Home Mangalorean News Kannada News ಪಿಲಿಕುಳದಲ್ಲಿ ಸಹ್ಯಾದ್ರಿ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿಗಳಿಂದ ವೃಕ್ಷೋತ್ಸವ: ಒಂದು ವಿಭಿನ್ನ ಕಾರ್ಯಕ್ರಮ

ಪಿಲಿಕುಳದಲ್ಲಿ ಸಹ್ಯಾದ್ರಿ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿಗಳಿಂದ ವೃಕ್ಷೋತ್ಸವ: ಒಂದು ವಿಭಿನ್ನ ಕಾರ್ಯಕ್ರಮ

Spread the love

ಪಿಲಿಕುಳದಲ್ಲಿ ಸಹ್ಯಾದ್ರಿ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿಗಳಿಂದ ವೃಕ್ಷೋತ್ಸವ: ಒಂದು ವಿಭಿನ್ನ ಕಾರ್ಯಕ್ರಮ

“ಆಧುನಿಕ ಜೀವನ ಶೈಲಿ ಯುವಜನರನ್ನು ನೈಸರ್ಗಿಕ ವಾತಾವರಣದಿಂದ ದೂರ ಕೊಂಡೊಯ್ಯುತ್ತಿರುವುದನ್ನು ತಪ್ಪಿಸಲು ಸಾಧ್ಯವೇ ಎಂದು ಚಿಂತಿಸುತ್ತಿರುವಾಗಲೇ, ಸಹ್ಯಾದ್ರಿ ಕಾಲೇಜಿನ ಕ್ಯಾಂಪಸ್ನಲ್ಲೆ ಬೀಜಗಳನ್ನು ಕೊಟ್ಟು ಸಸಿಮಾಡಿಸಿ, ಮತ್ತೆ ಬೇರೆ ಬೇರೆ ಕಡೆಗಳಲ್ಲಿ ಅವರಿಂದಲೇ ನೆಡಿಸಿ, ಮರ ಬೆಳೆಸಿದರೆ, ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಪರಿಸರ ಪ್ರಜ್ಙೆಯನ್ನು ಮೂಡಿಸಲು ಸಾಧ್ಯವಾಗಬಹುದು ಎಂಬ ಚಿಂತನೆ ಬಂದಿತು” ಎನ್ನುತ್ತಾರೆ ಸಹ್ಯಾದ್ರಿ ಕಾಲೇಜಿನ ಟ್ರಸ್ಟಿ, ಶ್ರೀ ದೇವದಾಸ ಹೆಗ್ಡೆ.

ಮಂಗಳೂರಿನ ಹೊರವಲಯದಲ್ಲಿರುವ ಸಹ್ಯಾದ್ರಿ ಇಂಜಿನಿಯರಿAಗ್ ಕಾಲೇಜಿನಲ್ಲಿ ಪ್ರತಿ ವರ್ಷ ನಡೆಸುವ ‘ವೃಕ್ಷೋತ್ಸವ’ ಒಂದು ವಿಭಿನ್ನ ಪ್ರಯತ್ನ್ನ. ಬೀಜವೊಂದು ಯಶಸ್ವಿಯಾಗಿ ಮರವಾಗಿ ಬೆಳೆಯುವುದನ್ನು ಸುಗಮಗೊಳಿಸಲು ಪಡುವ ಶ್ರಮ. ಟ್ರಸ್ಟಿ ಶ್ರೀ ದೇವದಾಸ ಹೆಗ್ಡೆಯವರ ನೇತ್ರತ್ವದಲ್ಲಿ ಮೊದಲನೇ ಸೆಮೆಸ್ಟರ್ನ ವಿಧ್ಯಾರ್ಥಿಗಳಿಗೆ ತೊಟ್ಟೆಯಲ್ಲಿ ಬೀಜ ಬಿತ್ತಿ ಸಸಿಮಡುವ ಅನುಭವ ಮಾಡಿಸಿದರೆ ಮುಂದಿನ ಸೆಮ್ನಲ್ಲಿ ಸಸಿಗಳನ್ನು ವಿವಿಧ ಕಡೆಗಳಲ್ಲಿ ನೆಡುವ ಕಾರ್ಯಕ್ರಮ ಮಾಡಲಾಗುತ್ತದೆ. ಬಾಲ್ಯದಲ್ಲಿ ಬೀಜ ಮೊಳೆತು ಗಿಡವಾಗುವುದನ್ನು ಬೆರಗುಗಣ್ಣಿನಿಂದ ನೋಡಿದ ಮಕ್ಕಳು ಬೆಳೆದು ವೃತ್ತಿಪರ ಶಿಕ್ಷಣ ಪಡೆಯುವಾಗ ತುಂಬ ನಿರತರಾಗುತ್ತಾರೆ, ಮತ್ತು ಪ್ರಕೃತಿಯಿಂದ ದೂರವಾಗುತ್ತಾರೆ. ಗಿಡವು ಮರವಾಗಿ ಬೆಳೆಯುವುದನ್ನೂ ಅವರು ತಿಳಿಯುವ ಸಲುವಾಗಿ ಈ ಯೊಜನೆ ಎಂಬುದು ಹೆಗ್ಡೆಯವರ ಅಭಿಪ್ರಾಯ. ಹಿಂದಿನ ವರ್ಷ ‘ವೃಕ್ಷೋತ್ಸವ’ದಲ್ಲಿ ಮೂರು ಸ್ಮಶಾನಗಳಲ್ಲಿ ಗಿಡಗಳನ್ನು ನೆಟ್ಟು ಪ್ರಕೃತಿಯ ನಿರಂತರತೆಯನ್ನು ತಿಳಿಸಲಾಯಿತು.

ತಾರೀಕು 19ನೇ, ಜೂನ್ ಗುರುವಾರದಂದು ನಡೆಸಲಾದ ಈ ವರ್ಷದ ವೃಕ್ಷೋತ್ಸವದಲ್ಲಿ ಸಹ್ಯಾದ್ರಿ ಕಾಲೇಜಿನ ವಿಧ್ಯಾರ್ಥಿಗಳು ಮಾವು, ಚಿಕ್ಕು, ನೇರಳೆ, ಹಲಸು ಮತ್ತು ಬಾದಾಮಿ ಮುಂತಾದ ವಿವಿಧ ಹಣ್ಣುಗಳ ಸುಮಾರು ನೂರು ಸಸಿಗಳನ್ನು ಪಿಲಿಕುಳ ನಿಸರ್ಗಧಾಮದಲ್ಲಿ ನೆಟ್ಟರು. ಪ್ರಥಮ ವರ್ಷದ ನೂರು ವಿಧ್ಯಾಥಿಗಳು ಭಾಗವಹಿಸಿದರು. ಈ ಕಾರ್ಯಕ್ರಮವನ್ನು ಪಿಲಿಕುಳ ನಿಸರ್ಗಧಾಮದ ನಿರ್ದೇಶಕರಾದ ಎ.ಸಿ.ಎಫ್ ಶ್ರೀ ಪ್ರಶಾಂತ್ ಪೈಯವರು ಒಂದು ಸಸಿನೆಟ್ಟು ಉದ್ಘಾಟನೆ ನಡೆಸಿದರು. ಹಾಗೇ ಇನ್ನೋರ್ವ ಅಧಿಕಾರಿ ಶ್ರೀಮತಿ ಸುಚಿತ್ರ ಎನ್ ರಾವ್, ಝೂ ಎಜುಕೇಶನ್ ಆಫೀಸರ್ ಸಹ ವಿಧ್ಯಾರ್ಥಿಗಳೊಂದಿಗೆ ಹಣ್ಣಿನಗಿಡ ನೆಟ್ಟರು. ಕರ್ಯಕ್ರಮದ ರುವಾರಿ ಶ್ರೀ ದೇವದಾಸ ಹೆಗ್ಡೆ, ಡಾ. ಪ್ರಶಾಂತ್ ರಾವ್, ಬೇಸಿಕ್ ಸಾಯನ್ಸ್ ವಿಭಾಗ ಮುಖ್ಯಸರು, ಸ್ಮಿತಾ ಶೆಣೈ, ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ, ವಿಧ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ರಶ್ಮಿತಾ, ನಿಖಿಲ್, ಕ್ಯಾಂಪಸ್ ಮ್ಯಾನೇಜರ್ ವಸಂತ್, ಕಲಾವಿಭಾಗ ನಿರ್ದೇಶಕ ನವೀನ್ ಪಿಲಾರ್, ಪ್ರೋ. ಮಧು ಮತ್ತು ಪ್ರೋ. ಶಿವಕುಮಾರ್ ವಿಧ್ಯಾಥಿಗಳೊಂದಿಗಿದ್ದರು.


Spread the love

Exit mobile version