಿ ಪೂರ್ಣಪ್ರಜ್ಞ ಪ. ಪೂ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಜೆಸ್ವಿತಾ, ಭೌತಶಾಸ್ತ್ರದಲ್ಲಿ 99 ಮತ್ತು ಇಂಗ್ಲೀಷ್ ನಲ್ಲಿ 97 ಅಂಕಗಳನ್ನು ಪಡೆದು ಒಟ್ಟು 595 ಅಂಕಗಳನ್ನು ಗಳಿಸಿದ್ದಾಳೆ.

ಬ್ರಹ್ಮಾವರ ತಾಲೂಕು ಹಂದಾಡಿ ಗ್ರಾಮದ ಬೆಣ್ಣೆಕುದ್ರುವಿನ ಜೆಸ್ವಿತ. ಅಕೆಯ ತಂದೆ ಜೇಮ್ಸ್ ಡಯಾಸ್ ಕುಂಜಾಲು ವಿ.ಕೆ.ಆರ್. ಆಚಾರ್ಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ, ತಾಯಿ ಹೆಲೆನ್ ಶಾಲೆಟ್ ಬಿದ್ಕಲ್ಕಟ್ಟೆ ಕೆ.ಪಿ.ಎಸ್. ಹೈಸ್ಕೂಲಿನ ಆಂಗ್ಲ ಭಾಷಾ ಶಿಕ್ಷಕಿ

ಪರೀಕ್ಷೆಯ ನಂತರ ಸ್ವಯಂ ಮೌಲ್ಯಮಾಪನಮಾಡಿಕೊಂಡಿದ್ದ ಜೆಸ್ವಿತಾ 585 ಅಂಕಗಳನ್ನು ನಿರೀಕ್ಷಿಸಿದ್ದರು. ಅದರೇ ಅದಕ್ಕೂ 10 ಅಂಕ ಜಾಸ್ತಿ ಸಿಕ್ಕಿದೆ. ತುಂಬಾ ಖುಷಿ ಆಗಿದೆ ಎನ್ನುತ್ತಾರೆ

ಗಣಿತ ವಿಷಯ ಇಷ್ಟ ಎನ್ನುವ ಜೆಸ್ವಿತಾ, ನನ್ನ ತಂದೆತಾಯಿ ಇಬ್ಬರೂ ಶಿಕ್ಷಕರಾದ್ದರಿಂದ ಹೇಗೆ ಓದಬೇಕು, ಹೇಗೆ ಪರೀಕ್ಷೆ ಬರೆಯಬೇಕು ಎಂದು ತಿಳಿಸಿದ್ದರು. ಪ್ರತಿದಿನ ನಾನೇ ಸ್ವಯಂ ಅಧ್ಯಯನ ಮಾಡುತಿದ್ದೆ ಎನ್ನುತ್ತಾರೆ. ಸಿಇಟಿ ಬರೆಯುತಿದ್ದೇನೆ, ಎಂಜಿನಿಯರಿಂಗ್ ಮಾಡಬೇಕು ಎನ್ನುವ ಗುರಿ ಇಟ್ಟುಕೊಂಡಿದ್ದಾರೆ.

ಹಾಡುವುದು ಇಷ್ಟ, ಕವನ, ಲೇಖನ ಬರೆದಿದ್ದೇನೆ, ಗಣಿತ ಒಲಿಂಪಿಯಾಡ್, ಕ್ವಿಝ್ ಸ್ಪರ್ಧೆಯಲ್ಲಿಯೂ ಭಾಗವಹಿಸಿದ್ದೇನೆ ಎಂದವರು ಹೇಳಿದ್ದಾರೆ.


Spread the love