ಪುತ್ತೂರು: ದೇವಸ್ಥಾನದ ಜಾಗದಲ್ಲಿ ಮನೆ ನಿರ್ಮಾಣ ಆರೋಪ, ಪತ್ರಕರ್ತನ ಮನೆ ಕೆಡವಿದ ಅಧಿಕಾರಿಗಳು – ದೂರು ದಾಖಲು

Spread the love

ಪುತ್ತೂರು: ದೇವಸ್ಥಾನದ ಜಾಗದಲ್ಲಿ ಮನೆ ನಿರ್ಮಾಣ ಆರೋಪ, ಪತ್ರಕರ್ತನ ಮನೆ ಕೆಡವಿದ ಅಧಿಕಾರಿಗಳು – ದೂರು ದಾಖಲು

ಪುತ್ತೂರು: ಸುಮಾರು 75 ವರ್ಷಗಳಿಂದ ವಾಸವಾಗಿದ್ದಮನೆಯನ್ನು ಕೆಡವಿ ಹೊಸ ಮನೆ ನಿರ್ಮಾಣ ಮಾಡಿ ಮನೆ ಕಾಮಗಾರಿ ಅರ್ಧದಲ್ಲಿರುವಾಗಲೇ ಅಧಿಕಾರಿಗಳು ಮನೆಯನ್ನು ಕೆಡವಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರಿನ ಹಿರಿಯ ಪತ್ರಕರ್ತ ಶೇಕ್ ಜೈನುದ್ದೀನ್ ಹಾಗೂ ಅವರ ಸಹೋದರ ಕಾರ್ಕೊಟಕ ಪತ್ರಿಕೆಯ ಸಂಪಾದಕ ಇಸಾಬ್ ಮತ್ತು ಕುಟುಂಬ ಕಳೆದ75 ವರ್ಷಗಳಿಂದ ನೆಲ್ಲಿಕಟ್ಟೆಯಲ್ಲಿ ವಾಸವಾಗಿದ್ದರು. ಇವರು ವಾಸವಾಗಿದ್ದ ಮನೆಯ ಜಾಗ ಪುತ್ತೂರಿನ ದೇವಳಕ್ಕೆ ಸಂಬಂಧಿಸಿದ ಜಾಗವಾಗಿತ್ತು ಗೇಣಿ. ರೂಪದಲ್ಲಿ ಇವರ ತಂದೆಯವರಿಗೆ ದೊರಕಿತ್ತು ಅಂದಿನಿಂದ ಇಂದಿನವರೆಗೆ ಕುಟುಂಬ ಅಲ್ಲೇ ವಾಸವಾಗಿತ್ತು ಇತ್ತೀಚೆಗೆ ಹಳೆಯ ಮನೆಯನ್ನು ಕೆಡವಿ ಅಲ್ಲಿ ಹೊಸ ಮನೆ ನಿರ್ಮಾಣದ ಕಾರ್ಯ ನಡೆದಿತ್ತು ಆದರೆ ಹೊಸಮನೆ ನಿರ್ಮಾಣ ಮಾಡುವ ವೇಳೆ ನಗರಸಭೆಯಿಂದ ಪರವಾನಿಗೆಯನ್ನು ಪಡೆದಿರಲಿಲ್ಲ ದೇವಳದಿಂದಲೂ ಒಪ್ಪಿಗೆ ಪಡೆದಿರಲಿಲ್ಲ ಎನ್ನಲಾಗಿದೆ.

ಇವರ ವಿರುದ್ದ ವ್ಯಕ್ತಿಯೊಬ್ಬರು ದೇವಳದ ಕಾರ್ಯ ನಿರ್ವಹಣಾಧಿಕಾರಿಗೆ ದೂರು ರು ನೀಡಿ ಅಕ್ರಮ ಮನೆ ನಿರ್ಮಾಣಕ್ಕೆ ತಡೆ ನೀಡುವಂತೆ ಮನವಿ ಮಾಡಿದ್ದರು. ಕ್ಯೂ ಈ ನಡುವೆ ಜೈನುದ್ದೀನ್ ಕುಟುಂಬಕ್ಕೆ ನೋಟೀಸ್ ಜಾರಿಗೊಳಿಸಲಾಗಿತ್ತು ನೊಟೀಸಿಗೆ ಯಾವುದೇ ಉತ್ತರವನ್ನೂ ಮನೆಯವರ ಕಡೆಯಿಂದ ನೀಡಿರಲಿಲ್ಲ ಆದ್ದರಿಂದ ಮಂಗಳವಾರ ಅಧಿಕಾರಿಗಳು ಪೊಲೀಸ್ ಬಂದೋಬಸ್ತಿನಲ್ಲಿ ಮನೆಯನ್ನು ಕೆಡವಿದ್ದಾರೆ .

ಈ ಕುರಿತು ಶೈಕ್ ಇಸಾಬ್ ಅವರು ಪುತ್ತೂರು ನಗರ ಠಾಣೆಯಲ್ಲಿ ದೂರು ನೀಡಿದ್ದು, ಮನೆ ಕೆಡವಿರುವುದರಿಂದ ತನಗೆ ರೂ 5,00,000/- ಕ್ಕೂ ಮಿಕ್ಕು ನಷ್ಟ ಉಂಟಾಗಿದೆ. ಬಾಡಿಗೆ ಮತ್ತು ನೆಲೆಯಲ್ಲಿ ಅನುಭವಿಸಿಕೊಂಡಿರುವ ಸದ್ರಿ ಜಾಗಕ್ಕೆ ಆಕ್ರಮ ಪ್ರವೇಶ ಮಾಡಲು ವಾಸದ ಮನೆಯನ್ನು ನೆಲಸಮ ಮಾಡಲು ಆರೋಪಿಗೆ ಯಾವುದೇ ರೀತಿಯ ಹಕ್ಕು ಇರುವುದಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.


Spread the love