ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಎರಡು ಹುಲಿಗಳ   ಕಾದಾಟದಲ್ಲಿ ಮೃತಪಟ್ಟ ‘ನೇತ್ರಾವತಿ’ ಹುಲಿ

Bengal Tiger
Spread the love

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಎರಡು ಹುಲಿಗಳ   ಕಾದಾಟದಲ್ಲಿ ಮೃತಪಟ್ಟ ‘ನೇತ್ರಾವತಿ’ ಹುಲಿ
 

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಎರಡು ಹುಲಿಗಳ ನಡುವೆ ಕಾದಾಟ ನಡೆದು ಹೆಣ್ಣು ಹುಲಿಯೊಂದು ಸಾವನ್ನಪ್ಪಿದ ಘಟನೆ ನಡೆದಿದೆ.

ಕಾದಾಟದಿಂದ ಗಾಯಗೊಂಡಿದ್ದ 15 ವರ್ಷ ಪ್ರಾಯದ ‘ನೇತ್ರಾವತಿ’ ಹುಲಿ ಇಂದು ಬೆಳಗ್ಗೆ 9:45ಕ್ಕೆ ಅಸುನೀಗಿತು.

ಜೂ.4ರಂದು ‘ರೇವಾ’ ಎಂಬ 6 ವರ್ಷದ ಗಂಡು ಹುಲಿ ಮತ್ತು ನೇತ್ರಾವತಿ ನಡುವೆ ಕಾದಾಟ ನಡೆದಿದ್ದು, ಈ ವೇಳೆ ನೇತ್ರಾವತಿ ಗಾಯಗೊಂಡಿತ್ತು.

‘ರೇವಾ’ ಗಂಡು ಹುಲಿ ಬೆದೆಗೆ ಬಂದಿರುದರಿಂದ ನೇತ್ರಾವತಿಯ ಸಂಪರ್ಕಕ್ಕೆ ಬಂದಾಗ ಅದು ರೇವಾನ ಮೇಲೆರಗಿದೆ. ಎರಡು ಹುಲಿಗಳ ನಡುವೆ ನಡೆದ ಕಚ್ಚಾಟವನ್ನು ಸ್ಥಳದಲ್ಲಿದ್ದ ಅಧಿಕಾರಿ ಸಿಬ್ಬಂದಿ ಹತೋಟಿಗೆ ತಂದು ಗೂಡಿನ ಒಳಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು. ಪಿಲಿಕುಳದ ವೈದ್ಯಾಧಿಕಾರಿ, ವೈಜ್ಞಾನಿಕ ಅಧಿಕಾರಿಗಳು ಶುಶ್ರೂಷೆಯಿಂದ ನೇತ್ರಾವತಿಯ ಆರೋಗ್ಯ ಸುಧಾರಿಸುತ್ತಿತ್ತು. ಮರಳುತ್ತಿದ್ದು, ಆದರೆ ಈ ದಿನ ಬೆಳಗ್ಗೆ ವೈದ್ಯಾಧಿಕಾರಿ ಶುಶ್ರೂಷೆ ನಿಡುತ್ತಿರುವಾಗಲೇ ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿತು.

ನೇತ್ರಾವತಿ (15 ವರ್ಷ) ಮತ್ತು ರೇವಾ (6 ವರ್ಷ) ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಜನಿಸಿದ ಹುಲಿಗಳಾಗಿವೆ. ದೇಹದಲ್ಲಿ ಮೇಲ್ನೋಟಕ್ಕೆ ಗಾಯಗಳಿವೆ. ಆದರೆ ಮರಣವು ಹೋರಾಟದ ತೀವ್ರತೆಯಿಂದ ಹೃದಯಾಘಾತ ಅಗಿರಬೇಕೆಂದು ಅಭಿಪ್ರಾಯ ಪಡಲಾಗಿದೆ.

ಪಿಲಿಕುಳದಲ್ಲಿ ಸದ್ಯ 8 ಹುಲಿಗಳು ಇವೆ.


Spread the love