ಪಿ, ಯು ಕಾಲೇಜು ಮಂಗಳೂರು ತಾಲೂಕು ಮಟ್ಟದ ಪುಟ್ಬಾಲ್ ಪಂದ್ಯಾವಳಿ

Spread the love

ಪಿ, ಯು ಕಾಲೇಜು ಮಂಗಳೂರು ತಾಲೂಕು ಮಟ್ಟದ ಪುಟ್ಬಾಲ್ ಪಂದ್ಯಾವಳಿ  

ಮಂಗಳೂರು: ಯೇನೆಪೋಯ ಪಿ, ಯು ಕಾಲೇಜು, ಯೇನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ದ ಸಹಯೋಗದೊಂದಿಗೆ ಅಗಷ್ಟ್ 29 ಸೋಮವಾರ ಮಂಗಳೂರು ನಗರ ತಾಲೂಕು ಮಟ್ಟದ ಅಂತರ್ ಕಾಲೇಜು ಮಟ್ಟದ ಪುಟ್ಬಾಲ್ ಪಂದ್ಯಾವಳಿ ಯೇನೆಪೋಯ ಪುಟ್ಬಾಲ್ ಕ್ರೀಡಾಂಗಣ ದೇರಳಕಟ್ಟೆಯಲ್ಲಿ ನಡೆಯಿತು.

ಈ ಪಂದ್ಯಾವಳಿಯಲ್ಲಿ ಒಟ್ಟು 14 ತಂಡಗಳು ಭಾಗವಹಿಸಿದ್ದವು.ರೋಮಂಚಕಾರಿಯಾಗಿ ನಡೆದ ಫೈನಲ್ ಪಂದ್ಯಾಟದಲ್ಲಿ ಯೇನೆಪೋಯ ಪಿ.ಯು ಕಾಲೇಜು ತನ್ನ ಎದುರಾಲಿ ತಂಡ ಸೈಂಟ್ ಅಲೋಸಿಯಸ್ ತಂಡವನ್ನು 4-0 ಅಂತರದಲ್ಲಿ ಸೋಲಿಸಿ ಪ್ರಶಸ್ತಿಯನ್ನು ಗೆದ್ದು ಚಾಂಪಿಯನ್ ಎನಿಸಿತು.

ಪಂದ್ಯಾವಳಿಯ ಅತ್ಯುತ್ತಮ ಸ್ಟ್ರೈಕರ್ ಆಗಿ ಯೇನೆಪೋಯ ಪಿ.ಯು ಕಾಲೇಜಿನ ಟಿ.ಡಿ ತೌಬಾ, ಅತ್ಯುತ್ತಮ ಡಿಫೇಂಡರ್ ಯೇನೆಪೋಯ ಪಿ.ಯು ಕಾಲೇಜಿನ ಶೆಬಿನ್, ಪಂದ್ಯಾವಳಿಯ ಅತ್ಯುತ್ತಮ ಗೋಲ್ ಕೀಪರ್ ಅಲೋಸಿಯಸ್ ಕಾಲೇಜಿನ ವರುಣ್ ಗೌಡ ಪ್ರಶಸ್ತಿ ಪಡೇದರು.


Spread the love

Leave a Reply

Please enter your comment!
Please enter your name here