ಪಿರಿಯಾಪಟ್ಟಣದಲ್ಲಿ ವಾಹನ ಸವಾರರ ಕೋವಿಡ್ ತಪಾಸಣೆ

Spread the love

ಪಿರಿಯಾಪಟ್ಟಣದಲ್ಲಿ ವಾಹನ ಸವಾರರ ಕೋವಿಡ್ ತಪಾಸಣೆ

ಪಿರಿಯಾಪಟ್ಟಣ: ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಪಟ್ಟಣದ ಬಿ.ಎಂ. ಮುಖ್ಯ ರಸ್ತೆಯಲ್ಲಿ ಅಂತರ್ ರಾಜ್ಯ ಹಾಗೂ ಜಿಲ್ಲೆ ನೋಂದಾಯಿತ ವಾಹನ ಸವಾರರ ಕೋವಿಡ್ ತಪಾಸಣೆ ನಡೆಸಲಾಯಿತು.

ಈ ವೇಳೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು ಮಾತನಾಡಿ ಲಾಕ್ ಡೌನ್ ಸಡಿಲಿಕೆ ನಂತರ ಸಾರ್ವಜನಿಕರು ಕೊರೊನಾ ಸೋಂಕಿನ ಬಗ್ಗೆ ನಿರ್ಲಕ್ಷ್ಯ ತಾಳಿದ್ದು ಅನಗತ್ಯವಾಗಿ ಓಡಾಟ ನಡೆಸುತ್ತಿದ್ದು ಇದರಿಂದ ಸೋಂಕು ತಗಲುವ ಸಾಧ್ಯತೆ ಇರುವ ಕಾರಣ ಕೊರೊನಾ ತಪಾಸಣಾ ಸಂಚಾರಿ ಕೇಂದ್ರಗಳನ್ನು ತೆರೆದು ಅಂತರ್ ರಾಜ್ಯ ಹಾಗೂ ಜಿಲ್ಲೆ ನೋಂದಾಯಿತ ವಾಹನ ಸವಾರರನ್ನು ತಪಾಸಣೆ ನಡೆಸಲಾಗುತ್ತಿದೆ,

ಕಳೆದ ಒಂದು ವಾರದಿಂದ ಖುದ್ದು ಹಾಜರಿದ್ದು ಆರೋಗ್ಯ, ಪುರಸಭೆ, ಕಂದಾಯ, ಆರಕ್ಷಕ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಕರ್ತವ್ಯ ನಿರ್ವಹಿಸಿ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಶ್ರಮ ವಹಿಸಲಾಗುತ್ತಿದೆ ಎಂದರು. ಸಬ್ ಇನ್ಸ್ ಪೆಕ್ಟರ್ ಸದಾಶಿವ ತಿಪ್ಪಾರೆಡ್ಡಿ ಮಾತನಾಡಿ ಲಾಕ್ ಡೌನ್ ಇದ್ದಂಥ ಸಂದರ್ಭ ಸಾರ್ವಜನಿಕರು ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯ ಪಾಲಿಸಿದ ಹಾಗೆಯೇ ಸಡಿಲಿಕೆಯ ನಂತರವೂ ಪಾಲಿಸಿ ಎಚ್ಚರಿಕೆಯಿಂದಿರುವಂತೆ ಸೂಚಿಸಿ ನಿಯಮಗಳನ್ನು ಉಲ್ಲಂಘಿಸುವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಬಿ.ಎಂ ಮುಖ್ಯ ರಸ್ತೆಯಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ಸಂಚಾರ ದಟ್ಟಣೆ ಕಂಡುಬಂದಿತು, ಈ ವೇಳೆ ಸಬ್ ಇನ್ಸ್ ಪೆಕ್ಟರ್ ಸದಾಶಿವ ತಿಪರೆಡ್ಡಿ ಮತ್ತು ಸಿಬ್ಬಂದಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.


Spread the love