ಪಿರಿಯಾಪಟ್ಟಣ ಸೇಂಟ್​ ಮೇರಿ ಚಚ್೯ ಮೇಲೆ ಕಿಡಿಗೇಡಿಗಳಿಂದ ದಾಳಿ.. ಪೀಠೋಪಕರಣ ಧ್ವಂಸ, ಹಣ ಕಳವು

Spread the love

ಪಿರಿಯಾಪಟ್ಟಣ ಸೇಂಟ್​ ಮೇರಿ ಚಚ್೯ ಮೇಲೆ ಕಿಡಿಗೇಡಿಗಳಿಂದ ದಾಳಿ.. ಪೀಠೋಪಕರಣ ಧ್ವಂಸ, ಹಣ ಕಳವು

ಮೈಸೂರು: ಮೊನ್ನೆ ತಾನೆ ಕ್ರಿಸ್ಮಸ್​ ಮುಗಿದಿದ್ದು, ಜಿಲ್ಲೆಯ ಪಿರಿಯಾಪಟ್ಟಣದ ಸೆಂಟ್‌ ಮೇರಿಸ್ ಚರ್ಚ್‌  ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ.

ದುಷ್ಕರ್ಮಿಗಳು ಚರ್ಚ್  ಒಳಗೆ ನುಗ್ಗಿ ಬಾಲ ಏಸುವಿನ ಮೂರ್ತಿ ಹಾಗೂ ತೊಟ್ಟಿಲನ್ನು ಒಡೆದು ಹಾಕಿದ್ದಾರೆ. ಕ್ರಿಸ್‌ಮಸ್  ಹಬ್ಬಕೆಂದು ಚರ್ಚ್ ಒಳಗಿನ ಟೇಬಲ್ ಮೇಲೆ ಬುಟ್ಟಿಯಲ್ಲಿನ, ತೊಟ್ಟಿಲಲ್ಲಿ ಬಾಲ ಏಸು ಅನ್ನು ಮಲಗಿಸಲಾಗಿತ್ತು. ಚರ್ಚ್​ನಲ್ಲಿ ಯಾರು ಇಲ್ಲದ ವೇಳೆ ದುಷ್ಕರ್ಮಿಗಳಿಂದ ದಾಳಿ ಮಾಡಿ, ಬಾಲ ಏಸುವಿನ‌ ಮೂರ್ತಿಯನ್ನ ಪುಡಿ ಪುಡಿ ಮಾಡಿದ್ದಾರೆ. ಹಾಗೇ ಚರ್ಚ್ ಹೊರಗೆ ಇದ್ದ ಹುಂಡಿ ಕೂಡ ಕಳ್ಳತನವಾಗಿದೆ.

ಚರ್ಚ್​ನ ಫಾದರ್ ಜಾನ್ ಪೌಲ್ ಮೈಸೂರಿಗೆ ತೆರಳಿದ ವೇಳೆಯಲ್ಲಿ ಘಟನೆ ಸಂಭವಿಸಿದೆ. ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.


Spread the love