Home Mangalorean News Kannada News ಪಿಲಿಕುಳ ಪ್ರಾಧಿಕಾರ – ಅಲೋಶಿಯಸ್ ಕಾಲೇಜು ಒಪ್ಪಂದ

ಪಿಲಿಕುಳ ಪ್ರಾಧಿಕಾರ – ಅಲೋಶಿಯಸ್ ಕಾಲೇಜು ಒಪ್ಪಂದ

Spread the love

ಪಿಲಿಕುಳ ಪ್ರಾಧಿಕಾರ – ಅಲೋಶಿಯಸ್ ಕಾಲೇಜು ಒಪ್ಪಂದ

ಮಂಗಳೂರು: ಸಸ್ಯಗಳ ವೈವಿಧ್ಯತೆ, ಸಂರಕ್ಷಣೆ ಹಾಗೂ ಔಷಧೀಯ ಸಸ್ಯಶಾಸ್ತ್ರದ ಕುರಿತ ಅಧ್ಯಯನ ಮತ್ತು ಸಂಶೋಧನೆಯನ್ನು ಉತ್ತೇಜಿಸುವ ಉದ್ದೇಶದಿಂದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು (ಪರಿಗಣಿತ ವಿಶ್ವವಿದ್ಯಾನಿಲಯ)ದ ಸಸ್ಯಶಾಸ್ತ್ರ ವಿಭಾಗ ಮತ್ತು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಸಸ್ಯಕಾಶಿ ವಿಭಾಗದ ನಡುವೆ ಪರಸ್ಪರ ಸಹಕಾರ ಒಪ್ಪಂದಕ್ಕೆ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಎರಡೂ ಸಂಸ್ಥೆಗಳ ಗಣ್ಯರ ಉಪಸ್ಥಿಯಲ್ಲಿ ಸಹಿ ಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಸಂತ ಅಲೋಶಿಯಸ್ ಕಾಲೇಜು(ಪರಿಗಣಿತ ವಿಶ್ವವಿದ್ಯಾನಿಲಯ) ಪೆÇ್ರ. ಸಹ-ಕುಲಾಧಿಪತಿ ರೆ. ಫಾ.ಮೆಲ್ವಿನ್ ಡಿ ಕುನ್ಹಾ, ಸಹಭಾಗಿತ್ವ ಘಟಕದ ಅಧ್ಯಕ್ಷ ಡಾ. ರೋಶನ್, ಸಸ್ಯಶಾಸ್ತ್ರ ವಿಭಾಗದ ಡಾ. ಜ್ಯೋತಿ ಮಿರಾಂಡ, ಶಿಲ್ಪಾ, ಸನಾ ಶೇಕ್ ಮತ್ತು ಅಕ್ಷತಾ.ಆರ್ ಅಮಿನ್ ಹಾಗೂ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ರೀಕಾಂತ್ ರಾವ್, ಆಡಳಿತಾಧಿಕಾರಿ ಡಾ. ಆಶೋಕ್ ಕೆ.ಆರ್., ವೈಜ್ಞಾನಿಕಾಧಿಕಾರಿ ರಾಮಕೃಷ್ಣ ಮರಾಟಿ, ಕ್ಯುರೇಟರ್ ಜಗನ್ನಾಥ್ ಹಾಗೂ ಕಮ್ಯುನಿಟಿ ಮೊಬಿಲೈಸರ್ ಶಿವರಾಮ್, ಹೃತಿಕ್, ವಿಕ್ಟರ್ ಉಪಸ್ಥಿತರಿದ್ದರು.


Spread the love

Exit mobile version