
Spread the love
ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಹೊಸ ಪ್ರಾಣಿ-ಪಕ್ಷಿಗಳ ಆಗಮನ
ಮಂಗಳೂರು : ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಬೆಂಗಳೂರಿನ People for Animals – Wildlife Rescue and Conservation Centreನಿಂದ ಸಂರಕ್ಷಣೆಗೆ ಕೊಂಬಿನ ಗೂಬೆ (Indian Eagle Owl), ರಾಮ ಗಿಳಿ (Alexandrine Parakeet), ಗುಲಾಬಿ ಉಂಗುರದ ಗಿಳಿ (Rose-ringed Parakeet), ರೀಸಸ್ ಮಕಾಕ್ ಗಳನ್ನು ಹಸ್ತಾಂತರಿಸಲಾಗಿದೆ.
ಅವುಗಳನ್ನು 15 ದಿನಗಳ ತನಕ ಕ್ವಾರಂಟೈನ್ ನಲ್ಲಿ ಇರಿಸಲಾಗುತ್ತದೆ, ಆ ಬಳಿಕ ಸಂದರ್ಶಕರ ವೀಕ್ಷಣೆಗೆ ತೆರೆದಿಡಲಾಗುವುದು ಎಂದು ಉದ್ಯಾನವನದ ನಿರ್ದೇಶಕ ಎಚ್.ಜೆ.ಭಂಡಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Spread the love