ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಆದಿತ್ಯ-ಎಲ್1 ಉಪಗ್ರಹದ ವೀಕ್ಷಣೆ ಲಭ್ಯ 

Spread the love

ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಆದಿತ್ಯ-ಎಲ್1 ಉಪಗ್ರಹದ ವೀಕ್ಷಣೆ ಲಭ್ಯ 

ಮಂಗಳೂರು: ಚಂದ್ರಯಾನ 3ರ ಅಭೂತಪೂರ್ವ ಯಶಸ್ವಿನಿಂದ ಜಾಗತಿಕ ಮನ್ನಣೆಗಳಿಸಿದ ನಂತರ ಇಸ್ರೋ ಇನ್ನೊಂದು ಚಾರಿತ್ರಿಕ ಸಾಧನೆಗೆ ಮುಂದಾಗಿದೆ. ಹತ್ತಿರದ ಚಂದ್ರನಿಂದ ದೂರದ ಸೂರ್ಯನಿಗೆ ಗಮನಹರಿಸಿ ಭಾರತದ ಪ್ರಪ್ರಥಮ ಖಗೋಳ ಸೌರವೀಕ್ಷಣಾಲಯ ಆದಿತ್ಯ-ಎಲ್ 1 ಉಪಗ್ರಹವನ್ನು ಸೆ.2ರಂದು ಬೆಳಿಗ್ಗೆ 11.50ಕ್ಕೆ ಆಂಧ್ರದ ಶ್ರೀಹರಿಕೋಟ ಕೇಂದ್ರದಿಂದ ಉಡಾವಣೆ ಪ್ರಕ್ರಿಯೆ ಮಾಡುವುದಾಗಿ ಇಸ್ರೋ ಈಗಾಗಲೇ ಘೋಷಿಸಿದೆ.

ಪಿಲಿಕುಳ ವಿಜ್ಞಾನ ಕೇಂದ್ರವು ಆದಿತ್ಯ–ಎಲ್1 ಉಪಗ್ರಹದ ಮಾಹಿತಿ ಹಾಗೂ ಪ್ರಯೋಗಗಳ ಬಗ್ಗೆ ಇಸ್ರೋ ವಿಜ್ಞಾನಿಗಳ ನೇತೃತ್ವ ಹಾಗೂ ಭಾಗವಹಿಸುವಿಕೆಯೊಂದಿಗೆ ಜಿಲ್ಲೆಯ ಆಯ್ದ ಕಾಲೇಜುಗಳ ವಿದ್ಯಾರ್ಥಿಗಳಿಗೆ ಎರಡು ದಿನಗಳ ಪ್ರತ್ಯೇಕ ಕಾರ್ಯಗಾರಗಳನ್ನು ಆಯೋಜಿಸಿತ್ತು.

ಈಗ ಆದಿತ್ಯ-ಎಲ್1 ಉಪಗ್ರಹ ಉಡ್ಡಯನ ಸಂದರ್ಭದಲ್ಲಿ ವಿಜ್ಞಾನ ಕೇಂದ್ರ ಅದರ ನೇರಪ್ರಸಾರ ಹಾಗೂ ಭಿತ್ತಿ ಚಿತ್ರ ಪ್ರದರ್ಶನವನ್ನು ಬೆಳಿಗ್ಗೆ 11.30ಕ್ಕೆ ವಿಜ್ಞಾನ ಕೇಂದ್ರದ ಸಭಾಭವನದಲ್ಲಿ ಏರ್ಪಡಿಸಿದೆ. ಉಪಗ್ರಹದ ವಿವರಗಳನ್ನು ಕೇಂದ್ರದ ಸಿಬ್ಬಂದಿ ನೀಡಲಿದ್ದು, ಆಸಕ್ತರು ಭಾಗವಹಿಸುವಂತೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರಾದ ಡಾ. ಕೆ.ವಿ. ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love