ಪುಣ್ಯ ಕಾರ್ಯ ಮಾಡಲು ದೈವಾನುಗ್ರಹ ಅಗತ್ಯ – ಬಿ.ಎಂ.ಸುಕುಮಾರ ಶೆಟ್ಟಿ

Spread the love

ಪುಣ್ಯ ಕಾರ್ಯ ಮಾಡಲು ದೈವಾನುಗ್ರಹ ಅಗತ್ಯ – ಬಿ.ಎಂ.ಸುಕುಮಾರ ಶೆಟ್ಟಿ

ಕುಂದಾಪುರ: ಯಾವುದೇ ಪುಣ್ಯ ಕಾರ್ಯಗಳನ್ನು ಮಾಡಬೇಕಿದ್ದರೂ, ದೈವಾನುಗ್ರಹ ಹಾಗೂ ಭಗವಂತನ ಪ್ರೇರಣಿ ಅಗತ್ಯವಾಗಿದೆ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಸ್ವರ್ಣಮುಖಿ ರಂಗಮಂದಿರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ನೂತನ ಬ್ರಹ್ಮರಥ ಕೊಡುಗೆಯನ್ನಾಗಿ ನೀಡಿದ ಉದ್ಯಮಿ ಸುನಿಲ್ ಆರ್ ಶೆಟ್ಟಿ ಅವರನ್ನು ಗೌರವಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಅವರು, ಸಾಧನೆ ಎನ್ನುವುದು ಪ್ರತಿಯೊಬ್ಬ ಸಾಧಕನ ಸೊತ್ತು ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಬ್ರಹ್ಮರಥ ದಾನಿ ಸುನಿಲ್ ಆರ್ ಶೆಟ್ಟಿ, ಬಸ್ರೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ, ಮಂದರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಧನಂಜಯ ಶೆಟ್ಟಿ, ರಥ ಶಿಲ್ಪಿಗಳಾದ ಕೆ.ಲಕ್ಷ್ಮೀನಾರಾಯಣ ಆಚಾರ್ಯ, ಕೆ.ಎಲ್.ರಾಜಗೋಪಾಲ ಆಚಾರ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಗಣೇಶ್ ಕಿಣಿ ಬೆಳ್ವೆ, ಗೋಪಾಲಕೃಷ್ಣ ನಾಡಾ, ಸಂಧ್ಯಾ ರಮೇಶ್, ರತ್ನಾ ರಮೇಶ್ ಕುಂದರ್,ಕೆ.ಪಿ.ಶೇಖರ ಪೂಜಾರಿ, ಹಿಂದಿನ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ.ಮಹೇಶ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಗೋವಿಂದ ನಾಯಕ್, ಕೊಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವರಾಮಕೃಷ್ಣ ಭಟ್, ಅಂಜಲ್ ಎಸ್ ಶೆಟ್ಟಿ, ಅನ್ಮೂಲ್.ಎಸ್ ಶೆಟ್ಟಿ ಇದ್ದರು.

ರಕ್ಷಿತಾ ಗಣ್ಯಶ್ರೀ ಸ್ಪೂರ್ತಿ ಪ್ರಾರ್ಥಿಸಿದರು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯಾನಂದ ಹೋಬಳಿದಾರ್ ಸ್ವಾಗತಿಸಿದರು, ಡಾ.ಅತುಲ್ಕುಮಾರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿಕ್ಷಕರಾದ ಸಚಿನ್ ಶೆಟ್ಟಿ ಹುಂಚನಿ ಹಾಗೂ ರಾಜೀವ್ ಶೆಟ್ಟಿ ನಿರೂಪಿಸಿದರು, ಅರೆ ಶಿರೂರು ಪ್ರೌಢ ಶಾಲೆ ಮುಖ್ಯ ಶಿಕ್ಷಕ ಶಿವರಾಮ್ ಎ ವಂದಿಸಿದರು.


Spread the love