ಪಿಲಿಕುಳ ವಿಜ್ಞಾನ ಕೇಂದ್ರದಿಂದ `ಸ್ವಚ್ಛ ಕರಾವಳಿ, ಸುರಕ್ಷಿತ ಸಾಗರ’ದ ಬಗ್ಗೆ ಜಾಗೃತಿ

Spread the love

ಪಿಲಿಕುಳ ವಿಜ್ಞಾನ ಕೇಂದ್ರದಿಂದ `ಸ್ವಚ್ಛ ಕರಾವಳಿ, ಸುರಕ್ಷಿತ ಸಾಗರ’ದ ಬಗ್ಗೆ ಜಾಗೃತಿ

ಮಂಗಳೂರು,ಸೆ.14(ಕ.ವಾ):– ಕೇಂದ್ರ ಸರ್ಕಾರದ ಭೂ ವಿಜ್ಞಾನ ಸಚಿವಾಲಯ, ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ನವದೆಹಲಿಯ ವಿಜ್ಞಾನ ಪ್ರಸಾರ ಸಂಸ್ಥೆಯ ಮೂಲಕ `ಸ್ವಚ್ಛ ಕರಾವಳಿ, ಸುರಕ್ಷಿತ ಸಾಗರ’ ಎಂಬ ಕೇಂದ್ರ ವಿಷಯದ ಮೇಲೆ ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವಿಜ್ಞಾನ, ಸಂವಹನ, ಪ್ರಚಾರದ ಕುರಿತಾದ ಕುತೂಹಲಿ ಸ್ಕೂಪ್ ಯೋಜನಾ ಸಂಚಾಲಕ ಕೊಳ್ಳೆಗಾಲ ಶರ್ಮ ತಿಳಿಸಿದರು.

ಅವರು ಸೆ.14ರ ಬುಧವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ನೇತೃತ್ವದಲ್ಲಿ ಮಂಗಳೂರಿನ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಹತ್ತು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಆಯ್ದ ಕಾಲೇಜುಗಳಲ್ಲಿ ಈಗಾಗಲೇ ನಡೆಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ, ಮೂಡುಬಿದ್ರೆಯ ಆಳ್ವಾಸ್ ಕಾಲೇಜು, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು, ಸುರತ್ಕಲ್‍ನ ಗೋವಿಂದ ದಾಸ ಕಾಲೇಜು, ಮೂಲ್ಕಿಯ ವಿಜಯಾ ಕಾಲೇಜು, ವಾಮಂಜೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು, ಮಂಗಳೂರಿನ ರಥಬೀದಿಯಲ್ಲಿರುವ ಡಾ. ದಯಾನಂದ ಪೈ – ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಉಡುಪಿ ಜಿಲ್ಲೆಯ ಉಡುಪಿಯ ಪೂರ್ಣಪ್ರಜ್ಞ ಕಾಲೇಜು, ಕುಂದಾಪುರದಲ್ಲಿ ಭಂಡಾರ್‍ಕಾರ್ಸ್ ಆಟ್ರ್ಸ್ ಆಂಡ್ ಸೈನ್ಸ್ ಕಾಲೇಜು ಮತ್ತು ಬಂಟಕಲ್‍ನ ಶ್ರೀ ಮಧ್ವ ವಾದಿರಾಜ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಮ್ಯಾನೇಜ್‍ಮೆಂಟ್‍ಗಳಲ್ಲಿ ಉಪನ್ಯಾಸ ಮತ್ತು ಕಡಲತೀರಗಳ ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊಳ್ಳಲಾಗಿತ್ತು, ಇದರೊಂದಿಗೆ ಇತರೆ ಪೂರಕ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು ಎಂದರು.

ಮಂಗಳೂರು ವಿಶ್ವವಿದ್ಯಾಲಯ, ಮೀನುಗಾರಿಕಾ ಮಹಾವಿದ್ಯಾಲಯ, ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಓಮೊನೊಗ್ರಾಫಿ, ಮಣಿಪಾಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಜಿಯಾಲಾಜಿಕಲ್ ಸೊಸೈಟಿ ಆಫ್ ಇಂಡಿಯಾ ಸಂಸ್ಥೆಗಳಿಂದ ತಜ್ಞರು ಉಪನ್ಯಾಸ ನೀಡಿ ಸಹಕರಿಸಿದರು ಎಂದು ತಿಳಿಸಿದರು.

ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕಾಲೇಜುಗಳ ಸಹಕಾರ, ಸಾರ್ವಜನಿಕರ ಪಾಲ್ಗೊಳ್ಳುವಿಕೆ ಮತ್ತು ಇಂಡಿಯನ್ ಕೋಸ್ಟ್ ಗಾರ್ಡ್, ಜಿಯಾಲಾಜಿಕಲ್ ಸೊಸೈಟಿ ಆಫ್ ಇಂಡಿಯಾ, ಮೀನುಗಾರರ ಸಂಘ ಸಂಸ್ಥೆಗಳ ಪೆÇ್ರೀತ್ಸಾಹ, ಉದ್ಯಮಿಗಳ ಬೆಂಬಲ ಉತ್ತಮವಾಗಿತ್ತು, ನಗರ ಸ್ಥಳೀಯ ಸಂಸ್ಥೆಗಳು ಸಮುದ್ರತೀರದ ತ್ಯಾಜ್ಯ ಸಂಗ್ರಹಣೆಯ ವಿಲೇವಾರಿಯ ಜವಾಬ್ದಾರಿ ವಹಿಸಿದ್ದರು. ಎನ್‍ಎಸ್‍ಎಸ್, ಎನ್‍ಸಿಸಿ, ಸ್ಟೇಟ್ಸ್ ಮತ್ತು ಗೈಡ್ಸ್, ರೆಡ್ ಕ್ರಾಸ್ ವಿದ್ಯಾರ್ಥಿಗಳು ಸಾಗರತೀರ ಸ್ವಚ್ಛತಾ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು ಎಂದು ಹೇಳಿದರು.

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಕೆ.ವಿ. ರಾವ್ ಮಾತನಾಡಿ, ಕೊನೆಯ ಹಂತದಲ್ಲಿ ಎರಡು ದಿನದ ಕಾರ್ಯಕ್ರಮವನ್ನು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ, ಮೊದಲನೆಯ ದಿನದಂದು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಚಿತ್ರಕಲೆ, ಪ್ರಬಂಧ, ಆಶುಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಎರಡನೇ ದಿನದಂದು ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ, ರಸಪ್ರಶ್ನೆ ಮತ್ತು ಪ್ರಥಮ ಹಂತದ ಕಾರ್ಯಕ್ರಮಗಳನ್ನು ನೀಡಲಾಗುವುದು. ಯಶಸ್ವಿಯಾಗಿ ನಿರ್ವಹಿಸಿದ 10 ಕೇಂದ್ರ/ಕಾಲೇಜುಗಳಿಗೆ ಸ್ಮರಣಿಕೆಗಳನ್ನು ನೀಡಲಾಗುವುದು ಎಂದರು.


Spread the love

Leave a Reply

Please enter your comment!
Please enter your name here