ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಕಚ್ಚಾಟದಿಂದ ಗಾಯಗೊಂಡ ಹುಲಿ ಮರಿ ಸಾವು

Spread the love

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಕಚ್ಚಾಟದಿಂದ ಗಾಯಗೊಂಡ ಹುಲಿ ಮರಿ ಸಾವು

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಹುಲಿಗಳ ಮಧ್ಯ ನಡೆದ ಕಚ್ಚಾಟದಲ್ಲಿ ಗಾಯಗೊಂಡಿದ್ದ ಸುಮಾರು ಎರಡೂವರೆ ವರ್ಷ ಪ್ರಾಯದ ಹುಲಿಮರಿಯೊಂದು ಅಸುನೀಗಿದೆ. ಇದರೊಂದಿಗೆ ಪಿಲಿಕುಳದಲ್ಲಿ ಹುಲಿಗಳ ಸಂಖ್ಯೆ 11ಕ್ಕಿಳಿದಿದೆ.

ಕೆಲ ಸಮಯದ ಹಿಂದೆ ಹುಲಿಗಳ ನಡುವಿನ ಕಚ್ಚಾಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹುಲಿಮರಿಗೆ ಜೈವಿಕ ಉದ್ಯಾನವನದ ವೈದ್ಯಾಧಿಕಾರಿ ಡಾ.ವಿಷ್ಣು ದತ್, ಡಾ.ಮಧುಸೂದನ ಮತ್ತು ಡಾ.ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದು, ಅದು ಚೇತರಿಸಿಕೊಂಡು ಸಹಜ ಸ್ಥಿತಿಗೆ ಮರಳಿತ್ತು. ಆದರೆ ಕಳೆದ ಶುಕ್ರವಾರ ಮಧ್ಯಾಹ್ನ ಹುಲಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಈ ವೇಳೆ ವೈದ್ಯಾಧಿಕಾರಿಗಳು ಶುಶ್ರೂಷೆ ನಡೆಸಿದರೂ ಫಲಕಾರಿಯಾಗದೆ ಅದು ಅಸುನೀಗಿದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕರು ತಿಳಿಸಿದ್ದಾರೆ.

ಸಾವನ್ನಪ್ಪಿದ ಹುಲಿ ಮರಿಯ ಮರೋಣತ್ತರ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ಕಿಡ್ನಿ ಮತ್ತು ಅಂಗಾಂಗಳ ವೈಫಲ್ಯ ಕಂಡು ಬಂದಿದೆ ಎಂದು ಡಾ. ವಿಷ್ಣು ದತ್ ತಿಳಿಸಿದ್ದಾರೆ.

ಅಸುನೀಗಿದ ಹುಲಿಯ ಅಂಗಾಂಗಗಳ ಮಾದರಿಯನ್ನು ಉತ್ತರ ಪ್ರದೇಶದ ಐ.ವಿ.ಆರ್.ಐ., ಬರೇಲಿ ಮತ್ತು ಬೆಂಗಳೂರಿನ ಐ.ಎ. ಎಚ್. ಆಯಂಡ್ ವಿ.ಬಿ. ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದವರು ತಿಳಿಸಿದ್ದಾರೆ.


Spread the love

Leave a Reply

Please enter your comment!
Please enter your name here